Advertisement

Health: ಆರೋಗ್ಯ ಸಂಸ್ಥೆಯಲ್ಲಿ ಸ್ವಚ್ಛತ ಚಟುವಟಿಕೆ: ದಿನೇಶ್‌ ಗುಂಡೂರಾವ್‌

11:38 PM Sep 26, 2023 | Team Udayavani |

ಬೆಂಗಳೂರು: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛ ಆಸ್ಪತ್ರೆ ನಮ್ಮ ಆದ್ಯತೆ ಧ್ಯೇಯ ವಾಕ್ಯದೊಂದಿಗೆ ರಾಜ್ಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಸ್ವಚ್ಛತ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ಆರೋಗ್ಯ ಸಂಸ್ಥೆಯಲ್ಲಿನ ಅನುಪಯುಕ್ತ ಸಾಮಗ್ರಿಗಳು, ಪರಿಕರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಜತೆಗೆ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಔಷಧಿ ಸಸ್ಯೋದ್ಯಾನ ನಿರ್ಮಾಣ ಮತ್ತು ರೋಗವಾಹಕಗಳ ನಿಯಂತ್ರಣ ಚಟುವಟಿಕೆಗಳ ಪ್ರಾತ್ಯಕ್ಷಿಕೆಗೆ ಮೀನು ಸಾಕಾಣಿಕೆ ತೊಟ್ಟಿ ನಿರ್ಮಾಣ ಮಾಡಲಾಗುವುದು. ಜತೆಗೆ ಸ್ವಚ್ಛತೆಯ ಮಹತ್ವ ಮತ್ತು ನಡುವಳಿಕೆ ಬದಲಾವಣೆ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಕಿರು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕ ಚಟುವಟಿಕೆಗಳು ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು, ಸಮಾಜ ಸೇವಕರು ಸಂಘಟನೆಗಳು ಕೈ ಜೋಡಿಸ ಬಹುದಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next