Advertisement
ಕಚೇರಿ ಸುತ್ತಲೂ ಜಾಲಿಗಿಡಗಳು ಬೆಳೆದಿದ್ದು, ಸ್ವಚ್ಛತೆಗೆ ಕ್ರಮ ವಹಿಸದ ಹಿನ್ನೆಲೆಯಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಕಚೇರಿಗಳ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿವೆ. ರಾತ್ರಿ ಕಾವಲುಗಾರರು ಇಲ್ಲದ ಕಾರಣ ಕಳ್ಳರ ಕಾಟ ಹೆಚ್ಚಿದೆ.
Related Articles
Advertisement
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿ ಉಪ ವಿಭಾಗ 11ರಲ್ಲಿ ಸಹಾಯಕ ಅಭಿಯಂತರ, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರ, ವಾಹನ ಚಾಲಕ, ಪರಿಚಾರಕ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಕಂಪ್ಯೂಟರ್ ಕೆಟ್ಟು ಹೋಗಿ ವರ್ಷವಾದರೂ ಇಲ್ಲಿಯವರೆಗೆ ದುರಸ್ತಿ ಆಗಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ದಾಖಲಾತಿ ಮಾಹಿತಿ ಪಡೆಯಲು ಖಾಸಗಿ ಅಂಗಡಿಗಳ ಮೊರೆ ಹೋಗುವ ಸ್ಥಿತಿ ಇದೆ.
ಅವ್ಯವಸ್ಥೆಯ ತಾಣ
ಕೃಷ್ಣಾ ಭಾಗ್ಯ ಜಲ ನಿಗಮ ಸಹಾಯಕ ಕಾರ್ಯ ನಿರ್ವಾಹಕ ಕಚೇರಿ ಉಪ ವಿಭಾಗ 11, 12 ಮತ್ತು 13 ಕಚೇರಿಗಳ ಸುತ್ತಲೂ ಜಾಲಿಗಿಡಗಳು ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಸ್ವಚ್ಛತೆ ಇಲ್ಲದ ಕಾರಣ ವಿಷಜಂತುಗಳ ಕಾಟ ಹೆಚ್ಚಿದೆ. ಕಚೇರಿಗಳ ನಿರ್ವಹಣೆ ಕೊರತೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಸ್ವಚ್ಛತೆ ಇಲ್ಲದ ಕಾರಣ ಎಲ್ಲೆಂದರಲ್ಲಿ ಧೂಳು ಆವರಿಸಿವೆ. ಅಧಿಕಾರಿಗಳು ಸ್ವಚ್ಛತೆ ಕುರಿತು ಇನ್ನಾದರೂ ಗಮನ ಹರಿಸುತ್ತಾರೆಯೇ ಕಾದು ನೋಡಬೇಕಿದೆ.
ಕಚೇರಿಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇಲ್ಲಿಯವರೆಗೆ ಭರ್ತಿಯಾಗಿಲ್ಲ. ಕೆಲಸದ ಒತ್ತಡ ಹೆಚ್ಚಾದರೂ ಇದ್ದವರೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ. –ಆರ್. ಚಂದ್ರಶೇಖರ, ಸಹಾಯಕ ಕಾರ್ಯಪಾಲಕ ಅಭಿಯಂತರು ಉಪವಿಭಾಗ 12
ಕಚೇರಿ ಸುತ್ತಲೂ ಬೆಳೆದಿರುವ ಜಾಲಿ ಗಿಡಗಳ ಸ್ವತ್ಛಗೊಳಿಸಲು ಕ್ರಮ ವಹಿಸಲಾಗುತ್ತದೆ. ಕೆಟ್ಟಿರುವ ಕಂಪ್ಯೂಟರ್ ದುರಸ್ತಿ ಮಾಡಿಸಲಾಗುತ್ತದೆ. ಕೆಲ ಹುದ್ದೆಗಳು ಖಾಲಿ ಇದ್ದು, ಕಚೇರಿ ನಿರ್ವಹಣೆ ಮಾಡಲಾಗುತ್ತಿದೆ. -ಮನೋಹರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಉಪ ವಿಭಾಗ 11
-ನಾಗರಾಜ ತೇಲ್ಕರ್