Advertisement

ಅವಧಿ ಮುಗಿದ ಮಳಿಗೆಗಳ ತೆರವು

01:15 PM Feb 01, 2022 | Team Udayavani |

ಕೋಲಾರ: ನಗರಸಭೆಗೆ ಸೇರಿದ 205 ಬಾಡಿಗೆಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳನ್ನುಸೋಮವಾರ ಬೆಳಗ್ಗೆ ಹೈಕೋರ್ಟ್‌ ಆದೇಶದಮೇರೆಗೆ ಪೊಲೀಸರ ಸಹಕಾರದೊಂದಿಗೆನಗರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಜೊತೆಗೂಡಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

Advertisement

ಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಳೆದ 45 ದಿನಗಳ ಹಿಂದೆಯೇ ನಗರಸಭೆಯಿಂದ ಅಂಗಡಿ ನಡೆಸುತ್ತಿರುವವರಿಗೆ ನೋಟಿಸ್‌ ಜಾರಿ ಮಾಡಿದ್ದರೂ, ಅಂಗಡಿಗಳನ್ನುಸ್ವಯಂಪ್ರೇರಿತರಾಗಿ ತೆರವುಗೊಳಿಸದ ಕಾರಣ,ನಗರದ ಎಂ.ಜಿ.ರಸ್ತೆಯಲ್ಲಿರುವ ಎಸ್‌.ಎಸ್‌.ಕಾಂಪ್ಲೆಕ್ಸ್‌ನಲ್ಲಿರುವ ನಗರಸಭೆ ಮಳಿಗೆಗಳನ್ನುಖಾಲಿ ಮಾಡಿಸಲು ಪೌರಾಯುಕ್ತ ಎಸ್‌.ಪ್ರಸಾದ್‌ ನೇತೃತ್ವದಲ್ಲಿ ಕಾರ್ಯಾಚರಣೆಪೊಲೀಸ್‌ ಬಿಗಿ ಭದ್ರತೆಯಲ್ಲಿ ನಡೆಯಿತು.

ಮಾತಿನ ಚಕಮಕಿಗೆ ಬ್ರೇಕ್‌: ಕೆಲವು ಅಂಗಡಿ ಮಾಲಿಕರು ಮಾತಿನ ಚಕಮಕಿಗೆ ಇಳಿದರಾದರೂ ಪೊಲೀಸರು ಯಾವುದೇ ಗಲಾಟೆಗೆ ಅವಕಾಶ ನೀಡಲಿಲ್ಲ, ಪರಿಸ್ಥಿತಿಯ ತೀವ್ರತೆ ಅರಿತ ಕೆಲವು ಅಂಗಡಿ ಮಾಲಿಕರು,ತಾವೇ ಅಂಗಡಿಯಲ್ಲಿನ ಸರಕನ್ನು ಹೊತ್ತೂಯ್ದು,ಖಾಲಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಕೋರ್ಟ್‌ ಆದೇಶ ತೋರಿಸಿ ಮಳಿಗೆ ಖಾಲಿ:ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ವಾಣಿಜ್ಯ ಮಳಿಗೆಗಳಲ್ಲಿದ್ದ ವ್ಯಾಪಾರಿಗಳು ಖಾಲಿಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ,ಅಧಿಕಾರಿಗಳು ಕೋರ್ಟ್‌ ಆದೇಶವನ್ನು ತೋರಿಸಿ ಮಳಿಗೆ ಖಾಲಿ ಮಾಡಿಸುತ್ತಿದ್ದಾರೆ.

ಅಧಿಕಾರಿಗಳು ಬೀಗ ಒಡೆದು ಮಳಿಗೆಗಳನ್ನು ಸೀಜ್‌ ಮಾಡುವುದರ ಮೂಲಕ ಮುಂದೆಹರಾಜುದಾರರಿಗೆ ನೀಡಲು ಕ್ರಮ ಕೈಗೊಳ್ಳಲಿ ದ್ದಾರೆ ಎಂದು ಆಯುಕ್ತರು ತಿಳಿಸಿದರು.

ಮಳಿಗೆಯಲ್ಲಿದ್ದ ವಸ್ತುಗಳು ಮುಟ್ಟುಗೋಲು: ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನುಖಾಲಿ ಮಾಡದ ಕಾರಣ, ನಗರಸಭೆ ಸಿಬ್ಬಂದಿ ಮಳಿಗೆಗಳ ಬೀಗ ಹೊಡೆದು, ಮಳಿಗೆಯಲ್ಲಿದ್ದವಸ್ತುಗಳನ್ನು ಹೊರ ಹಾಕುವ ಕೆಲಸಮಾಡಿದ್ದಲ್ಲದೆ, ಮಳಿಗೆಯಲ್ಲಿದ್ದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡರು.

Advertisement

ನೋಟಿಸ್‌ ನೀಡಿದ್ರೂ ಪ್ರಯೋಜನವಿಲ್ಲ: ಕಳೆದ ಒಂದೂವರೆ ವರ್ಷದ ಹಿಂದೆ ಹಲವುಬಿಡ್‌ದಾರರು ಹೆಚ್ಚಿನ ಬಾಡಿಗೆ ಹಾಗೂಮುಂಗಡ ನೀಡಲು ಒಪ್ಪಿ ಹಾರಾಜಿನಲ್ಲಿಮಳಿಗೆಗಳನ್ನು ಪಡೆದುಕೊಂಡಿದ್ದು, ಇದುವರೆಗೆಹಲವು ಬಾರಿ ನಗರಸಭೆ ನೋಟಿಸ್‌ ನೀಡಿತೆರವುಗೊಳಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಕಾನೂನಿನ ತೊಡಕುಗಳನ್ನುನಿವಾರಿಸಿಕೊಂಡಿರುವ ನಗರಸಭೆ ಕೋರ್ಟ್‌ಆದೇಶದಂತೆ ಮಳಿಗೆಗಳ ತೆರವಿಗೆ ಕ್ರಮಕೈಗೊಂಡಿರುವುದು ಸಾರ್ವಜನಿಕರ ಪ್ರಶಂಸೆಗೆಪಾತ್ರವಾಗಿದೆ. ಮಳಿಗೆಗಳನ್ನು ತೆರವುಗೊಳಿಸುವಕಾರ್ಯದ ವೇಳೆ ಯಾವುದೇ ಅಹಿತಕರಘಟನೆಗಳು ನಡೆಯದಂತೆ ತಡೆಯಲು ಎಸ್‌.ಎಸ್‌.ಕಾಂಪ್ಲೆಕ್ಸ್‌ ಸುತ್ತಲಿನ ರಸ್ತೆಗಳನ್ನು ಬಂದ್‌ಮಾಡಲಾಗಿತ್ತು ಹಾಗೂ ಸ್ಥಳದಲ್ಲಿ ಹೆಚ್ಚಿನಪೊಲೀಸ್‌ ಬಂದೋಬಸ್ತ್ ಹಾಕಲಾಗಿತ್ತು.

ಪೊಲೀಸರು ಬೆಳಗ್ಗೆ 8ರಿಂದಲೇ ತೆರವುಕಾರ್ಯಾಚರಣೆ ನಡೆಸುವ ಭಾಗದ ಎಲ್ಲಾರಸ್ತೆಗಳನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್‌ಮಾಡಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next