Advertisement

ರಾಮಕೃಷ್ಣ ಮಿಷನ್‌ನಿಂದ ಉದಯವಾಣಿ ಕಚೇರಿಯಲ್ಲಿ ‘ಸ್ವಚ್ಛತಾ ಸಂಪರ್ಕ’ಅಭಿಯಾನ

11:29 PM Jul 19, 2019 | Team Udayavani |

ಮಹಾನಗರ: ಮಂಗಳಾದೇವಿ ರಾಮಕೃಷ್ಣ ಮಿಷನ್‌ ಆಶ್ರಯದಲ್ಲಿ ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಅಂಗವಾಗಿ ಮಂಗಳೂರಿನ ಉದಯವಾಣಿ ಕಚೇರಿಯಲ್ಲಿ ಸ್ವಚ್ಛತಾ ಸಂಪರ್ಕ ಅಭಿಯಾನದ 173ನೇ ಕಾರ್ಯಕ್ರಮ ಶುಕ್ರವಾರ ನಡೆಯಿತು.

Advertisement

ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ ಕೋಟೆಕಾರ್‌ ಮಾತನಾಡಿ, ಸ್ವಚ್ಛತೆಯು ನಿತ್ಯ ನಿರಂತರ ಆಗಬೇಕು. ಪ್ರತಿಯೊಬ್ಬರಲ್ಲಿಯೂ ಸ್ವಚ್ಛತೆಯ ಬಗ್ಗೆ ಕಾಳಜಿ ಮೂಡಬೇಕು. ಎಲ್ಲ ಕೆಲಸವನ್ನು ಪಾಲಿಕೆಯೇ ಮಾಡಬೇಕು ಎನ್ನುವುದು ತಪ್ಪು. ಬದಲಾಗಿ ನಾವು ಕೂಡ ಅದರ ಜತೆ ಕೈಜೋಡಿಸಬೇಕು ಎಂದರು.

ರಾಮಕೃಷ್ಣ ಮಠವು 5 ವರ್ಷಗಳಿಂದ ಶ್ರಮದಾನ ಮುಖೇನ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಬಳಿಕ ಸ್ವಚ್ಛತಾ ಸಂಪರ್ಕ ಅಭಿಯಾನ, ಸ್ವಚ್ಛ ಮನಸ್ಸು, ಸ್ವಚ್ಛ ಸೋಚ್, ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮಗಳು ನಡೆಸುತ್ತಿದೆ. ಪ್ರತಿಯೊಬ್ಬರೂ ಸೇವಾ ಚಟುವಟಿಕೆಗಳಲ್ಲಿ ಕೈಜೋಡಿಸಿದರೆ ಸ್ವಚ್ಛ ಮಂಗಳೂರು ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.

ಸ್ವಚ್ಛ ಸಂಪರ್ಕ ಅಭಿಯಾನದ ಸಂಯೋಜಕ ಸಚಿನ್‌ ಶೆಟ್ಟಿ ಅವರು ಮಣ್ಣಿನ ಮಡಿಕೆಯ ಗೊಬ್ಬರ ತಯಾರಿಕಾ ವಿಧಾನದ ಬಗ್ಗೆ ಮಾತನಾಡಿ, ಕಸಿ ಕಸವನ್ನು ಪಾಲಿಕೆ ಗಾಡಿಗೆ ನೀಡದೆ ನಿಮ್ಮ ಮನೆಯಲ್ಲಿಯೇ ಮೂರು ಮಡಕೆಯ ವಿಧಾನದ ಮೂಲಕ ಸುಲಭವಾಗಿ ನಿರ್ವಹಿಸಿ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎಂದರು.

ಈ ವಿಧಾನ ಕೂಡ ಸುಲಭವಾಗಿದ್ದು, ಅಡುಗೆ ಮನೆಯ ತ್ಯಾಜ್ಯವನ್ನು ಕಸದ ಬುಟ್ಟಿಗೆ ಹಾಕುವಂತೆ ಮೇಲಿನ ಮಡಕೆಗೆ ಹಾಕಬೇಕು. ಬಳಿಕ ಅದರ ಮೇಲೊಂದಷ್ಟು ತೆಂಗಿನ ನಾರಿನ ಹುಡಿ ಹಾಕಿದರೆ ಸಾಕಾಗುತ್ತದೆ. ಹೀಗೆ ದಿನನಿತ್ಯ ಮಾಡುತ್ತಾ ಹೋಗಬೇಕು. ಸುಮಾರು ಐದಾರು ಜನರಿರುವ ಕುಟುಂಬಕ್ಕೆ ಮೊದಲ ಮಡಕೆ ತುಂಬುವುದಕ್ಕೆ 20ರಿಂದ 30 ದಿನ ಬೇಕಾಗುತ್ತದೆ. ಬಳಿಕ ತುಂಬಿದ ಮಡಕೆಯನ್ನು ಮಧ್ಯದಲ್ಲಿಟ್ಟು ಮಧ್ಯದ ಮಡಕೆಯನ್ನು ಮೇಲಿಡಬೇಕು. ಅನಂತರ ಮೇಲಿನ ಮಡಕೆಯಲ್ಲಿ ಕಸ ತುಂಬುತ್ತಾ ಹೋಗಬೇಕು. ಅದು ತುಂಬುವ ಹೊತ್ತಿಗೆ ಮಧ್ಯದ ಮಡಕೆಯಲ್ಲಿರುವ ತ್ಯಾಜ್ಯ ಉತ್ತಮ ಗುಣಮಟ್ಟದ ಗೊಬ್ಬರವಾಗುತ್ತದೆ ಎಂದರು.

Advertisement

ಉದಯವಾಣಿ ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಮಾತನಾಡಿದರು.

ಉದಯವಾಣಿ ಕಚೇರಿ ಸಿಬಂದಿ ವರ್ಗ ಉಪಸ್ಥಿತರಿದ್ದರು. ವರದಿಗಾರರಾದ ಧನ್ಯಾ ಬಾಳೆಕಜೆ ನಿರೂಪಿಸಿ, ಸ್ವಾಗತಿಸಿದರು. ಉದಯವಾಣಿ ಮಂಗಳೂರು ಸುದ್ದಿ ವಿಭಾಗದ ಡೆಪ್ಯೂಟಿ ಬ್ಯೂರೋ ಚೀಫ್‌ ಸುರೇಶ್‌ ಪುದುವೆಟ್ಟು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next