Advertisement

ಬಸ್ಸು ನಿರ್ವಾಹಕನಿಂದಲೇ ಪ್ರಯಾಣಿಕರಿಗೆ ಸ್ವಚ್ಛತೆ ಪಾಠ

01:18 AM Jan 23, 2020 | Sriram |

ಉಡುಪಿ: ಸ್ವಚ್ಛ ಭಾರತ ಅಭಿಯಾನಕ್ಕೆ ಇಂದು ಗರಿಷ್ಠ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಂಘ ಸಂಸ್ಥೆಗಳು, ಆಡಳಿತ ನೈರ್ಮಲ್ಯದ ಜಾಗೃತಿಯನ್ನು ಜನರಿಗೆ ನೀಡುತ್ತ ಬಂದಿದ್ದಾರೆ. ಇದಷ್ಟೇ ಅಲ್ಲ ಸ್ವಚ್ಛತೆ ಬಗ್ಗೆ ಇಲ್ಲೊಬ್ಬರು ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಆಂದೋಲನದ ಭಾಗವಾಗಬೇಕು ಎಂದು ಸಂದೇಶ ಸಾರಿದ್ದಾರೆ.

Advertisement

ಇವರು ಉಡುಪಿಯಿಂದ ಧರ್ಮಸ್ಥಳಕ್ಕೆ ಸಂಚರಿಸುವ ವಿಶಾಲ ಎಕ್ಸ್‌ಪ್ರೆಸ್‌ ಬಸ್‌ನ ನಿರ್ವಾಹಕ ದೇವದಾಸ್‌ ಸಾಲ್ಯಾನ್‌. ಬಸ್‌ ಒಳಗೆ ಕಸದ ಡಬ್ಬಿ ಅಳವಡಿಸಿ ಸ್ವಚ್ಛತೆಗೆ ಗಮನ ಹರಿಸಿದ್ದಾರೆ.

ಸ್ವಚ್ಛತೆಗೆ ಆದ್ಯತೆ
ಬಸ್‌ನಲ್ಲೂ ಕಸದ ನಿರ್ವಹಣೆ ಆಗಬೇಕು, ಎಸೆಯಬಾರದು ಎಂಬ ಉದ್ದೇಶದಿಂದ ವಿಭಿನ್ನ ಮಾದರಿಯ ಕಸದ ತೊಟ್ಟಿಯನ್ನು ಬಸ್‌ನ ಮುಂಭಾಗ, ಹಿಂಭಾಗದ ಬಾಗಿಲಿನ ಪಕ್ಕದಲ್ಲಿ ಅಳವಡಿಸಿದ್ದಾರೆ. 2 ವರ್ಷಗಳ ಹಿಂದೆ ಹಳೆಯ ಪೈಂಟ್‌ ಡಬ್ಬಕ್ಕೆ ಸ್ಟಿಕ್ಕರ್‌ ಹಾಕಿ ಬಸ್‌ನಲ್ಲಿ ಇಡಲಾಗಿತ್ತು. ಇದಕ್ಕೆ ಸ್ಪಂದನೆ ಬಂದ ಹಿನ್ನೆಲೆಯಲ್ಲಿ ಈ ಕಸದ ಡಬ್ಬಿಬೆಂಗಳೂರಿನಿಂದ ತರಿಸ ಲಾಗಿದೆ. ಸಂಗ್ರಹವಾದ ಕಸವನ್ನು ನಗರಸಭೆಯ ಕಸದಬುಟ್ಟಿಗೆ ಹಾಕಲಾಗುತ್ತದೆ.

ಪ್ರಯಾಣಿಕರು ಸೂಚನ ಫ‌ಲಕ ನೋಡಿ ಕಸವನ್ನು ಬಸ್‌ನ ಕಿಟಕಿಯಿಂದ ಹೊರಹಾಕುವುದು ಕಡಿಮೆಯಾಗಿದೆ ಎನ್ನುತ್ತಾರೆ ದೇವದಾಸ್‌ ಅವರು.

ಪ್ರಯಾಣಿಕರ ಮೆಚ್ಚುಗೆ ದೂರದ ಕಡೆಗಳಿಗೆ ತೆರಳುವ ಬಸ್‌ಗಳಲ್ಲಿ ಕಸದ ಬುಟ್ಟಿ ಅಗತ್ಯ ಇರುವುದನ್ನು ತಿಳಿದುಕೊಂಡಿದ್ದೆ. ಪೈಂಟ್‌ ಡಬ್ಬದಿಂದ ಆರಂಭಿಸಿ ಈಗ ಹಿಂಬದಿ ಮತ್ತು ಮುಂಬದಿಯ ಬಾಗಿಲಿನ ಮೇಲೆ ಈ ಕಸದ ಡಬ್ಬಿಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಬಸ್‌ಗಳಲ್ಲೂ ಇದೆ ಮಾದರಿ ಜಾರಿಯಾದರೆ ಮತ್ತಷ್ಟು ಸ್ವಚ್ಛ ಜಾಗೃತಿಯಾಗಲು ಸಾಧ್ಯವಿದೆ.
-ದೇವದಾಸ್‌ ಸಾಲ್ಯಾನ್‌,
ಬಸ್ಸು ನಿರ್ವಾಹಕರು

Advertisement

ಪ್ರಯಾಣಿಕರ ಮೆಚ್ಚುಗೆ
ದೂರದ ಕಡೆಗಳಿಗೆ ತೆರಳುವ ಬಸ್‌ಗಳಲ್ಲಿ ಕಸದ ಬುಟ್ಟಿ ಅಗತ್ಯ ಇರುವುದನ್ನು ತಿಳಿದುಕೊಂಡಿದ್ದೆ. ಪೈಂಟ್‌ ಡಬ್ಬದಿಂದ ಆರಂಭಿಸಿ ಈಗ ಹಿಂಬದಿ ಮತ್ತು ಮುಂಬದಿಯ ಬಾಗಿಲಿನ ಮೇಲೆ ಈ ಕಸದ ಡಬ್ಬಿಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಬಸ್‌ಗಳಲ್ಲೂ ಇದೆ ಮಾದರಿ ಜಾರಿಯಾದರೆ ಮತ್ತಷ್ಟು ಸ್ವಚ್ಛತೆ ಜಾಗೃತಿಯಾಗಲು ಸಾಧ್ಯವಿದೆ.
-ದೇವದಾಸ್‌ ಸಾಲ್ಯಾನ್‌,
ಬಸ್ಸು ನಿರ್ವಾಹಕರು

ಸ್ವಚ್ಛತೆಯ ಜಾಗೃತಿ
ಪ್ರಯಾಣಿಕರಿಗೆ ಸ್ವಚ್ಛತೆ ಹಾಗೂ ಡೆಸ್ಟ್‌ ಬಿನ್‌ ಬಳಸುವ ಸಲುವಾಗಿಯೇ ಘೋಷಣೆ (ಅನೌಸ್‌Õಮೆಂಟ್‌)ಕೂಡ ದೇವದಾಸ್‌ ಅವರೇ ಸ್ವತಃ ರೆಕಾರ್ಡ್‌ ಮಾಡಿದ್ದಾರೆ! ಪ್ರಯಾಣದ ಮಧ್ಯೆ ಈ ಘೋಷಣೆಯನ್ನು ಕೇಳಿಸಿ ಜಾಗೃತಿ ಮೂಡಿಸಲಾಗುತ್ತದೆ. ಇಷ್ಟೇ ಅಲ್ಲದೆ ಸೀಟ್‌ಗಳ ಹಿಂಬದಿಯಲ್ಲಿ ಸ್ವಚ್ಛತೆಯ ಸೂಚನ ಫ‌ಲಕ ಮತ್ತು ಚಾಲಕರ ಹಿಂದಿನ ಸೀಟ್‌ನ ಮೇಲೆ ದೊಡ್ಡ ಸೂಚಕ ಫ‌ಲಕ ಆಳವಡಿಸಲಾಗಿದೆ. ಈ ವಿನೂತನ ಪ್ರಯೋಗದ ಪೋಸ್ಟರ್‌ಗಳು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next