Advertisement

ಯುವ ಮೋರ್ಚಾದಿಂದ ಸ್ವತ್ಛತಾ ಕಾರ್ಯಕ್ರಮ

02:04 PM Feb 01, 2021 | Team Udayavani |

ಬಂಕಾಪುರ: ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣವನ್ನು ಸ್ವತ್ಛತೆಗೊಳಿಸುವ ಮೂಲಕ ಸ್ವತ್ಛ ಭಾರತದ ಪರಿಕಲ್ಪನೆಗೆ ಪುಷ್ಠಿ ನೀಡಲಾಯಿತು.

Advertisement

ಸಮುದಾಯ ಆರೋಗ್ಯ ಕೇಂದ್ರದ ಗಾರ್ಡನ್‌ ಹಾಗೂ ಸುತ್ತಮುತ್ತಲಿನ ಆವರಣವನ್ನು ಸ್ವತ್ಛಗೊಳಿಸುವ ಮೂಲಕ ಜನರಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿರಿಸಿಕೊಳ್ಳುವ ಮೂಲಕ ಆರೋಗ್ಯಯುತ ಪರಿಸರ ನಿರ್ಮಾಣಕ್ಕೆಪ್ರತಿಯೊಬ್ಬರೂ ಶ್ರಮಿಸುವ ಅವಶ್ಯಕತೆಯಿದೆ ಎಂದರು.

ಇದನ್ನೂ ಓದಿ:ಗದಗ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ

ಬಿಜೆಪಿ ಮುಖಂಡ ಬಸವರಾಜ ನಾರಾಯಣಪುರ ಮಾತನಾಡಿ, ಪ್ರಧಾನಿ ಮೋದಿಜಿ ಸ್ವತ್ಛ ಭಾರತದ ಕನಸನ್ನು ನನಸು ಮಾಡುವ ಅವಶ್ಯಕತೆಯಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಿಜೆಪಿ ಯುವಮೋರ್ಚಾ ಆಶ್ರಯದಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ನರಹರಿ ಕಟ್ಟಿ, ಸಂತೋಷದೊಡ್ಡಮನಿ, ಸೋಮಶೇಖರ ಗೌರಿಮಠ, ರಾಜು  ಸುಲಾಖೆ, ಆನಂದ ವಳಗೇರಿ, ಬಾಪುಗೌಡ ಪಾಟೀಲ, ಶಂಬಣ್ಣ ವಳಗೇರಿ, ಹೊನ್ನಪ್ಪ ಹೂಗಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next