Advertisement

ಮರಳು ದಿಬ್ಬಗಳ ತೆರವು, ಸಾಗಾಟ ನಿಷೇಧ: ಡಿಸಿ ಕೂರ್ಮಾ ರಾವ್‌

12:34 AM May 22, 2022 | Team Udayavani |

ಉಡುಪಿ: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದನ್ನು ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ತಿಳಿಸಿದ್ದಾರೆ.

Advertisement

ಜಿಲ್ಲಾ ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರಗಳಲ್ಲಿನ ಮರಳು ದಿಬ್ಬ ತೆರವುಗೊಳಿಸುವ ಸಂಬಂಧ 161 ತಾತ್ಕಾಲಿಕ ಮರಳು ಪರವಾನಿಗೆಯನ್ನು ವಿತರಿಸಲಾಗಿತ್ತು. ಅವುಗಳಲ್ಲಿ ಕುಂದಾಪುರ ತಾಲೂಕಿ ನಲ್ಲಿ 4 ಮರಳು ದಿಬ್ಬಗಳನ್ನು ತೆರವುಗೊಳಿಸಲು ವಿತರಿಸಲಾದ 39 ತಾತ್ಕಾಲಿಕ ಮರಳು ಪರವಾನಿಗೆ ಸಂಬಂಧಿಸಿದಂತೆ ಕೆಎಸ್‌ಸಿಝಡ್‌ಎಂಎನಿಂದ ನೀಡಲಾದ ನಿರಾಕ್ಷೇಪಣಾ ಪತ್ರದ ಅವಧಿ ಮಾರ್ಚ್‌ 29ಕ್ಕೆ ಮುಕ್ತಾಯಗೊಂಡಿದ್ದು, ಆ ಎಲ್ಲ ಪರವಾನಿಗೆಗಳನ್ನು ಈಗಾಗಲೇ ತಡೆಹಿಡಿದು ಸ್ಥಗಿತಗೊಳಿಸಲಾಗಿದೆ.

ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ 19 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ವಿತರಿಸಲಾದ 122 ತಾತ್ಕಾಲಿಕ ಮರಳು ಪರವಾನಿಗೆಗಳಿಗೆ ಸಂಬಂಧ ಕೆಎಸ್‌ಸಿಝಡ್‌ಎಂಎನಿಂದ ನೀಡಲಾದ ನಿರಾಕ್ಷೇಪಣ ಪತ್ರದ ಅವಧಿಯು ಆಗಸ್ಟ್‌ 22ರ ವರೆಗೆ ಇರಲಿದೆ ಎಂದು ಡಿಸಿ ತಿಳಿಸಿದ್ದಾರೆ.

ದ.ಕ.: ತಾತ್ಕಾಲಿಕ ಪರವಾನಿಗೆ ರದ್ದು
ಮಂಗಳೂರು: ಸಿಆರ್‌ಝಡ್‌ ಪ್ರದೇಶದಿಂದ ತೆಗೆದ ಮರಳನ್ನು ಮಾರುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾ ಧಿಕರಣ ನೀಡಿರುವ ಆದೇಶಕ್ಕೆ ಪೂರಕವಾಗಿ ದ.ಕ. ಜಿಲ್ಲೆಯಲ್ಲೂ ನೀಡಲಾದ 148 ತಾತ್ಕಾಲಿಕ ಪರವಾನಿಗೆಗಳನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಸಿಆರ್‌ಝಡ್‌ ಪ್ರದೇಶದಲ್ಲಿ ಒಟ್ಟು 14 ಮರಳು ದಿಬ್ಬಗಳನ್ನು ಗುರುತಿಸಲಾಗಿತ್ತು. ಎನ್‌ಐಟಿಕೆ ತಜ್ಞರ ವರದಿಯ ಬಳಿಕ ಪ್ರಸ್ತಾವನೆಯನ್ನು ಬೆಂಗಳೂರಿನ ಕರ್ನಾಟಕ ಕರಾವಳಿ ನಿರ್ವಹಣಾ ಸಮಿತಿಯವರು ಪರಿಶೀಲಿಸಿ ಇತ್ತೀಚೆಗೆ ಪರಿಸರ ವಿಮೋಚನಾ ಪತ್ರ ನೀಡಿದ್ದರು. ಉಡುಪಿ ಜಿಲ್ಲೆಯ ನಾಗರಿಕರು ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ವಿರುದ್ಧ ಎನ್‌ಜಿಟಿ ಮೊರೆ ಹೋಗಿದ್ದು ಈಗ ಬಂದಿರುವ ಆದೇಶ ಎಲ್ಲ ಜಿಲ್ಲೆಗಳ ಸಿಆರ್‌ಝಡ್‌ ಪ್ರದೇಶಗಳಿಗೂ ಅನ್ವಯವಾಗುವಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next