Advertisement

ಕ್ರಷರ್‌ ಮುಚ್ಚಿಸಿ, ತೊಂದರೆ ತಪ್ಪಿಸಲು ಮನವಿ

03:22 PM Aug 11, 2019 | Team Udayavani |

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ಬನಹಳ್ಳಿ ಗ್ರಾಮದಲ್ಲಿ ರೈತರ ಜಮೀನಿಗಳಿಗೆ ತೊಂದರೆಯಾಗುವಂತೆ ಕ್ರಷರ್‌ಗಳಿಗೆ ನೀಡಿರುವ ಅನುಮತಿಯನ್ನು ನಿರಾಕರಿಸಬೇಕೆಂದು ಅಂಬೇಡ್ಕರ್‌ ಸೇವಾ ಸಮಿತಿ ಆಗ್ರಹಿಸಿದೆ.

Advertisement

ಗ್ರಾಮದ ರೈತ ವೆಂಕಟರಾಮಪ್ಪನವರ ಅದೇ ಗ್ರಾಮದ ಸರ್ವೇ ನಂ.21ರಲ್ಲಿ 45 ವರ್ಷಗಳಿಂದ ಉಳಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಅವರ ಜಮೀನಿಗೆ ತೊಂದರೆಯಾಗುವ ರೀತಿಯಲ್ಲಿ ಸುಧಾಕರ್‌ಗೌಡ, ಸಂಧ್ಯಾ ಹಾಗೂ ಕೃಷ್ಣಮೂರ್ತಿ ಅವರ ಕ್ರಷರ್‌ಗಳಿಗೆ ಅನುಮತಿ ನೀಡಲಾಗಿದ್ದು, ನಿರಾಕರಿಸ ಬೇಕೆಂದು ಅಂಬೇಡ್ಕರ್‌ ಸೇವಾ ಸಮಿ ತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್‌ ಪ್ರತಿಭಟನೆಯ ಮೂಲಕ ಒತ್ತಾಯಿಸಿದರು.

ಬನಹಳ್ಳಿ ಗ್ರಾಮದ ದರಕಾಸ್ತು ಕಮಿ ಟಿಯ ಅಧ್ಯಕ್ಷರು ಜಮೀನು ಒಂದು ಸ್ಥಳದಲ್ಲಿ ಹಾಗೂ ಜಮೀನು ಪತ್ರಗಳನ್ನು ಒಂದು ಸ್ಥಳದಲ್ಲಿ ಮಾಡಿಸಿದ್ದು, ಈಗ ಇವರ ಜಮೀನಿಗೆ ಸರಿಯಾದ ದಾಖಲೆ ಗಳು ಇಲ್ಲ. ಇವರು ಬಡ ರೈತರಾಗಿದ್ದು, ಈ ಜಮೀನನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಕೂಡಲೇ ಈ ಜಮೀ ನಿನ ದಾಖಲೆಗಳನ್ನು ಸರಿಪಡಿಸಿಕೊಡಲು ಹಲವು ಬಾರಿ ಅರ್ಜಿ ಹಾಕಿದರೂ ಅಧಿಕಾರಿಗಳು ಸ್ಪಂದಿಸದೇ ಇರುವುದು ಖಂಡನೀಯ ಎಂದು ಆರೋಪಿಸಿದರು.

ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್‌, ರಾಜ್ಯ ಕಾರ್ಯದರ್ಶಿ ಬೇತ ಮಂಗಲ ವಿಜಯ್‌ಕುಮಾರ್‌, ರಾಜ್ಯ ಯುವಘಟಕ ಅಧ್ಯಕ್ಷ ತೊರಲಕ್ಕಿ ನವೀನ್‌ಮಹಾರಾಜ್‌, ತನ್ವಿರ್‌, ಜಿಲ್ಲಾಧ್ಯಕ್ಷ ಕಾಮ ಧೇನಹಳ್ಳಿ ಶ್ರೀನಿವಾಸ್‌, ಜಿಲ್ಲಾ ಉಪಾಧ್ಯಕ್ಷ ಸುನೀಲ್ ಕುಮಾರ್‌, ಶಶಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಹೇಮಂತ್‌, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಸಂಜಯ್‌, ಯುವ ಘಟಕ ಕಾರ್ಯ ದರ್ಶಿ ಮುದುವತ್ತಿ ಅಶೋಕ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next