Advertisement
ಮಂಗಳೂರಿನ ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛ ಮಂಗಳೂರು ವಿದ್ಯಾರ್ಥಿ ರಾಯಭಾರಿ -2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಎಳೆಯ ಪ್ರಾಯದಲ್ಲೇ ಸ್ವಚ್ಛತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನ ರಾಮಕೃಷ್ಣ ಮಠ ಹಮ್ಮಿಕೊಂಡಿರುವ ಸ್ವಚ್ಛ ಮನಸ್ಸು ಕಾರ್ಯಕ್ರಮ ಅತ್ಯಂತ ಮಹತ್ವ ದ್ದಾಗಿದೆ. ಸ್ವಚ್ಛ ಮನಸ್ಸುಗಳಿಂದ ಸ್ವಚ್ಛ ಪರಿಸರ, ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಪ್ರತಿಯೊಂದು ಮನೆಯೂ ಶೌಚಾಲಯ ಹೊಂದುವ ಸರಕಾರದ ಗುರಿ ಯಶಸ್ವಿಯಾಗಿದೆ. ತ್ಯಾಜ್ಯ ವಿಲೇ ವಾರಿ ಕಾರ್ಯ ಸಮರ್ಪಕವಾಗಿ ನಡೆ ದಾಗ ಪರಿಸರ ಮಾಲಿನ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆಗಳಲ್ಲೂ ಕಸ ವಿಂಗಡನೆ ಸರಿಯಾದ ರೀತಿಯಲ್ಲಿ ಆಗಬೇಕು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ವಿದ್ಯಾರ್ಥಿ ರಾಯಭಾರಿಗಳಾಗಿ ನಾಮ ನಿರ್ದೇಶನಗೊಂಡಿರುವ ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಮನೆ, ಪರಿಸರ, ಶಾಲೆಗಳಲ್ಲಿ ಅರಿವು ಮೂಡಿಸಬೇಕು ಎಂದರು. ಜವಾಬ್ದಾರಿಯುತ ನಾಗರಿಕರನ್ನಾಗಿಸಿ
ಸ್ವಚ್ಛ ಮಂಗಳೂರು ರಾಯಭಾರಿ ಕಾರ್ಯಕ್ರಮದ ಬಗ್ಗೆ ವಿವರಿಸಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಅವರು ಮಕ್ಕಳಲ್ಲಿ ಎಳೆಯ ಪ್ರಾಯದಲ್ಲೇ ಸ್ವಚ್ಛತೆಯ ಮನೋಭೂಮಿಕೆಯನ್ನು ನಿರ್ಮಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರ ನ್ನಾಗಿ ರೂಪಿಸುವುದು ಸ್ವಚ್ಛ ಮನಸ್ಸು ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ, ಶಿಕ್ಷಕರು, ಹೆತ್ತವರಿಂದ ಅತ್ಯುತ್ತಮ ಬೆಂಬಲ ಮತ್ತು ಪಾಲ್ಗೊಳ್ಳುವಿಕೆ ವ್ಯಕ್ತವಾಗಿದೆ ಎಂದರು. ವಿದ್ಯಾರ್ಥಿ ರಾಯಭಾರಿಗಳಾಗಿ ನಾಮ ನಿರ್ದೇಶನಗೊಂಡಿರುವ ವಿದ್ಯಾರ್ಥಿ ಗಳು ಸ್ವಚ್ಛತೆಯಲ್ಲಿ ತಾನು ಮಾದರಿಯಾಗಿ, ಇತರರಿಗೆ ಪ್ರೇರಣಾದಾಯಕರಾಗಿ ಕಾರ್ಯನಿರ್ವಹಿಸಬೇಕು ಎಂದರು.
Related Articles
Advertisement
130 ಶಾಲೆಗಳ 13,000 ವಿದ್ಯಾರ್ಥಿಗಳುಸ್ವಚ್ಛ ಮನಸು ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 130 ಶಾಲೆಗಳಲ್ಲಿ 5 ತಿಂಗಳುಗಳಲ್ಲಿ ಆಯೋಜನೆಗೊಂಡಿದ್ದು, ಇದರಲ್ಲಿ 13,000 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ರತಿ ತಿಂಗಳು ತಲಾ ಒಂದು ಪರಿಕಲ್ಪನೆಯಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗಿದೆ. ಸ್ವಚ್ಛ ಮಂಗಳೂರು ರಾಯಭಾರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸ್ವಚ್ಛತಾ ರಾಯಭಾರಿಗಳಾಗಿ ನಾಮನಿರ್ದೇಶನಗೊಳಿಸಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಸ್ವಾಮಿ ಜಿತಕಾಮಾನಂದಜೀ ಅವರು ವಿವರಿಸಿದರು.