Advertisement

ಘಟಪ್ರಭಾ ತೀರದಲ್ಲಿ ಸ್ವಚ್ಛತಾ ಅಭಿಯಾನ

01:37 PM Mar 23, 2022 | Team Udayavani |

ಮುಧೋಳ: ಘಟಪ್ರಭಾ ನದಿ ತೀರದಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಕಿರುವ, ಸ್ನಾನ ಮಾಡಿ ಹಾಗೇ ಉಳಿಸಿ ಹೋಗಿರುವ ಬಟ್ಟೆಗಳು, ಕಸ ಕಡ್ಡಿಗಳು, ಉಳಿದಿರುವ ತ್ಯಾಜ್ಯ ವಸ್ತುಗಳನ್ನು ಬಿಸಾಕಲಾಗಿತ್ತು. ಅದನ್ನು ಗಮನಿಸಿ ಸಂಗ್ರಹಿಸಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ದಾಲ್ಮಿಯಾ ಸಿಮೆಂಟ್‌ ಭಾರತ್‌ ಲಿಮಿಟೆಡ್‌ ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕ ಉಮೇಶ ದೇಸಾಯಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ನದಿ ತೀರದ ಭಾಗದಲ್ಲಿ ತ್ಯಾಜ್ಯ ವಸ್ತುಗಳ ಸಂಗ್ರಹವಾಗಿತ್ತು. ಆ ಸಮಸ್ಯೆಯನ್ನು ಗಮನಿಸಿಯೇ ನದಿ ಯಾವಾಗಲೂ ಸ್ವಚ್ಛತೆಯಿಂದ ಕೂಡಿರಬೇಕು. ತ್ಯಾಜ್ಯ ಮುಕ್ತವಾಗಿರಬೇಕೆಂಬ ಕಳಕಳಿಯಿಂದಲೇ ನಮ್ಮ ಕಂಪನಿಯ ಅಧಿಕಾರಿಗಳು, ಸಿಬ್ಬಂದಿ, ಸ್ನೇಹಿತರ ಸಹಕಾರದಿಂದ ಸ್ವಚ್ಛತೆ ಅಭಿಯಾನ ಆಯೋಜನೆ ಮಾಡಿದ್ದೇವೆ. ಮುಂದೇ ಇದೇ ರೀತಿ ವಿಭಿನ್ನವಾಗಿರುವ ಕಾರ್ಯಗಳನ್ನು ಮಾಡುವ ಆಶಯ ವನ್ನು ದೇಶಾಯಿ ವ್ಯಕ್ತಪಡಿಸಿದರು.

ಬೆಳಗ್ಗೆ 6.30ರಿಂದ 8 ಗಂಟೆವರೆಗೂ ಅಕ್ಕಪಕ್ಕದ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ನಗರಸಭೆ ವಾಹನಗಳಿಗೆ ತುಂಬಿದರು. ನಗರಸಭೆ ಅಧ್ಯಕ್ಷ ಗುರುಪಾದ ಕುಳಲಿ, ಪೌರಾಯುಕ್ತ ಶಿವಪ್ಪ ಅಂಬಿಗೇರ, ಸಿಮೆಂಟ್‌ ಕಂಪನಿಯ ಅಧಿಕಾರಿ ಅಜಯಸಿಂಗ್‌, ಮೋಹನ ಎಂ.ಎನ್‌.,ಜೈ ಶಂಕರ ತಿವಾರಿ, ಮಾಂಕುಮಾರ ಪಾಠಕ, ಆರೋಗ್ಯ ನಿರೀಕ್ಷಿಕ ಸಂತೋಷ ಬೆಳ್ಳಿಕಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next