Advertisement

ಹವಾಮಾನ ವೈಪರೀತ್ಯ: ಜೊಳ್ಳಾದ ಭತ್ತದ ಪೈರು

07:58 PM Mar 28, 2021 | Team Udayavani |

ಗಂಗಾವತಿ: ತಾಲೂಕಿನಾದ್ಯಂತ ಜನವರಿಗೂ ಮುನ್ನ ನಾಟಿ ಮಾಡಿದ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಸರಿಯಾಗಿ ಕಾಳು ಕಟ್ಟದೇ ಜೊಳ್ಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ನವೆಂಬರ್‌, ಡಿಸೆಂಬರ್‌ ಕೊನೆಯಲ್ಲಿ ಆನೆಗೊಂದಿ ರಾಂಪೂರ ಮಲ್ಲಾಪೂರ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ನಾಟಿ ಮಾಡಲಾಗಿದ್ದು, ಈ ಭಾಗದಲ್ಲಿ ಆರ್‌ಎನ್‌ಆರ್‌ ಮತ್ತು ಸಂಪದ ಭತ್ತ ಬೆಳೆ ಶೇ. 70ರಷ್ಟು ಕಾಳು ಕಟ್ಟದೇ ಜೊಳ್ಳಾಗಿದೆ.

ಈ ಕುರಿತು ರೈತರು ಕೃಷಿ ಇಲಾಖೆ ಮತ್ತು ಕೃಷಿ ಸಂಶೋಧನಾ ಮತ್ತು ವಿಜ್ಞಾನ ಕೇಂದ್ರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೃಷಿ ಅ ಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಆನೆಗೊಂದಿ, ರಾಂಪೂರ, ಮಲ್ಲಾಪೂರ, ಕಡೆಬಾಗಿಲು ಭಾಗದ ಭತ್ತ ಗದ್ದೆ ಪರಿಶೀಲನೆ ಮಾಡಿ ರೈತರಿಂದ ಅಗತ್ಯ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ| ತಿಪ್ಪೇಸ್ವಾಮಿ, ಕೃಷಿ ವಿಜ್ಞಾನಿಗಳಾದ ಡಾ| ಮಹಾಂತ ಶಿವಯೋಗಯ್ಯ, ಡಾ| ಪರಮೇಶ, ಡಾ| ರಾಧಾ, ಕೃಷಿ ಅಧಿ ಕಾರಿ ಡಾ| ದೀಪಾ ಎಚ್‌., ಸಹಾಯಕ ಕೃಷಿ ಅಧಿ ಕಾರಿ, ಆರ್‌.ಎಚ್‌. ಭಾಗವಾನ, ರೈತರಾದ ಭರಮಪ್ಪ, ಡಿ. ಭಾಸ್ಕರ್‌ ಸತ್ಯನಾರಾಯಣ, ಲಕ್ಷ ¾ಣ ನಾಯಕ್‌, ತಿರುಕಪ್ಪ ಸೇರಿ ಸ್ಥಳೀಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next