Advertisement

Union Budget ದೇಶದಲ್ಲಿ ಬರಲಿದೆ ಹವಾಮಾನ ತೆರಿಗೆ ವ್ಯವಸ್ಥೆ!

11:03 PM Jul 23, 2024 | Team Udayavani |

ಜಗತ್ತಿನಲ್ಲಿ ಹೆಚ್ಚುತ್ತಿರುವ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಇಂಗಾಲದ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಶ್ರಮಿಸುತ್ತಿವೆ. ಜತೆಗೆ ಈ ನಿಟ್ಟಿನಲ್ಲಿ ಅಗತ್ಯ ವಿತ್ತೀಯ ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ತೆರಿಗೆ ವ್ಯವಸ್ಥೆಯನ್ನೂ ಜಾರಿಗೊಳಿಸಿವೆ. ಹವಾಮಾನ ರಕ್ಷಿಸಿ, ಪರಿಸರ ಸಹ್ಯ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ನೆರವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

Advertisement

ಇದರಿಂದ ಏನು ಪ್ರಯೋಜನ?:
ಪರಿಸರ ಸಹ್ಯವಾಗಿರುವ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ನೆರವಾಗಲಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಪ್ರತಿಕೂಲ ಪರಿಣಾಮ ತಡೆವ ನಿಟ್ಟಿನಲ್ಲಿ ಬಾಂಡ್‌ಗಳ ಬಿಡುಗಡೆ ಸೇರಿದಂತೆ ಹಲವು ವಿತ್ತೀಯ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತದೆ.

ಯಾವ ರಾಷ್ಟ್ರಗಳಲ್ಲಿ ಹವಾಮಾನ ತೆರಿಗೆ?
ದಕ್ಷಿಣ ಆಫ್ರಿಕಾ, ಕೊಲಂಬಿಯಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್‌, ಸಿಂಗಾಪುರ, ಕೆನಡಾ, ಮೆಕ್ಸಿಕೋ, ಐರೋಪ್ಯ ಒಕ್ಕೂಟದ ಕೆಲವು ರಾಷ್ಟ್ರಗಳಲ್ಲಿ ಹವಾಮಾನ ತೆರಿಗೆ ಜಾರಿಯಲ್ಲಿದೆ. ಇನ್ನು ಕೆಲವು ದೇಶಗಳು ಇಂಥ ತೆರಿಗೆ ಜಾರಿ ಮಾಡಲು ಚಿಂತನೆ ನಡೆಸಿವೆ.

Advertisement

Udayavani is now on Telegram. Click here to join our channel and stay updated with the latest news.

Next