Advertisement

ಮೇ 4ರವರೆಗೆ ಘಾಟಿ ದೇಗುಲ ಬಂದ್‌

01:37 PM Apr 22, 2021 | Team Udayavani |

ದೊಡ್ಡಬಳ್ಳಾಪುರ: ಕೋವಿಡ್‌-19 2ನೇ ಅಲೆತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದಹಿನ್ನೆಲೆ ತಾಲೂಕಿನ ಪ್ರಸಿದ್ದ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಸ್ವಾಮಿದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ಮೇ4ರವರೆಗೆ ನಿಷೇಧಿಸಲಾಗಿದೆ ಎಂದು ದೇವಾಲಯದಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.

Advertisement

ಈಬಗ್ಗೆ ಮಾಹಿತಿ ನೀಡಿ, ಸಂಪ್ರದಾಯದಂತೆದೇವಾಲಯದಲ್ಲಿ ಪ್ರತಿನಿತ್ಯ ದೇವರಿಗೆ ನಡೆಯುವಅಭಿಷೇಕ, ಪೂಜೆ ಸೇರಿ ಎÇÉಾ ವಿಧಿ ವಿಧಾನಗಳುನಡೆಯಲಿವೆ.  ಆದರೆ ದೇವರ ದರ್ಶನಕ್ಕೆ ಮಾತ್ರಸಾರ್ವಜನಿಕರಿಗೆ ಅವಕಾಶ ಇಲ್ಲ. ಭಕ್ತಾದಿಗಳುಕೋವಿಡ್‌-19 ವೈರಸ್‌ ತಡೆಯುವ ಸಲುವಾಗಿ ಸರ್ಕಾರಕೈಗೊಳ್ಳಲಾಗಿರುವ ಕ್ರಮ ಪಾಲಿಸಲು ಸಹಕರಿಸಬೇಕುಎಂದು ತಿಳಿಸಿದ್ದಾರೆ.

ಸಾಮೂಹಿಕ ವಿವಾಹ ಮುಂದೂಡಿಕೆ: ಏ.29ರಂದುಘಾಟಿ ಕ್ಷೇತ್ರದಲ್ಲಿ ದೇವಾಲಯದ ವತಿಯಿಂದನಡೆಯಬೇಕಿದ್ದ ಸಪ್ತಪದಿ ಉಚಿತ ಸಾಮೂಹಿಕ ವಿವಾಹಧಾರ್ಮಿಕ ದತ್ತಿ ಇಲಾಖೆ ಆದೇಶದಂತೆಮುಂದೂಡಲಾಗಿದೆ. ಕೋವಿಡ್‌-19 ನಿಯಂತ್ರಣಕ್ಕೆಬಂದ ನಂತರ ದಿನಾಂಕ ನಿಗದಿಪಡಿಸಿ ವಿವಾಹನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next