Advertisement

ವಾಹನದ ಫೋಟೋ ಕಳಿಸಿದ್ರೆ ಬಹುಮಾನ!

01:29 PM Nov 22, 2017 | |

ನವದೆಹಲಿ: ಅಡ್ಡಾದಿಡ್ಡಿಯಾಗಿ ಕಾರು ಪಾರ್ಕ್‌ ಮಾಡಿದ ವಾಹನಗಳ ಫೋಟೊ ತೆಗೆದು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ. ವಾಹನಗಳ ಮಾಲೀಕರಿಂದ ಪಡೆಯುವ 500 ರೂ. ದಂಡದಲ್ಲಿ ಶೇ.10ರಷ್ಟನ್ನು ಬಹುಮಾನದ ರೂಪದಲ್ಲಿ ಪಡೆಯಿರಿ. ಈ ಘೋಷಣೆ ಮಾಡಿದ್ದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ. 
 
ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳ ಫೋಟೊ ತೆಗೆದು, ಬಹುಮಾನ ಗೆಲ್ಲುವಂಥ ಅವಕಾಶ ಪರಿಚಯಿಸಲಾಗುತ್ತಿದೆ’ ಎಂದಿದ್ದಾರೆ. ಇದೇ ವೇಳೆ, ನಮ್ಮ ಸಚಿವಾಲಯದ ಎದುರೇ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಇದರಿಂದ ನನಗೆ ನಾಚಿಕೆಯಾಗುತ್ತದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next