Advertisement

ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ

04:25 PM Apr 05, 2022 | Team Udayavani |

ಕೋಲಾರ: ಟೆಂಡರ್‌ ಅವಧಿ ಮುಗಿದ ವಾಣಿಜ್ಯ ಮಳಿಗೆಗಳ ತೆರವಿಗೆ ನೀಡಿದ್ದ 45 ದಿನಗಳ ಗಡುವು ಮುಗಿದ ಹಿನ್ನಲೆಯಲ್ಲಿ ಸೋಮವಾರ ಬೆಳಗ್ಗೆ ಪೊಲೀಸ್‌ ಇಲಾಖೆ ನೆರವಿನೊಂದಿಗೆ ಕಾರ್ಯಚರಣೆ ನಡೆಸಿ, 15 ಅಂಗಡಿಗಳನ್ನು ತೆರವು ಮಾಡಿಸಿ ನಗರಸಭೆ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತ ಪ್ರಸಾದ್‌ ತಿಳಿಸಿದರು.

Advertisement

ನಗರಸಭೆ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಗರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣಗಳ 220 ಮಳಿಗೆಗಳ ಪೈಕಿ 205 ಮಳಿಗೆಗಳನ್ನು ತೆರವು ಮಾಡಲಾಗಿತ್ತು. ಉಳಿದ ಅಂಗಡಿಗಳ ತೆರವಿಗೆ ನೋಟಿಸ್‌ ನೀಡಲಾಗಿತ್ತು. ಈ ಸಂಬಂಧವಾಗಿ ಹಾಲಿ ಮಳಿಗೆಯಲ್ಲಿನ ಅಂಗಡಿ ಮಾಲೀಕರು ಹೂಡಿದ್ದ ದಾವೆಯ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರೆದಿದ್ದು, ಇನ್ನು ಯಾವೂದೇ ತೀರ್ಪು ಬಂದಿಲ್ಲ ಎಂದರು.

ಯುಗಾದಿ ಹಬ್ಬಕ್ಕೆ ಗಡುವು ಪೂರ್ಣ: ಈ ಅಂಗಡಿಗಳಿಗೆ ಸಂಬಂಧ ಪಟ್ಟಂತೆ ಈ ಹಿಂದೆ ಹರಾಜಿನಲ್ಲಿ ಬಿಡ್‌ದಾರರು ಮಳಿಗೆಯನ್ನು ಪಡೆದಿದ್ದಾರೆ. ನ್ಯಾಯಾಲಯದಲ್ಲಿ ಈ ಸಂಬಂಧವಾಗಿ 15 ಮಂದಿ ಪ್ರಕರಣ ದಾಖಲು ಮಾಡಿರುವುದರಿಂದ ತೆರವು ಮಾಡಿಸಲು ಕಾನೂನು ತೊಡುಕುಗಳಿದ್ದವು, ಈಗ ಸ್ವಾಧೀನಕ್ಕೆ ಪಡೆಯಲು ನೀಡಿದ್ದ ನೋಟಿಸ್‌ ಯುಗಾದಿ ಹಬ್ಬಕ್ಕೆ ಗಡುವು 45 ದಿನಗಳು ಪೂರ್ಣಗೊಂಡಿತ್ತು. ಆದರೆ, ಹಬ್ಬವೆಂದು, ಮಾರನೇ ದಿನ ಭಾನುವಾರ ರಜೆ ದಿನವೆಂದು ಎರಡು ದಿನಗಳು ಮಳಿಗೆ ಯಲ್ಲಿದ್ದ ವಸ್ತುಗಳನ್ನು ತೆರವು ಮಾಡಲು ಅವಕಾಶ ನೀಡಿದ್ದು, ಸೋಮವಾರ ಬೆಳಗ್ಗೆ ಪೊಲೀಸ್‌ ವರಿಷ್ಠಾಧಿ ಕಾರಿಗಳಿಗೆ ಭದ್ರತೆ ಕೋರಿ, ಪೊಲೀಸ್‌ ಸಿಬ್ಬಂದಿಗಳ ನೆರವಿ ನೊಂದಿಗೆ ಶತಶೃಂಗ ಕಾಂಪ್ಲೇಕ್ಸ್‌ನಲ್ಲಿ 12 ಮಳಿಗೆಗಳು ಮತ್ತು ಗಂಗೋತ್ರಿ ಕಾಂಪ್ಲೆಕ್ಸ್‌ನಲ್ಲಿ 3 ಮಳಿಗೆಗಳು ಸೇರಿ ಒಟ್ಟು 15 ಮಳಿಗೆಗಳನ್ನು ತೆರವು ಮಾಡಿಸಿ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ನ್ಯಾಯಾಲಯದ ತೀರ್ಪಿನ ಪ್ರಕಾರ ಮುಂದುವರೆ ಯಬೇಕಾಗಿದೆ. ನಂತರ ನಗರಸಭೆಯ ಕಾನೂನು ಸಲಹೆಗಾರರು ನೀಡುವ ಸೂಚನೆಗಳ ಪ್ರಕಾರ ಹೋಗಬೇಕಾಗಿದೆ ಎಂದು ಹೇಳಿದರು. ತೆರವು ಕಾರ್ಯಚರಣೆಯಲ್ಲಿ ಕಂದಾಯಾಧಿಕಾರಿ ಚಂದ್ರು, ಕಂದಾಯ ನಿರೀಕ್ಷಕರಾದ ತ್ಯಾಗರಾಜ್‌ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಅದೇ ರೀತಿ ಪೊಲೀಸ್‌ ಇಲಾಖೆಯ ಎಸ್‌.ಐ.ಅಣ್ಣಯ್ಯಪ್ಪ ಮತ್ತು ಸಿಬ್ಬಂದಿ ವರ್ಗದವರು ಉತ್ತಮ ಸಹಕಾರ ನೀಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿದರು.

ಪ್ರಶ್ನೆಯೊಂದಕ್ಕೆ ಹೌದು ಈ ಮಳಿಗೆಗಳ ತೆರವು ಸಂಬಂಧವಾಗಿ ಕೆಲವು ನಗರಸಭಾ ಸದಸ್ಯರು ಈ ಹಿಂದೆ ನೀಡಿದ್ದವರಿಗೆ ಮುಂದುವರೆಸಬೇಕು ಎಂದು ಈ ಹಿಂದೆ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದುದು ನಿಜ. ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರಿಂದ 15 ಮಳಿಗೆಗಳು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ನೋಟಿಸ್‌ ಅವಧಿ ಮುಗಿದಿದ್ದರಿಂದ ತೆರವು ಮಾಡಿಸಲು ನಗರಸಭೆ ಮುಂದಾಯಿತು ಎಂದರು.

Advertisement

ಈ ಸಂದರ್ಭದಲ್ಲಿ ನಗರಸಭೆ ಕಂದಾಯಾಧಿಕಾರಿ ಚಂದ್ರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next