Advertisement
ಹಳೆಯ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 7.30ಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ರಾಜ ಶೇಖರ್ ಪುರಾಣಿಕ್, ಜಯಪ್ರಕಾಶ ನಾಯಕ್ ಶ್ರಮದಾನಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಹರೀಶ್ ಆಚಾರ್, ಮೋಹನ್ ಕೊಟ್ಟಾರಿ, ಶ್ರೀಕಾಂತ್ ರಾವ್, ಅನಿರುದ್ಧ ನಾಯಕ್, ರಾಜೇಶ್ವರಿ, ಯಶೋಧರ ಚೌಟ್, ಶ್ರೀಕರ ಕಲ್ಲೂರಾಯ ಉಪಸ್ಥಿತರಿದ್ದರು.
Related Articles
Advertisement
ಮೆಹಬೂಬ್ ಖಾನ್ ಮುಂದಾಳತ್ವದ ಎರಡನೇ ತಂಡ ಕೆ.ಎಸ್. ರಾವ್ ರಸ್ತೆಯ ಮೂಲೆಯಲ್ಲಿದ್ದ ತ್ಯಾಜ್ಯ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ತೆಗೆದು ಹಸನು ಮಾಡಿದರು. ಸಂದೀಪ್ ಕೋಡಿಕಲ್, ಸತೀಶ್ ಕೆಂಕನಾಜೆ ಹಾಗೂ ಇನ್ನಿತರ ಕಾರ್ಯಕರ್ತರು ಆರೋಗ್ಯ ಇಲಾಖೆಯ ಉಪಕಚೇರಿಯ ಮುಂಭಾಗದಲ್ಲಿದ್ದ ಗಲೀಜನ್ನು ತೆಗೆದು ಟಿಪ್ಪರಿಗೆ ತುಂಬಿಸಿದರು. ಸ್ವಚ್ಛ ಎಕ್ಕೂರು ತಂಡದ ಸದಸ್ಯರಾದ ಶುಭಕರ ಶೆಟ್ಟಿ, ಪ್ರಶಾಂತ ಎಕ್ಕೂರು, ಉಳಿದ ಸದಸ್ಯರು ಬಸ್ ನಿಲ್ದಾಣದ ಒಳಭಾಗದಲ್ಲಿ ಬಿದ್ದಿದ್ದ ಕಸಕಡ್ಡಿ ಪ್ಲಾಸ್ಟಿಕ್, ಬಾಟಲ್, ಗಾಜುಗಳನ್ನು ತೆಗೆದು ಶ್ರಮದಾನ ಮಾಡಿದರು.
ಸ್ವಚ್ಛತಾ ಯೋಧರ ಪಡೆ
ದಿಲ್ರಾಜ್ ಆಳ್ವ ಹಾಗೂ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ದಿಯಾಗಿ ನಿಲ್ಲಿಸಿದ್ದ ಹಳೆಯ ವಾಹನ, ರಿಕ್ಷಾಗಳನ್ನು ತೆಗೆದು ಬದಿಗೆ ಹಾಕಿ ಹೆಚ್ಚಿನ ಪಾರ್ಕಿಂಗ್ ಅನುಕೂಲ ಮಾಡಿಕೊಟ್ಟರು. ಸ್ವಚ್ಛ ಮಾಡಿದ ಆಯ್ದ ಸ್ಥಳಗಳಲ್ಲಿ ಆಲಂಕಾರಿಕ ಹೂಗಿಡಗಳ ಕುಂಡಗಳನ್ನಿಡಲಾಗಿದೆ. ಅಲ್ಲಿ ಸ್ವಚ್ಛತಾ ಯೋಧರು ಹಗಲಿರುಳು ಕಾವಲು ಕಾಯ ಲಿದ್ದಾರೆ. ಕಸ ಹಾಕುವವರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಹಲವಾರು ವಾರಗಳಿಂದ ಈ ಸ್ವಚ್ಛತಾ ಯೋಧರ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ, ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಶ್ರಮದಾನದ ಉಸ್ತುವಾರಿ ನೋಡಿಕೊಂಡರು.
ಕರಪತ್ರ ಹಂಚಿಕೆ
ಶ್ರೀಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಹಂಪನಕಟ್ಟೆ ಕೆ.ಎಸ್.ಆರ್. ರಾವ್ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿ ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ಕೋರಿದರು. ಜತೆಗೆ ‘ಸ್ವಚ್ಛ ಮಂಗಳೂರು ಕನಸಲ್ಲ’ ಎಂಬ ಮಾಹಿತಿ ಪತ್ರವನ್ನು ಹಂಚಿಕೆ ಮಾಡಿದರು. ಪ್ರೊ| ಸತೀಶ್ ಭಟ್, ಕೋಡಂಗೆ ಬಾಲಕೃಷ್ಣ ನಾೖಕ್ ವಿದ್ಯಾರ್ಥಿನಿಯರನ್ನು ಮಾರ್ಗ ದರ್ಶಿಸಿದರು. ಪ್ರವೀಣ ಶೆಟ್ಟಿ, ಸ್ವಯಂ ಸೇವಕರು ಸಸಿಗಳನ್ನು ನೆಟ್ಟರು. ಕೆ.ಎಂ.ಎಫ್. ವತಿಂದ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.
ಅಶೋಕ ನಗರದಲ್ಲಿರುವ ಸೇಂಟ್ ಡೊಮಿನಿಕ್ ಚರ್ಚ್ ನಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಕಾರ್ಯಾಗಾರ ಜರಗಿತು. ವಂ| ಅಕ್ವೀನ್ ನೊರೋನ್ಹ ಮುಖ್ಯ ಅತಿಥಿಯಾಗಿದ್ದರು. ಕ್ಯಾ| ಗಣೇಶ್ ಕಾರ್ಣಿಕ್ ಸ್ವಚ್ಛತೆಯ ಮಹತ್ವದ ಕುರಿತು ಭಾಷಣ ಮಾಡಿದರು. ನಲ್ಲೂರು ಸಚಿನ್ ಶೆಟ್ಟಿ ಸಾವಯವ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಿ, ಮನೆ ಮಟ್ಟದಲ್ಲಿ ಹಸಿಕಸ ನಿರ್ವಹಿಸುವ ಕುರಿತು ಮಾತನಾಡಿದರು. ರಿಚರ್ಡ್ ಗೋನ್ಸಾಲ್ವಿಸ್, ಸುಧೀರ್ ನೊರೋನ್ಹ ಮತ್ತಿತರರಿದ್ದರು. ರಂಜನ್ ವಂದಿಸಿದರು. ಭಾರತೀಯ ಕೆಥೋಲಿಕ್ ಯುವ ಸಂಚಲನ ಅಶೋಕ ನಗರದ ಘಟಕ ಈ ಕಾರ್ಯಕ್ರಮವನ್ನು ಸಂಘಟನೆ ಮಾಡಿತ್ತು. ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.