Advertisement

ಸ್ವಚ್ಛತೆಯ ಟೈಮ್‌ ಟೇಬಲ್‌…

05:05 PM Jan 22, 2020 | mahesh |

ಕೆಲವರಿಗೆ “ಟು ಡು ಲಿಸ್ಟ್‌’ ಮಾಡುವ ಅಭ್ಯಾಸ ಇರುತ್ತದೆ. ನಾನು ಇವತ್ತು ಇವೆಲ್ಲಾ ಕೆಲಸಗಳನ್ನು ಮುಗಿಸಬೇಕು ಅಂತ ಮುಂಚೆಯೇ ನಿರ್ಧರಿಸಿಕೊಂಡು, ಅದನ್ನೆಲ್ಲ ಒಂದೆಡೆ ಬರೆದಿಟ್ಟುಕೊಳ್ಳುತ್ತಾರೆ. ಅದೇ ರೀತಿ, ಮನೆಯ ಸ್ವಚ್ಛತೆಯ ವಿಷಯದಲ್ಲಿಯೂ “ಟು ಡು ಲಿಸ್ಟ್‌’ ಮಾಡುವುದು ಒಳ್ಳೆಯ ಅಭ್ಯಾಸ. ಯಾವೆಲ್ಲ ವಸ್ತು, ಜಾಗಗಳನ್ನು ದಿನವೂ ಸ್ವಚ್ಛಗೊಳಿಸಬೇಕು, ಯಾವುದನ್ನು ವಾರಕ್ಕೊಮ್ಮೆ ಕ್ಲೀನ್‌ ಮಾಡಬೇಕು, 2-3 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಸಾಕು ಅನ್ನುವ ವಸ್ತುಗಳಾವುವು ಅಂತ ಒಂದು ಲಿಸ್ಟ್‌ ಮಾಡಿಕೊಂಡರೆ, ಮನೆ ಕ್ಲೀನ್‌ ಮಾಡುವುದು ಕಷ್ಟವಲ್ಲ. ಈ ಕುರಿತಾಗಿ ನಾನು ಪಾಲಿಸುವ ಟು ಡು ಲಿಸ್ಟ್‌ ಹೇಗಿದೆ ಗೊತ್ತಾ?

Advertisement

ದಿನವೂ ಮಾಡಬೇಕು
-ಅಡುಗೆ ಮನೆಯ ಶೆಲ್ಫ್, ಸಿಂಕ್‌ ಸ್ವಚ್ಛತೆ.
– ಬೆಡ್‌ಶೀಟ್‌, ಬೆಡ್‌ಸ್ಪ್ರೆಡ್‌ ಧೂಳು ತೆಗೆಯುವುದು.
-ಕಸದಬುಟ್ಟಿಗಳನ್ನು ಖಾಲಿ ಮಾಡುವುದು.
-ಮನೆಯ ಕಸ ಗುಡಿಸುವುದು.
-ಶೌಚಾಲಯ, ಬಚ್ಚಲು ಮನೆ ಸ್ವಚ್ಛತೆ.

2-3 ದಿನ/ ವಾರಕ್ಕೊಮ್ಮೆ
-ನೆಲ ಒರೆಸುವುದು.
-ಡೋರ್‌ ಮ್ಯಾಟ್‌ ಬದಲಿಸುವುದು.
-ಫ್ರಿಡ್ಜ್ನೊಳಗಿನ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು.
-ಮಿಕ್ಸಿ, ಓವನ್‌, ಮೈಕ್ರೋವೇವ್‌ ಕ್ಲೀನ್‌ ಮಾಡುವುದು.
-ಬಟ್ಟೆ ತೊಳೆಯುವುದು.
-ಪಾದರಕ್ಷೆ ಇಡುವ ಜಾಗ ಕ್ಲೀನ್‌ ಮಾಡುವುದು.

ಹದಿನೈದು ದಿನ/ ತಿಂಗಳಿಗೊಮ್ಮೆ
-ಹಾಸಿಗೆ, ಬೆಡ್‌ಶೀಟ್‌ ಸ್ವಚ್ಛಗೊಳಿಸುವುದು.
-ಕಪಾಟು, ಬೀರು, ಶೋಕೇಸ್‌ ಸ್ವಚ್ಛಗೊಳಿಸುವುದು.
-ಅವಧಿ ಮುಗಿದಿರುವ (ಎಕ್ಸ್‌ಪೈರಿ ಆದ) ಅಡುಗೆ ಸಾಮಗ್ರಿಗಳನ್ನು ಚೆಕ್‌ ಮಾಡುವುದು.
-ಕಿಟಕಿ ಪರದೆ ಬದಲಿಸುವುದು.

-ಕುಸುಮಾ ಬಿ.ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next