Advertisement
ಕೃಷಿ ಭೂಮಿಗೆ ಹಾಗೂ ಪಟ್ಟಣ ಭಾಗದಲ್ಲಿ ಕುಡಿಯುವ ನೀರಿಗೆ ಕಿಂಡಿ ಅಣೆಕಟ್ಟು, ಡ್ಯಾಂಗಳೇ ಆಧಾರ. ಪ್ರಸಕ್ತ ಮಳೆ ನಿಂತಿದ್ದು, ನೀರಿನ ಒಳ ಹರಿವು ಕ್ಷೀಣಿಸಿದೆ. ಪ್ರಸಕ್ತ ನಿರ್ವಹಣೆ ತಡವಾಗಿದ್ದು, ಶೀಘ್ರ ಹಲಗೆ ಸ್ವತ್ಛತೆ ಹಾಗೂ ಹಲಗೆ ಜೋಡಣೆ ಪ್ರಕ್ರಿಯೆ ನಡೆಸಿದಲ್ಲಿ ಕೃಷಿಗೆ ಸಾಕಷ್ಟು ನೀರು ಲಭ್ಯವಾಗಲಿದೆ ಎಂದು ಉದಯವಾಣಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಅಣೆಕಟ್ಟುಗಳ ಸ್ವತ್ಛತೆಗೆ ನಿರ್ಧರಿಸಿದೆ.
ಬೇಸಗೆಯಲ್ಲಿ ಕೃಷಿ ನೀರಿಗೆ ಪೂರಕವಾಗಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಭಾಗಗಳಲ್ಲಿ ಪ್ರತಿ ವರ್ಷ ನದಿ ಹಾಗೂ ಉಪ ನದಿಗಳಿಗೆ ಸಾಂಪ್ರದಾಯಿಕ ಮಣ್ಣಿನ ಕಟ್ಟ (ಒಡ್ಡು) ನಿರ್ಮಾಣಕ್ಕೆ ಕೃಷಿಕರು ಮುಂದಾಗುತ್ತಿದ್ದರು. ಆದರೆ ಈ ವರ್ಷ ಕಿಂಡಿ ಅಣೆಕಟ್ಟುಗಳಲ್ಲಿ ಕಸ ಸಂಗ್ರಹವಾಗಿದ್ದು, ಅದನ್ನು ತೆರವುಗೊಳಿಸದೇ ಕೃಷಿ ಕಟ್ಟ ಅಳವಡಿ ಸುವಂತಿರಲಿಲ್ಲ. ಇಲಾಖೆಯು ಸ್ವತ್ಛತಾ ಕಾರ್ಯ ಆರಂಭಿಸಿರುವುದರಿಂದ ಕೃಷಿಕರಿಗೆ ಅನುಕೂಲವಾಗಲಿದೆ.
Related Articles
ಕಿಂಡಿ ಅಣೆಕಟ್ಟು ನಿರ್ವಹಣೆಗೆಂದು ನೀರು ಬಳಕೆದಾರರ ಸಂಘವನ್ನು ಇಲಾಖೆಯಿಂದ ರಚಿಸಲಾಗುತ್ತದೆ. ಅಣೆಕಟ್ಟುಗಳ ಗಾತ್ರಕ್ಕನುಗುಣವಾಗಿ ಹಲಗೆ ಜೋಡಣೆ, ಮರಮಟ್ಟು ತೆರವು ಇತ್ಯಾದಿ ನಿರ್ವಹಣೆಗೆ 10 ಸಾವಿರದಿಂದ 60 ಸಾವಿರ ರೂ. ವರೆಗೆ ವೆಚ್ಚವಾಗಲಿದೆ.
-ಶಿವಪ್ರಸನ್ನ , ಎಇ (ಪ್ರಭಾರ), ಸಣ್ಣ ನೀರಾವರಿ ಇಲಾಖೆ, ದ.ಕ
Advertisement
ಸ್ವಚ್ಛಗೊಳಿಸಲಾಗುತ್ತಿದೆಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ 410 ಕಿಂಡಿ ಅಣೆಕಟ್ಟುಗಳಿವೆ. ಕೆಲವೆಡೆ ಸ್ವತ್ಛತೆ ಮುಗಿದಿದ್ದು, ಉಳಿದೆಡೆ ಪ್ರಗತಿಯಲ್ಲಿದೆ.
-ಶೇಷಕೃಷ್ಣ , ಎಇಇ, ಸಣ್ಣ ನೀರಾವರಿ ಇಲಾಖೆ,ಉಡುಪಿ