ನವದೆಹಲಿ: ಒಂದು ಶ್ರೇಣಿ, ಒಂದು ಪಿಂಚಣಿ (ಒಆರ್‌ಒಪಿ) ಯೋಜನೆಗೆ ಸಂಬಂಧಿಸಿದಂತೆ 2022ರ ತೀರ್ಪಿಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ನಿವೃತ್ತ ಯೋಧರಿಗೆ ನೀಡಬೇಕಿರುವ 2019ರಿಂದ 2022ರ ಅವಧಿಯ ಬಾಕಿ ಮೊತ್ತ 28,000 ಕೋಟಿ ರೂ.ಗಳನ್ನು 2024ರ ಫೆ.28ರೊಳಗೆ ಪಾವತಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಒಆರ್‌ಒಪಿ ಬಾಕಿ ಪಾವತಿಗೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ಮಾಹಿತಿಯನ್ನು ಸ್ವೀಕರಿಸಲು ನಿರಾಕರಿಸಿತು.
ಇಂತಹ ಮುಚ್ಚಿದ ಲಕೋಟೆಯ ಅಭ್ಯಾಸಕ್ಕೆ ಅಂತ್ಯ ಹಾಡಬೇಕಿದೆ. ಇದು ನ್ಯಾಯಯುತ ನ್ಯಾಯಪ್ರಕ್ರಿಯೆಗೆ ವಿರುದ್ಧವಾದ ವ್ಯವಸ್ಥೆ ಎಂದು ಅಸಮಾಧಾನ ವ್ಯಕ್ತಪಡಿಸಿತು.