Advertisement
ನಗರದ ದಂಟರಮಕ್ಕಿ ನಿವಾಸಿಯಾಗಿರುವ ವಿಜಯಕುಮಾರ್ ಈ ಗಡಿಯಾರ ತಯಾರಿಸಿದ ವ್ಯಕ್ತಿ.ಇವರು ಪಟ್ಟಣದ ಷರೀಫ್ ಗಲ್ಲಿಯಲ್ಲಿ ತಮ್ಮದೇ ಆದ ವಿಜಯ ವಾಚ್ ವರ್ಕ್ಸ್ ಅಂಗಡಿಯನ್ನು 20 ವರ್ಷಗಳಿಂದ ನಡೆಸುತ್ತಿದ್ದಾರೆ.
Related Articles
Advertisement
ಸಿದ್ಧಹಸ್ತರು: ವಿಶೇಷ ಚೇತನ ವ್ಯಕ್ತಿಯಾದರೂ ಸಹ ಯಾರ ಮೇಲೂ ಅವಲಂಬಿತರಾಗದ ವಿಜಯಕುಮಾರ್, ವಾಚ್ ರಿಪೇರಿ ಮಾಡುವುದನ್ನು ಕಲಿತು ಅದರಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಗಡಿಯಾರ ರಿಪೇರಿಯಲ್ಲಿ ಸಿದ್ಧಹಸ್ತರಾಗಿರುವ ಇವರು, ಯಾವುದೇ ರೀತಿಯ ವಾಚ್ ಮತ್ತು ಗಡಿಯಾರವನ್ನು ರಿಪೇರಿ ಮಾಡುತ್ತಾರೆ. ನಗರದ ಎಲ್ಲಿಯೂ ರಿಪೇರಿಯಾಗದೆ ಇರುವಂತಹ ವಾಚುಗಳನ್ನು ಸಹ ಇವರು ಸಿದ್ಧಪಡಿಸುತ್ತಾರೆ. ಕೇವಲ ಗಡಿಯಾರ ದುರಸ್ತಿ ಮಾಡುವುದಷ್ಟೇ ಅಲ್ಲದೆ, ವಿವಿಧ ಮಾದರಿಯ ಆಕರ್ಷಕ ಗಡಿಯಾರಗಳ ತಯಾರಿಕೆಯಲ್ಲಿಯೂ ಇವರು ಸಿದ್ಧಹಸ್ತರಾಗಿದ್ದಾರೆ. ಇವರು ಸಿದ್ಧಪಡಿಸಿದ ಗಡಿಯಾರಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬ ಮಾತುಗಳು ಸಹ ಗ್ರಾಹಕರಿಂದ ಕೇಳಿ ಬರುತ್ತವೆ.
ಬಲ್ಬ್ ನಿಂದ ಗಡಿಯಾರ: ಹಿಂದಿನ ಕಾಲದಲ್ಲಿ ಸಮಯ ತಿಳಿಯಲು ಮರಳನ್ನು ಬಳಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಅದೇ ರೀತಿಯಲ್ಲಿ ವಿಜಯಕುಮಾರ್ ಬಲ್ಬ್ ಗಳನ್ನು ಬಳಸಿ ಗಡಿಯಾರ ಸಿದ್ಧಪಡಿಸಿದ್ದಾರೆ. ಎರಡು ಖಾಲಿ ಬಲ್ಬ್ಗಳನ್ನು ಒಂದರ ಕೆಳಗೊಂದು ಇಟ್ಟು ಒಂದು ಬಲ್ಬ್ನಲ್ಲಿ ಮರಳನ್ನು ತುಂಬಿಸಿದ್ದಾರೆ. ಮರಳು ಮತ್ತೂಂದು ಬಲ್ಬ್ಗೆ ಬೀಳುತ್ತಿರುತ್ತದೆ. ಮರಳು ಪ್ರತೀ ಗಂಟೆಗೊಮ್ಮೆ ಖಾಲಿಯಾಗುತ್ತದೆ. ವಿಜಯಕುಮಾರ್ ಸಿದ್ಧಪಡಿಸಿರುವ ಈ ಮಾದರಿಯ ಗಡಿಯಾರವನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಾಲಯದ ಆವರಣದಲ್ಲಿರುವ ವಸ್ತು ಪ್ರದರ್ಶನದಲ್ಲಿಯೂ ಇಡಲಾಗಿದೆ.
ಮಾತು ಬಾರದಿದ್ದರೂ ಸಹ ವಿಜಯಕುಮಾರ್ ಅಂಗಡಿಯಲ್ಲಿ ಸ್ವತಃ ವ್ಯವಹಾರ ಮಾಡುತ್ತಾರೆ. ಬರುವ ಗ್ರಾಹಕರೊಂದಿಗೆ ತಮ್ಮದೇ ಶೈಲಿಯಲ್ಲಿ ವ್ಯವಹರಿಸುವ ಅವರು, ಒಂದು ವೇಳೆ ಗ್ರಾಹಕರಿಗೆ ಅರ್ಥವಾಗದಿದ್ದಲ್ಲಿ ಬರೆದು ತೋರಿಸಿ ಸಂವಹನ ನಡೆಸುತ್ತಾರೆ.
ವಿಜಯಕುಮಾರ್ ಅವರಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಮಗ ಪವನ್ ಸಹ ಅಂಗಡಿಯಲ್ಲಿಯೇ ಇದ್ದು ತಂದೆಗೆ ವ್ಯವಹಾರದಲ್ಲಿ ಸಹಕರಿಸುತ್ತಿದ್ದಾರೆ. ಕರಾಟೆಯಲ್ಲಿ ಸಾಧನೆ ಮಾಡಿರುವ ವಿಜಯಕುಮಾರ್ ಬ್ಲ್ಯಾಕ್ ಬೆಲ್ಟ್ ಪಟು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದದಾರೆ. ಅಲ್ಲದೇ ಕುಂಚದಲ್ಲಿ ಚಿತ್ರ ಕಲಾವಿದರೂ ಹೌದು.
ಸರ್ಕಾರದಿಂದ ನೆರವು ಪಡೆದಿಲ್ಲ: ವಿಶೇಷ ಚೇತನರಾಗಿರುವ ವಿಜಯಕುಮಾರ್ ಸರ್ಕಾರದಿಂದ ನೀಡುವ ಅಂಗವಿಕಲ ವೇತನವನ್ನು ಮಾತ್ರ ಪಡೆಯುತ್ತಿದ್ದಾರೆ. ಅದನ್ನು ಹೊರತುಪಡಿಸಿ ಬೇರಾವುದೇ ನೆರವನ್ನು ಸರ್ಕಾರದಿಂದ ಈವರೆಗೂ ಪಡೆದುಕೊಂಡಿಲ್ಲ.