ಕಾಸರಗೋಡು: ತೀವ್ರ ಶುಚೀಕರಣ ಯಜ್ಞ ಯೋಜನೆ ಅಂಗವಾಗಿ ಚೆರುವತ್ತೂರ್ ಗ್ರಾಮ ಪಂಚಾಯತ್‌ನ 5 ಕೆರೆಗಳ ಶುಚೀಕರಣ ಏಕಕಾಲಕ್ಕೆ ನಡೆದಿದೆ.
ಕಾರಿಪಳ್ಳಿ ಕುಂಡಂಕುಳಂ, ಅರೀಂದ್ರನ್ ಕುಂಡಂಕುಳಂ, ತೆಕ್ಕೇವೀಡಿನ್ ತಾಳೆಯುಳ್ಳ ಕೆರೆ, ಕೊಟ್ಟುಂಬುರಂ ಕೆರೆ, ಅಮ್ಮಿಂಕೋಡ್ ಕೆರೆಗಳ ಶುಚೀಕರಣ ಈ ಸಂದರ್ಭ ನಡೆದಿವೆ. ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಇತರ ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದರು. ಕುಟುಂಬಶ್ರೀ ಕಾರ್ಯಕರ್ತರು, ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು, ಹರಿತ ಕ್ರಿಯಾ ಸೇನೆ ಸದಸ್ಯರು ಶುಚೀಕರಣ ನಡೆಸಿದರು.
ತೆಂಗಿನ ಮಡಲು, ಇತರ ಮರಗಳ ಎಲೆಗಳು ಇತ್ಯಾದಿ ನಿರಂತರವಾಗಿ ಬೀಳುತ್ತಿರುವ ಪರಿಣಾಮ ಈ ಕೆರೆಗಳು ಅನೇಕ ಕಾಲಗಳಿಂದ ತ್ಯಾಜ್ಯಯುಕ್ತ ವಾಗಿದ್ದುವು.
ಬೇಸಗೆಯಾದುದರಿಂದ ಕೆರೆಗಳಲ್ಲಿ ನೀರು ಕಡಿಮೆಯಿದ್ದುದು ಶುಚೀಕರಣಕ್ಕೆ ಪೂರಕವಾಗಿತ್ತು. ಆರಂಭಕ್ಕೆ ಮಡಲು, ಎಲೆ ಇತ್ಯಾದಿ ತ್ಯಾಜ್ಯಗಳನ್ನು ತೆರವುಗೊಳಿಸಿ, ಅನಂತರ ಅಡಿಭಾಗದ ಕೆಸರನ್ನು ಮೇಲಕ್ಕೆತ್ತಲಾಗಿತ್ತು. ಕೆರೆಗಳ ಸುತ್ತಲೂ ಬೆಳೆದಿದ್ದ ಕಾಡಪೊದೆ ಕಡಿದು, ಕೆರೆಗಳಿಗೆ ಕಾಲುದಾರಿಯನ್ನೂ ನಿರ್ಮಿಸಲಾಗಿದೆ.
ಈ ಕೆರೆಗಳ ಪುನಶ್ಚೇತನ ಮೂಲಕ ಸ್ಥಳೀಯ ಜನೆತೆಗ ಕೃಷಿ, ಬಟ್ಟೆ ಒಗೆಯಲು ಇತ್ಯಾದಿಗೆ ಪೂರಕವಾಗಿದೆ.