Advertisement

ಕಸ, ಅಣೆಕಟ್ಟಿನಲ್ಲಿ ಮರದ ದಿಮ್ಮಿ ತೆರವುಗೊಳಿಸಿ

11:38 PM Feb 26, 2020 | Team Udayavani |

ಕಿಂಡಿ ಅಣೆಕಟ್ಟಿನಲ್ಲಿ ಮರದ ದಿಮ್ಮಿ ತೆರವುಗೊಳಿಸಿ
ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 1.60 ಕೋ. ರೂ.ಗೂ ಮಿಕ್ಕಿದ ಅನುದಾನದಲ್ಲಿ ನಿರ್ಮಾಣಗೊಂಡ, ಬೇಸಿಗೆ ಸಮಯದಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಚೋನಮನೆ ಕಿಂಡಿ ಅಣೆಕಟ್ಟಿನಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದೆ. ಆದರೆ ಆ ಡ್ಯಾಂನಲ್ಲಿ ಒಣಗಿದ ಬೃಹತ್‌ ಗಾತ್ರದ ಮರದ ದಿಮ್ಮಿಗಳು, ಇನ್ನಿತರ ಕಸ ಸಂಗ್ರಹಗೊಂಡಿದೆ.

Advertisement

ಈ ಕಿಂಡಿ ಅಣೆಕಟ್ಟಿನಿಂದ ಆಜ್ರಿ, ತಗ್ಗುಂಜೆ, ಬೆಳುವಾಣ, ಚೋನಮನೆ, ಹೊಸಬಾಳು ಭಾಗದ ಸುಮಾರು 300 ಎಕರೆ ಕೃಷಿ ಭೂಮಿಗೆ ನೀರು ಪೂರೈಕೆಯಾಗುತ್ತದೆ. ಇದಲ್ಲದೆ ಕಿಂಡಿ ಅಣೆಕಟ್ಟು, ವೆಂಟೆಂಡ್‌ ಡ್ಯಾಂಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಅನುಕೂಲವಾಗುತ್ತಿದೆ.

ಆದರೆ ಇಷ್ಟೊಂದು ದೊಡ್ಡ ಮಟ್ಟದ ಕಿಂಡಿ ಅಣೆಕಟ್ಟಿನಲ್ಲಿ ಆಗಾಗ ದೊಡ್ಡ ದೊಡ್ಡ ಗಾತ್ರದ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಇಲ್ಲಿ ಸಂಗ್ರಹವಾಗುತ್ತಿದ್ದು, ಇದರಿಂದ ಅಣೆಕಟ್ಟಿನ ಹಲಗೆಗಳಿಗೂ ಹಾನಿಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಮರದ ದಿಮ್ಮಿಗಳನ್ನು ಅಲ್ಲಿಂದ ತೆರವುಗೊಳಿಸಲಿ.
-ಚೋನಮನೆ ಭಾಗದ
ಗ್ರಾಮಸ್ಥರು

ಈ ರಸ್ತೆಗೆ ಮರು ಡಾಮರು ಎಂದು?
ಬಸ್ರೂರಿನಿಂದ ಬಳ್ಕೂರು, ಕಳುವಿನಬಾಗಿಲು, ಗುಲ್ವಾಡಿ ಕಡೆಗೆ ಸಂಚರಿಸುವ ಒಳ ರಸ್ತೆ ಇದಾಗಿದ್ದು, ಅನೇಕ ವರ್ಷಗಳಿಂದ ಹೀಗೆಯೇ ಹೊಂಡ – ಗುಂಡಿಗಳಿಂದ ತುಂಬಿಕೊಂಡಿದೆ. ರಸ್ತೆ ದುರಸ್ತಿಯಾಗದೇ ಹಲವು ವರ್ಷಗಳೇ ಕಳೆದಿವೆ.

ಹೊಂಡ – ಗುಂಡಿಗಳು ಮಾತ್ರವಲ್ಲದೆ ಕಿರಿದಾದ ರಸ್ತೆಯಿಂದಾಗಿ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಕುಂದಾಪುರದಿಂದ ಗುಲ್ವಾಡಿ, ಮಾವಿನಕಟ್ಟೆ ಕಡೆಗೆ ತೆರಳಬೇಕಾದರೆ ಇದು ಹತ್ತಿರದ ಮಾರ್ಗವಾಗಿದೆ. ಈ ಮಾರ್ಗವಾಗಿ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕಿರಿದಾದ ರಸ್ತೆಯಿಂದಾಗಿ ಘನ ವಾಹನಗಳ ಸಂಚಾರಕ್ಕೆ ಈಗಾಗಲೇ ನಿರ್ಬಂಧ ವಿಧಿಸಲಾಗಿದೆ. ಹಲವು ವರ್ಷಗಳಿಂದ ಕನಿಷ್ಠ ತೇಪೆ ಕೂಡ ಹಾಕದೇ ಇರುವುದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸಿ, ಈ ರಸ್ತೆಗೆ ಮರು ಡಾಮರು ಮಾಡಬೇಕಾಗಿದೆ.
ಬಳ್ಕೂರು – ಬಸ್ರೂರು ಭಾಗದ ಸ್ಥಳೀಯರು

Advertisement

ರಸ್ತೆ ಬದಿ ಕಸ ಎಸೆತಕ್ಕೆ ಬೇಕಿದೆ ಕಡಿವಾಣ
ತಲ್ಲೂರಿನಿಂದ ನೇರಳಕಟ್ಟೆ, ಆಜ್ರಿ ಕಡೆಗೆ ಸಂಚರಿಸುವ ರಸ್ತೆಯ ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ಸಮೀಪ ರಸ್ತೆ ಬದಿಯೇ ಕಸ ಎಸೆಯುತ್ತಿರುವುದು ಕಂಡು ಬರುತ್ತಿದ್ದು, ಅನೇಕ ಸಮಯ ಗಳಿಂದ ಇಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ಕೂಡ ಕಸ ಎಸೆಯುವುದಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ರಸ್ತೆ ಬದಿ ಹಲವು ಸಮಯದಿಂದ ಈ ರೀತಿಯಾಗಿ ಕಸ ಎಸೆಯಲಾಗುತ್ತಿದೆ. ಗ್ರಾಮಸ್ಥರು ಮಾತ್ರವಲ್ಲದೆ, ವಾಹನ ಗಳಲ್ಲಿ ಎಲ್ಲೆಲ್ಲಿಂದಲೋ ಬರುವ ಸಾರ್ವಜನಿಕರು ಇಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಾತ್ರಿ ವೇಳೆ ಕಸ ಎಸೆದು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕಿದೆ.

ಪ್ಲಾಸ್ಟಿಕ್‌ ಮಾತ್ರವಲ್ಲದೆ, ಹಸಿ ಕಸಗಳನ್ನು ಕೂಡ ಇಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುವ ಸಾಧ್ಯತೆ ಯಿರುವುದರಿಂದ, ಇಲ್ಲಿ ವಾಹನಗಳಲ್ಲಿ ಬಂದು ಕಸ ಎಸೆಯದಂತೆ ಸಂಬಂಧಪಟ್ಟವರು ಮುನ್ನೆಚ್ಚರಿಕೆ ಕ್ರಮ ವಹಿಸಲಿ.
ಮಾವಿನಕಟ್ಟೆ ಪರಿಸರದ ನಿವಾಸಿಗಳು

Advertisement

Udayavani is now on Telegram. Click here to join our channel and stay updated with the latest news.

Next