Advertisement

ಕಬಕ: ಬೆಳ್ಳಂಬೆಳಗ್ಗೆ ಅನಧಿಕೃತ ಅಂಗಡಿಗಳ ತೆರವು ಕಾರ್ಯ

11:01 AM Nov 07, 2019 | keerthan |

ಪುತ್ತೂರು: ಪುತ್ತೂರು -ವಿಟ್ಲ ರಸ್ತೆಯ ಕಬಕದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ಗುರುವಾರ ಬೆಳ್ಳಂಬೆಳಗ್ಗೆ ನಡೆಯುತ್ತಿದೆ.

Advertisement

ಅನಧಿಕೃತ ಅಂಗಡಿಗಳ ತೆರವು ಕುರಿತು ಗ್ರಾಮ ಪಂಚಾಯತ್ ನಿಂದ ಈ ಹಿಂದೆ ನೋಟೀಸ್ ನೀಡಲಾಗಿತ್ತು. ಆದರೆ ಇದಕ್ಕೆ ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿ ಇದೀಗ ಕೋರ್ಟ್ ಆದೇಶದಂತೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಪುತ್ತೂರು ತಹಶೀಲ್ದಾರ್‌ರವರ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿಯಿಂದ ಅಂಗಡಿಗಳ ತೆರವು ಕಾರ್ಯಾಚರಣೆ ಬೆಳಿಗ್ಗೆ ಗಂಟೆ ಆರಕ್ಕೆ ನಡೆಯಿತು. ಸುಮಾರು 12 ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ.

ಹೈಕೋರ್ಟ್ ಸ್ಟೇ ಆರ್ಡರ್

ಅಂಗಡಿ ತೆರವಿಗೆ ಸಂಬಂಧಿಸಿ ಬಂದಿರುವ ನೋಟೀಸ್ ಮೇಲೆ ಅಂಗಡಿ ಹೊಂದಿರುವವರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್ ಅಂಗಡಿಗಳ ತೆರವಿಗೆ ತಡೆಯಾಜ್ಣೆ ನೀಡಿ ಆದೇಶ ಹೊರಡಿದೆ. ಈ ಆದೇಶ ಪತ್ರವನ್ನು ಈ ಹಿಂದೆಯೂ ನೀಡಲಾಗಿದ್ದು, ಇದೀಗ ಇಂದು ಬೆಳಿಗ್ಗೆ ಅಂಗಡಿಗಳ ತೆರವು ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತೊಮ್ಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ತಡೆಯಾಜ್ಣೆ ನೋಟೀಸ್ ನೀಡುವ ವೇಳೆ ಬಹುತೇಕ ಅಂಗಡಿಗಳ ತೆರವು ಆಗಿದ್ದು, ಇನ್ನೂ ಕೂಡ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next