Advertisement
ರಾಜ್ಯ, ನಗರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆಯುತ್ತಿದ್ದ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ದಿಶಾ ಬಂಧನದ ವೇಳೆ ಮನೆಯಲ್ಲಿ ತಂದೆ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ತಾಯಿ ಒಬ್ಬರೇ ಇದ್ದರು ಎಂದು ಪೊಲೀಸರು ಹೇಳಿದ್ದರು.
Related Articles
Advertisement
ಯಾರೀ ದಿಶಾ ರವಿ?: ದಿಶಾ ರವಿ(21) ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಸಸ್ಯಾಧಾರಿತ ಆಹಾರ ತಯಾರಿಕಾ ಕಂಪನಿಯೊಂದರಲ್ಲಿ ಕ್ಯುಲಿನರಿ ಎಕ್ಸ್‌ಪೀರಿ ಯೆನ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅವರಿಂದ ಪ್ರೇರಣೆ ಪಡೆದು, ಹವಾಮಾನ ವೈಪರೀತ್ಯದ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನೂ ದಿಶಾ ಮಾಡುತ್ತಿದ್ದರು. ಜತೆಗೆ, ವಿವಿಧ ಯುವಜನ ಆಧಾರಿತ ಪರಿಸರ ಸಂಘಟನೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಪರಿಸರ ಸಂರಕ್ಷಣೆಗಾಗಿ ರೂಪಿಸಲ್ಪಟ್ಟ “ಫ್ರೈಡೆ ಫಾರ್ ಫ್ಯೂಚರ್’ ಎಂಬ ಕ್ಯಾಂಪೇನ್‌ನ ಸ್ಥಾಪಕರಲ್ಲಿ ದಿಶಾ ಕೂಡ ಒಬ್ಬರು.
ಇದನ್ನೂ ಓದಿ: ಟೂಲ್‌ಕಿಟ್ ಎಂದರೇನು?
ಕೋರ್ಟ್‌ನಲ್ಲಿ ಕಣ್ಣೀರಿಟ್ಟ ದಿಶಾ: ಭಾರತ ಸರ್ಕಾರದ ವಿರುದ್ಧದ ದೊಡ್ಡ ಸಂಚಿನಲ್ಲಿ ಆಕೆ ಭಾಗಿಯಾಗಿದ್ದು, ಖಲಿಸ್ತಾನಿ ಪ್ರತ್ಯೇಕತಾವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಸರ್ಕಾರಿ ವಕೀಲರು ಕೋರ್ಟ್‌ನಲ್ಲಿ ವಾದಿಸುತ್ತಿದ್ದಂತೆ, ದಿಶಾ ಕಣ್ಣೀರಿಟ್ಟಿದ್ದಾರೆ. “ನಾನು ಯಾವುದೇ ಸಂಚು ರೂಪಿಸಿಲ್ಲ, ಯಾವ ಸಂಚಿನ ಭಾಗವೂ ಆಗಿಲ್ಲ. ನನಗೆ ಅಂಥ ಯಾವುದೇ ಸಂಘಟನೆ ಗೊತ್ತಿಲ್ಲ. ರೈತರೇ ನಮ್ಮ ಭವಿಷ್ಯ. ಅವರು ನಮಗೆ ಅನ್ನ ನೀಡುವವರು ಎಂಬ ಕಾರಣಕ್ಕಾಗಿ ನಾನು ಕೇವಲ ಅನ್ನದಾತರಿಗೆ ಬೆಂಬಲ ನೀಡುತ್ತಿದ್ದೆ. ಆ ಟೂಲ್‌ಕಿಟ್ ಸೃಷ್ಟಿಸಿದ್ದು ನಾನಲ್ಲ. ನಾನು ಫೆ.3ರಂದು ಟೂಲ್ ಕಿಟ್‌ನಲ್ಲಿ ಎರಡು ತಿದ್ದುಪಡಿಗಳನ್ನು ತಂದಿದ್ದೆ ಅಷ್ಟೆ’ ಎಂದು ಹೇಳಿದ್ದಾರೆ.