Advertisement

ಬಿಇಒ ನೇತೃತದಲ್ವಿ ಮುಖ್ಯ ಶಿಕ್ಷಕರ ಭವನ ಸ್ವಚ್ಛತೆ

02:16 PM Jan 24, 2021 | Team Udayavani |

ಕೋಲಾರ: ಒಂದು ದಶಕದಿಂದ ಬೀಗ ಜಡಿದು ಕಸಕಡ್ಡಿ, ಪಾರ್ಥೇನಿಯಂನಿಂದ ಆವೃತ್ತವಾಗಿದ್ದ ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಗುರುಭವನಕ್ಕೆ ಬಿಇಒ ನಾಗರಾಜಗೌಡರ ನೇತೃತ್ವದಲ್ಲಿ ಸ್ವಚ್ಛತಾ
ಕಾರ್ಯ ಕೈಗೊಂಡು ಮುಕ್ತಿ ನೀಡಲಾಯಿತು.

Advertisement

ಮುಖ್ಯಶಿಕ್ಷಕರ ಸಭೆ, ಸಮಾರಂಭ ಮತ್ತಿತರ ಕಾರ್ಯಕ್ರಮಗಳಿಗಾಗಿ ನಿರ್ಮಿಸಿದ್ದ ಮುಖ್ಯಶಿಕ್ಷಕರ ಭವನವನ್ನು ಸುಮಾರು 10 ವರ್ಷಗಳ ಹಿಂದೆ ಬಂದ್‌ ಮಾಡಿದ್ದು, ಅದನ್ನು ಬಳಸುವ ಗೋಜಿಗೂ ಹೋಗಿರಲಿಲ್ಲ.

ಇದನ್ನರಿತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ ಸೇರಿದಂತೆ ಎಲ್ಲಾ
ಮುಖ್ಯಶಿಕ್ಷಕರನ್ನು ಸೇರಿಸಿ, ಸ್ವಚ್ಛತಾ ಕಾರ್ಯಕ್ಕೆ ನಾಂದಿಯಾಡಿದರು.

ಹಳೆಯ ಸಾಮಾನು ಹೊರಕ್ಕೆ: ಜಿಲ್ಲಾಧಿಕಾರಿಗಳ ಆದೇಶದಂತೆ ಸ್ವತ್ಛ ಶನಿವಾರ ಆಚರಿಸುತ್ತಿರುವ ಶಿಕ್ಷಣ ಇಲಾಖೆ ಇಂದು
ಮುಖ್ಯಶಿಕ್ಷಕರ ಭವನ ಸ್ವಚ್ಛತೆಗೆ ಬಿಇಒ ನೇತೃತ್ವದಲ್ಲಿ ಮುನ್ನುಡಿ ಬರೆಯಿತು. ಮೊದಲಿಗೆ ಕಟ್ಟಡದ ಬಾಗಿಲವರೆಗೂ ಬೆಳೆದು ನಿಂತಿದ್ದ ಪಾರ್ಥೇನಿಯಂ ನಾಶಪಡಿಸಲಾಯಿತು. ಇದಾದ ನಂತರ ಭವನದಲ್ಲಿದ್ದ ಹಳೆಯ ಸಾಮಾನುಗಳನ್ನು
ಹೊರಹಾಕಲಾಯಿತು.

ಇದನ್ನೂ ಓದಿ:ವ್ಯಕ್ತಿಯನ್ನು ಕೊಂದು ರಿಕ್ಷಾ ಸಮೇತ ಸುಟ್ಟು ಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಶೋಧ ಕಾರ್ಯ

Advertisement

ದೂಳು, ಗೂಡುಗಳಿಂದ ತುಂಬಿದ್ದ ಭವನವನ್ನು ಸ್ವತಃ ಬಿಇಒ ನಾಗರಾಜಗೌಡರು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಎಲ್ಲಾ ಮುಖ್ಯಶಿಕ್ಷಕರು, ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕೈಜೋಡಿಸಿದರು. ಇದೇ ಸಂದರ್ಭದಲ್ಲಿ ನಗರಸಭೆಯಿಂದ ಎರಡು ಟ್ಯಾಂಕರ್‌ ನೀರು ತರಿಸಿಕೊಂಡು ಇಡೀ ಕಟ್ಟಡಕ್ಕೆ ನೀರು ಹಾಕಿ ಶುದ್ಧಗೊಳಿಸಿದ್ದು, ಹಾಳು ಕೊಂಪೆಯಂತಿದ್ದ ಕಟ್ಟಡ ಕೊನೆಗೂ ಕೊಳಕಿನಿಂದ ಮುಕ್ತಿಪಡೆದು ಬಳಕೆಗೆ ಸಿದ್ಧವಾಯಿತು.

ಸ್ವತ್ಛತಾ ಕಾರ್ಯದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಮುಖ್ಯಶಿಕ್ಷಕರಾದ ಸಿ.ಎನ್‌.ಪ್ರದೀಪ್‌ಕುಮಾರ್‌, ಚಂದ್ರಪ್ಪ, ಮಹದೇವ ನಾಯಕ್‌, ಗಾಯತ್ರಿ ದೇವಿ, ಶಂಕರೇಗೌಡ, ರವಿ, ಸುನಂದಮ್ಮ, ರಾಧಾಮಣಿ, ದಾಸಪ್ಪ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next