Advertisement
ಕೇವಲ ಎರಡು ದಿನ ಪೌರಕಾರ್ಮಿಕರು ಪ್ರತಿಭಟನೆಗಿಳಿದರೆ ಗಾರ್ಡನ್ ಸಿಟಿಗೆ “ಗಾಬೇಜ್ ಸಿಟಿ‘ ಹಣೆಪಟ್ಟಿಯೂ ಅಂಟಿಕೊಳ್ಳುತ್ತದೆ. ಮತ್ತೂಂದು ಕಡೆ ಇದೇ ತ್ಯಾಜ್ಯ ದೊಡ್ಡ ಮಟ್ಟದ ಆದಾಯ ತಂದುಕೊಡುವ ಉದ್ಯಮವೂ ಆಗಿದೆ. ಆದರೆ, ಮನೆ–ಮನೆಗಳಿಂದ ಅದೇ ತ್ಯಾಜ್ಯ ಸಂಗ್ರಹಿಸುವವರ ಬಗ್ಗೆ ಇಷ್ಟೇ ಗಂಭೀರ ಚಿಂತನೆಗಳು ನಡೆಯುತ್ತಿವೆಯೇ? ಉತ್ತರ– ಇಲ್ಲ. ನಿತ್ಯ ನಗರವನ್ನು ಸ್ವತ್ಛಗೊಳಿಸುವವರ ಆರೋಗ್ಯ ಅವರಿಗೆ ಅರಿವಿಲ್ಲದೆ ಕ್ಷೀಣಿಸುತ್ತಿದೆ. ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯರಿಗೆ ಹೋಲಿಸಿದರೆ ಅವರ ಜೀವಿತಾವಧಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ.
Related Articles
Advertisement
ಪೌರಕಾರ್ಮಿಕರಿಗೆ ನೀಡುತ್ತಿರುವ ಸಾಧನಗಳು ಅವೈಜ್ಞಾನಿಕವಾಗಿವೆ. ತಳ್ಳುವ ಗಾಡಿಗಳಿಂದಪೌರಕಾರ್ಮಿಕರಲ್ಲಿ ಗರ್ಭಕೋಶದ ಸಮಸ್ಯೆ ಉಂಟಾಗುತ್ತಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಉದ್ದನೆಯ ಪೊರಕೆಗಳನ್ನು ನೀಡಲಾಗುತ್ತಿದೆ. ಇದರಿಂದ ಅವರಲ್ಲಿ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಕೊಳಕು ಪ್ರದೇಶಗಳೇ ಇವರಿಗೆ ಪಾಲಿಕೆಯು ಆಹಾರ ನೀಡುತ್ತಿದೆ. ಆಹಾರ ನೀಡುವಮುನ್ನ ಅವರು ಕೈ, ಕಾಲುಗಳನ್ನು ಸ್ವಚ್ಛ ವಾಗಿ ತೊಳೆದುಕೊಳ್ಳುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಬಹುತೇಕ ಕಡೆ ಶೌಚಾಲಯ ವ್ಯವಸ್ಥೆಯೂ ಇಲ್ಲ.ಹೀಗಾಗಿ, ಕೊಳಕಿನ ಅಂಶಗಳು ನೇರವಾಗಿ ಅವರ ದೇಹವನ್ನು ಸೇರುತ್ತಿದೆ. ಇನ್ನು ಪೌರಕಾರ್ಮಿಕರಮಕ್ಕಳಿಗೆ ವಿಶೇಷವಿದ್ಯಾರ್ಥಿ ವೇತನಗಳಿದ್ದು, ಅದರ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಸರ್ಕಾರಗಳು ಇವರಿಗೆ ಬಜೆಟ್‌ನಲ್ಲಿ ವಿಶೇಷ ಸೌಲಭ್ಯ ನೀಡಬೇಕು ಎಂದು ಡಾ.ಚಂದ್ರ ಶೇಖರ್ ಒತ್ತಾಯಿಸುತ್ತಾರೆ.
ಕಾಫಿ ವಿತ್ ಪೌರಕಾರ್ಮಿಕ: ಈ ಹಿಂದೆ ಕಾಫಿ ವಿತ್ ಪೌರಕಾರ್ಮಿಕ ಎಂಬ ಪ್ರಯೋಗವೊಂದು ನಡೆದಿತ್ತು. ಪೌರಕಾರ್ಮಿಕರ ಸಮಸ್ಯೆಗಳನ್ನು ಅರಿಯುವ ಜತೆಗೆ ಅವರೊಂದಿಗೆ ಆತ್ಮೀಯವಾಗಿ ಬೆರೆಯಲು ಇದು ಉತ್ತಮ ವೇದಿಕೆ ಆಗಿತ್ತು. ಇದರಡಿ ವಾರದ ಒಂದು ದಿನ ಪೌರಕಾರ್ಮಿರೊಂದಿಗೆಚಹಾ ಸೇವಿಸಿ, ಅವರ ಕುಂದು–ಕೊರತೆಗಳನ್ನುಕೇಳಲಾಗುತ್ತಿತ್ತು. ಖುದ್ದು, ಆಯುಕ್ತರೇ ಪೌರಕಾರ್ಮಿಕರೊಂದಿಗೆ ಮಾತನಾಡುತ್ತಿದ್ದರಿಂದ ಆಡಳಿತ ಯಂತ್ರದಲ್ಲಿನಅಧಿಕಾರಿಗಳು ಪೌರಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಈ ಕಾರ್ಯಕ್ರಮವನ್ನು ಪಾಲಿಕೆ ಆಯುಕ್ತರು ಮತ್ತೆ ಆರಂಭವಾದರೆ ಅವರ ಸಮಸ್ಯೆಗಳು ಕಡಿಮೆ ಆಗಬಹುದು.
ಶ್ವಾಸಕೋಶ, ಗರ್ಭಕೋಶ ಸಮಸ್ಯೆ ಹೆಚ್ಚು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಇತ್ತೀಚೆಗೆ 600 ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಮಾಡಿತ್ತು. ಇದರಲ್ಲಿ 60 ಮಂದಿಗೆ ಕ್ಯಾನ್ಸರ್ ಇರುವ ಶಂಕೆ ವ್ಯಕ್ತವಾಗಿದ್ದು, ಕಿದ್ವಾಯಿ ಈ ಬಗ್ಗೆಹೆಚ್ಚುವರಿ ತಪಾಸಣೆ ನಡೆಸುತ್ತಿದೆ. ಶ್ವಾಸಕೋಶ, ಗರ್ಭಕೋಶ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಪೌರಕಾರ್ಮಿಕರಲ್ಲಿ ಹೆಚ್ಚುಕಂಡು ಬರುತ್ತಿದ್ದು,ಶುಚಿತ್ವದ ಕೊರತೆಯೇ ಇದಕ್ಕೆ ಮೂಲ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ 15,300 ಪೌರಕಾರ್ಮಿಕರು ಕೆಲಸ ಮಾಡುತ್ತಿ¨ªಾರೆ. ಇವರಲ್ಲಿ ಎಷ್ಟು ಜನರಿಗೆ ಇಎಸ್‌ಐ ಸೌಲಭ್ಯ ನೀಡಲಾಗಿದೆ ಎನ್ನುವ ವಿವರ ಕೂಡಪಾಲಿಕೆ ಬಳಿ ಲಭ್ಯವಿಲ್ಲ. ಇನ್ನು ಕೆಲವರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ.
ಸಾರ್ವಜನಿಕರ ನಿರ್ಲಕ್ಷ್ಯ ಧೋರಣೆ: ನಗರದ ಕೆಲ ನಾಗರಿಕೆ ನಿರ್ಲಕ್ಷ್ಯ ಧೋರಣೆಯಿಂದ ಪೌರಕಾರ್ಮಿಕರು ಪರೋಕ್ಷವಾಗಿ ಅನಾರೋಗ್ಯ ಸಮಸ್ಯೆಗಳಿಗೆ ಹತ್ತಿರವಾಗುತ್ತಿದ್ದಾರೆ. ಮುಟ್ಟಿನ ಬಟ್ಟೆಗಳು (ಸ್ಯಾನಿಟರಿ), ಗಾಜಿನ ಚೂರು, ಬ್ಲೇಡ್ ಮತ್ತು ಸೂಜಿ ಸೇರಿದಂತೆ ರಾಸಾಯನಿಕ ಅಂಶ ಒಳಗೊಂಡ ವಸ್ತುಗಳನ್ನು ಕೆಲವರು ತ್ಯಾಜ್ಯದೊಂದಿಗೆ ಎಸೆಯುತ್ತಾರೆ. ಇದರಿಂದ ಪೌರಕಾರ್ಮಿಕರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಕುಗ್ಗುತ್ತಿದೆ ಕಾರ್ಮಿಕರ ಜೀವಿತಾವಧಿ: ಸಾಮಾನ್ಯರಿಗೆ ಹೋಲಿಸಿದರೆ, ಪೌರಕಾರ್ಮಿಕರ ಜೀವಿತಾವಧಿ ಕಡಿಮೆ ಆಗುತ್ತಿರುವ ಆತಂಕಕಾರಿ ಅಂಶ ಕೂಡ ಇತ್ತೀಚೆಗೆ ಬೆಳಕಿಗೆಬಂದಿದೆ. ನಗರದಲ್ಲಿ ಸಾಮಾನ್ಯವಾಗಿ ಜನರಜೀವಿತಾವಧಿ ಅಂದಾಜು 65-70 ವರ್ಷ ಇದೆ. ಪೌರಕಾರ್ಮಿಕರು 50ರಿಂದ 60 ವರ್ಷ ಬದುಕುವುದೇ ಹೆಚ್ಚು. ಈ ನಿಟ್ಟಿನಲ್ಲಿ ಅವರ ಜೀವಿತಾವಧಿ ತುಂಬಾ ಕಡಿಮೆ ಎನ್ನುತ್ತಾರೆ ಪೌರಕಾರ್ಮಿಕರ ಬಗ್ಗೆ ಐದು ವರ್ಷ ಅಧ್ಯಯನ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ದು. ಸರಸ್ವತಿ. ಪೌರಕಾರ್ಮಿಕರು ತಾವು ದುಡಿದ ಬಹುತೇಕ ಹಣ ಆರೋಗ್ಯಸಮಸ್ಯೆಗಳಿಗೇ ವೆಚ್ಚ ಆಗುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದು, ವಾರಕ್ಕೆ ಒಂದೇ ಒಂದು ರಜೆಯೂ ಇಲ್ಲ ಎಂದು ಸರಸ್ವತಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಅಗತ್ಯ: ಪೌರಕಾರ್ಮಿಕರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ ಕಿದ್ವಾಯಿ ಸ್ಮಾರಕಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ. ಪೌರಕಾರ್ಮಿಕರು ತಂಬಾಕು, ಗುಟ್ಕಾ ಬಳಸುವುದರಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ ಪ್ರಕರಣಗಳುಹೆಚ್ಚಾಗುತ್ತಿವೆ. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದರಿಂದ ಹೊಟ್ಟೆ ನೋವಿಗೆ ಸಂಬಂಧಿಸಿದ ರೋಗಗಳು ಬರುತ್ತಿವೆ. ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ಗರ್ಭಕೋಶದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದೂ ಇದೆ ಅವರು ಹೇಳುತ್ತಾರೆ.
-ಹಿತೇಶ್ ವೈ