Advertisement
ಸುಮಾರು ಎಂಟು ಬಡಕುಟುಂಬ ಕಳೆದ 6 ದಶಕದಿಂದ ಮನೆ ನಿರ್ಮಾಣ ಮಾಡಿಕೊಂಡುಜತೆಯಲ್ಲಿ ಬದುಕು ಕಟ್ಟಿಕೊಳ್ಳಲು ಮನೆ ಮುಂಭಾಗಅಂಗಡಿ ಮಾಡಿಕೊಂಡಿದ್ದರು. ಇದಕ್ಕೆ ದಿಡಗ ಗ್ರಾಪಂಗೆ ಕಂದಾಯ ಕಟ್ಟಿರುವುದಲ್ಲದೆ ವಿದ್ಯುತ್ ಪರವಾನಿಗೆ ತೆರಿಗೆ ನೀಡಲಾಗಿದೆ. 6 ದಶಕದಿಂದ ನಾವು ಇಲ್ಲಿವಾಸವಿದ್ದೇವೆ. ಈಗ ಏಕಾಏಕಿ ತೆರವು ಮಾಡುವಂತೆ ಒತ್ತಡ ಹಾಕುತ್ತಿರುವುದು ತರವಲ್ಲ ಎಂದರು.
Related Articles
Advertisement
ಮಾತುಕತೆ ನಡೆದಿತ್ತು: ದಿಡಗ ಗ್ರಾಮದ ಸರ್ವೆ ನಂ. 174ರಲ್ಲಿ ರಾಮಲಿಂಗೇಶ್ವರ ದೇವಾಲಯ ಎಂದುದಾಖಲಾತಿಯಲ್ಲಿದೆ. ಈ ಸರ್ವೆ ನಂಬರ್‌ನಲ್ಲಿ 2-3 ದಶಕದ ಹಿಂದೆ ದೇವಾಲಯ ನಿರ್ಮಾಣ ಮಾಡಿ ದೇವಾಲಯ ನಿರ್ವಹಣೆಗಾಗಿ ಮಳಿಗೆ ಮಾಡಿದ್ದುಬಾಡಿಗೆಯನ್ನು ದೇವಾಲಯಕ್ಕೆ ನೀಡುವಂತೆ ಮಾತುಕತೆ ನಡೆದಿತ್ತು. ಇದರಂತೆ ನಡೆದುಕೊಂಡುಬಂದಿದೆ. ಆದರೆ, ಕೆಲವರು ಒಳ ಬಾಡಿಗೆಪಡೆಯುತ್ತಿದ್ದರು ಎಂದು ವಿನಾಯಕ ಟ್ರಸ್ಟ್ ಅಧ್ಯಕ್ಷರಾದ ಕೆ.ಪಿ.ರಾಮಕೃಷ್ಣ ಹೇಳಿದರು.
ಸ್ವಂತ ಜಾಗ ಎಂದರು: ದೇವಾಲಯ ಶಿಥಿಲವಾಗಿರುವುದರಿಂದ ನೂತನ ದೇವಾಲಯನಿರ್ಮಾಣ ಮಾಡಲು ವಿನಾಯಕ ಟ್ರಸ್ಟ್ ಮೂಲಕಗ್ರಾಮಸ್ಥರು ಸಭೆ ಮಾಡಿದ್ದರು. ದೇವಾಲಯದಸಂಪೂರ್ಣ ಜಾಗವನ್ನು ತೆರವು ಮಾಡಿ ನಂತರನೂತನ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಒಪ್ಪಿಗೆನೀಡಿದ್ದರು. ಮಳಿಗೆಯವರು ಇದಕ್ಕೆ ಒಪ್ಪಿದ್ದು 4ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೆ ಗ್ರಾಮದಲ್ಲಿಎಲ್ಲರೂ ಒಪ್ಪಿಗೆ ನೀಡಿದ್ದರು. ಆದರೆ, ಕೆಲಮಳಿಗೆಯವರು ಇದು ಸ್ವಂತ ಜಾಗ ಎಂದುಹೇಳಿದರು. ಹೀಗಾಗಿ ಗ್ರಾಮಸ್ಥರು ತೆರವು ಮಾಡಿಸಲು ಮುಂದಾದರು ಎಂದು ಹೇಳಿದರು.
ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ :
ಹೋಬಳಿಯ ಕೆಲವು ಪ್ರಭಾವಿ ರಾಜಕೀಯವ್ಯಕ್ತಿಗಳು ಹಾಗೂ ಸ್ಥಳೀಯರು ಸೇರಿಕೊಂಡು ಈಜಾಗವನ್ನು ತೆರವು ಮಾಡುವಂತೆ ಎಂಟುಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರಿದ್ದರು.ಇದಕ್ಕೆ ಒಪ್ಪದೆ ಇದ್ದಾಗ ರಾತ್ರೋರಾತ್ರಿ ಮನೆ ಬಳಕೆವಸ್ತುಗಳನ್ನು ಹೊರಕ್ಕೆ ಎಸೆದು ಜೆಸಿಪಿ ಯಂತ್ರದ ಮೂಲಕ ಮನೆ ತೆರವು ಮಾಡಲು ಮುಂದಾಗಿದ್ದರು. ಆದರೂ ನಾವು ಸ್ಥಳ ಬಿಟ್ಟಿರಲಿಲ್ಲ. ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕೊಲೆ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಅಂಗಡಿ ಯಜಮಾನಿ ಯಶೋಧಮ್ಮ ಆರೋಪಿಸಿದರು.
ಹೆಸರಿದ್ದರೆ ಪಡೆಯಲಿ :
ದೇಗುಲ ಮಳಿಗೆ ಬಾಡಿಗೆದಾರರಲ್ಲಿ 3-4 ಮಂದಿ ಒಳ ಬಾಡಿಗೆ ನೀಡಿ ಮಾಸಿಕ 2-4 ಸಾವಿರ ಪಡೆಯುತ್ತಿದ್ದರು. ಅವರು ಮಾತ್ರ ಗ್ರಾಮದಲ್ಲಿಅಶಾಂತಿ ವಾತಾವರಣ ಸೃಷ್ಟಿಸಿದ್ದಾರೆಯೇ ಹೊರತು,ಇದರಲ್ಲಿ ಯಾವುದೇ ದಬ್ಟಾಳಿಕೆ ನಡೆಸಿಲ್ಲ. ಸಂಪೂರ್ಣಜಾಗವನ್ನು ತೆರವು ಮಾಡಿ ನಂತರ ನೂತನದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ಒಪ್ಪಿಗೆನೀಡಿದ್ದರು. ದಾಖಲಾತಿಯಲ್ಲಿ ಅವರಿಗೆ ಸೇರಿದ ಜಾಗ ಎಂದು ಇದ್ದರೆ ಅವರು ಪಡೆಯಲಿ ಎಂದುವಿನಾಯಕ ಟ್ರಸ್ಟ್ ಅಧ್ಯಕ್ಷರಾದ ಕೆ.ಪಿ.ರಾಮಕೃಷ್ಣ ಹೇಳಿದರು.