Advertisement

Clinical trial; ಆತಂಕ, ಒತ್ತಡ ನಿವಾರಣೆಗೆ ಗಾಂಜಾ ರಾಮಬಾಣ?

12:47 AM Aug 11, 2024 | Team Udayavani |

ಹೊಸದಿಲ್ಲಿ: ಗಾಂಜಾ ಹಿಂದಿನಿಂದಲೂ ಔಷಧದ ಮೂಲಿಕೆಯಾಗಿ ಬಳಕೆಯಾ ಗುತ್ತಿದ್ದು, ಹೊಸ ಸಂಶೋಧನೆಯಿಂದ ಮತ್ತೂಂದು ಲಾಭವು ಜನರಿಗಾಗಲಿದೆ. ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾನಿಲಯದ ಸಂಶೋಧಕರು ಕೈಗೊಂಡಿರುವ ಅಧ್ಯಯನದ ಪ್ರಕಾರ, ಗಾಂಜಾದಲ್ಲಿನ “ಕ್ಯಾನಬಿಜೆರಾಲ್‌'(ಸಿಬಿಜಿ) ಸಂಯುಕ್ತ ವಸ್ತು ಆತಂಕ, ಒತ್ತಡ ನಿವಾರಣೆಗೆ ರಾಮಬಾಣವಾಗಲಿದೆ!

Advertisement

ಸಂಶೋಧಕರು ಈ ಕುರಿತು ಪ್ರಯೋಗ ನಡೆಸುತ್ತಿದ್ದು, ಆತಂಕ ಮತ್ತು ಒತ್ತಡವನ್ನು ತಗ್ಗಿಸುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ದೊರತಿದೆ ಮತ್ತು ಈ ಗಾಂಜಾ ಹೆಚ್ಚು ಪರಿಣಾಮಕಾರಿ ಯಾಗಿರುವುದನ್ನು ಕಂಡುಕೊಳ್ಳಲಾಗಿದೆ.

“ಸಿಬಿಜಿ’ಯನ್ನು ಎಲ್ಲ ಗಾಂಜಾಗಳ ತಾಯಿ ಎಂದು ಕರೆಯಲಾಗುತ್ತಿದೆ. ಯಾಕೆಂದರೆ ಅದು ಸುಲಭವಾಗಿ ಮತ್ತು ತ್ವರಿತವಾಗಿ ಸಿಬಿಡಿ(ಕ್ಯಾನಬಿಡಿಯಾಲ್‌) ಮತ್ತು ಟಿಎಚ್‌ಸಿ(ಟೆಟ್ರಾಹೈಡ್ರೊಕ್ಯಾನಬಿನಾಲ್‌) ಎರಡರಲ್ಲೂ ಚಯಾಪಚಯಗೊಳ್ಳುತ್ತದೆ. ಗಾಂಜಾ ದಿಂದ ತೆಗೆಯಲಾದ ಸಿಬಿಡಿ ತೈಲವನ್ನು ನೋವು ನಿವಾರಕವಾಗಿಯೂ, ಟಿಎಚ್‌ಸಿಯನ್ನು ಕೀಮೋಥೆರಪಿ ಪ್ರೇರಿತ ವಾಕರಿಕೆ ಮತ್ತು ವಾಂತಿ ನಿಯಂತ್ರಿಸಲು ಬಳಸಲಾಗುತ್ತಿದೆ. ಸಿಬಿಜಿ ಹೆಚ್ಚು ನಶೆಯನ್ನುಂಟೂ ಮಾಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next