Advertisement

ಪುಲ್ವಾಮಾ ದಾಳಿಯ ಮಾಸ್ಟರ್‌ ಮೈಂಡ್‌ ನಿಕಟವರ್ತಿ ಸಜ್ಜದ್‌ ಖಾನ್‌ ಸೆರೆ

07:19 AM Mar 22, 2019 | Team Udayavani |

ಹೊಸದಿಲ್ಲಿ : 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದ  ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಮುದಸ್ಸಿರ್‌ ನ ನಿಕಟವರ್ತಿ, ಜೈಶ್‌ ಎ ಮೊಹಮ್ಮದ್‌ ಉಗ್ರ, ಸಜ್ಜದ್‌ ಖಾನ್‌ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ.

Advertisement

ಪುಲ್ವಾಮಾ ನಿವಾಸಿಯಾಗಿರುವ 27ರ ಹರೆಯದ ಸಜ್ಜದ್‌ ಖಾನ್‌ ನನ್ನು ಇಲ್ಲಿನ ಲಾಜಪತ್‌ ರಾಯ್‌ ಮಾರ್ಕೆಟ್‌ ಸಮೀಪ  ನಿನ್ನೆ ಗುರುವಾರ ತಡ ರಾತ್ರಿ ಬಂಧಿಸಲಾಯಿತೆಂದು ಪೊಲೀಸ್‌ ಡೆಪ್ಯುಟಿ ಕಮಿಷನರ್‌ ಪ್ರಮೋದ್‌ ಸಿಂಗ್‌ ಕುಶವಾಹ್‌ ತಿಳಿಸಿದ್ದಾರೆ. 

ದಿಲ್ಲಿಯಲ್ಲಿ ಜೈಶ್‌ ಸ್ಲಿಪರ್‌ ಸೆಲ್‌ ಸ್ಥಾಪಿಸುವ ಕೆಲಸವನ್ನು  ಸಜ್ಜದ್‌ ಗೆ ಮುದಸ್ಸಿರ್‌ ಒಪ್ಪಿಸಿದ್ದ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next