ಬಂಗಾರಪೇಟೆ: ಪಟ್ಟಣದ ಪ್ರದೇಶದ ನಾಗರೀಕರಂತೆ ಗ್ರಾಮೀಣ ಭಾಗದ ಜನರೂ ಸಹ ಆರೋಗ್ಯದ ಹಿತದೃಷ್ಠಿಯಿಂದ ಶುದ್ಧ ಕುಡಿಯುವ ನೀರು ಕುಡಿಯಲೆಂದು ಸರ್ಕಾರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟನಗಳನ್ನು ಅಳವಡಿಸಿದೆ. ಆದರೆ ಅದು ಕೆಟ್ಟರೆ ಮತ್ತೆ ದುರಸ್ತಿಗೊಳಿಸದೆ ಆಡಳಿತ ಯಂತ್ರ ಕಡೆಗಣಿಸಿರುವುದರಿಂದ ಗ್ರಾಮಗಳಲ್ಲಿ ಮತ್ತೆ ಹಳೇ ಪದ್ಧತಿಗೆ ಮರಳುವಂತಾಗಿದೆ.
ತಾಲೂಕಿನ ಆಂದ್ರಪ್ರದೇಶ, ತಮಿಳುನಾಡಿನ ಗಡಿಭಾಗಕ್ಕೆಗೆ ಅಂಟಿಕೊಂಡಿರುವ ದೋಣಿ ಮಡಗು ಗ್ರಾಪಂ ವ್ಯಾಪ್ತಿಯ ಪೊಲೇನಹಳ್ಳಿ ಹಾಗೂ ಕೆದರಿನತ್ತ ಗ್ರಾಮಗಳಲ್ಲಿರುವ ಶುದ್ಧ ಕುಡಿವವ ನೀರಿನ ಘಟಕಗಳು ಕೆಟ್ಟು ಹಲವು ವರ್ಷಗಳೇ ಕಳೆದರೂ ಯಾರೂ ದುರಸ್ತಿ ಗೊಳಿಸದ ಕಾರಣ ಗ್ರಾಮಸ್ಥರು ಶುದ್ಧ ನೀರಿಗಾಗಿ ಕಿ.ಮೀ ಗಟ್ಟಲೆ ಅಲೆಯುವಂತಾಗಿದೆ.
ಈ ಎರಡೂ ಗ್ರಾಮಗಳಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದ್ದು ಜನರು ಲವಣಾಂಶ ತುಂಬಿರುವ ನೀರು ಕುಡಿದು ಹಲವು ಕಾಯಿಲೆಗಳಿಗೆ ಶರಣಾಗಿದ್ದರು. ನಿತ್ಯ ಒಂದಲ್ಲಾ ಒಂದು ಅನಾರೋಗ್ಯಕ್ಕೆ ಸಿಲುಕಿ ಪರ ದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಶುದ್ಧ ನೀರಿನ ಘಟಗಳನ್ನು ಅಳವಡಿಸಿತ್ತು. ಪ್ರಾರಂಭದಲ್ಲಿ ಯಂತ್ರಗಳನ್ನು ಉತ್ತಮವಾಗಿ ನಿರ್ವಹಣೆ ಸಹ ಮಾಡುತ್ತಿದ್ದರು. ಆದರೆ ಈಗ ಯಂತ್ರಗಳು ಕೆಟ್ಟು ತುಕ್ಕು ಹಿಡಿದಿದ್ದರೂ ಕೇಳುವವರೇ ಇಲ್ಲ. ಕದರಿನತ್ತ ಗ್ರಾಮದಲ್ಲಿ ಅಧಿಕವಾಗಿ ನೀರಿನಲ್ಲಿ ಫ್ಲೋರೈಡ್ ಅಂಶವಿದ್ದು ಈ ಗ್ರಾಮದಲ್ಲಿ ಲಭ್ಯ ಇರುವ ನೀರನ್ನು ಕುಡಿದರೆ ಜನರು ನಾನಾ ಸಮಸ್ಯೆಗಳಿಗೆ ತುತ್ತಾಗಿದ್ದರು. ಯುವಕರೂ ಸೇರಿದಂತೆ ಎಲ್ಲರಿಗೂ ಹಲ್ಲುಗಳು ಸವೆತ ಮೂಲೆಗಳು ಸಹ ಸವೆದು ನರಕಯಾತನೆ ಅನುಭಸುತ್ತಿದ್ದರು. ಕೆಲವರು ಗ್ರಾಮವನ್ನೇ ತೊರೆದಿದ್ದರು. ಮತ್ತೆ ಲವಣಾಂಶದಿಂದ ಕೂಡಿರುವ ನೀರನ್ನು ಜನರು ಕುಡಿಯುವ ಅನಿವಾರ್ಯತೆ ಎದುರಾಗಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಕೆಟ್ಟಿರುವ ಯಂತ್ರಗಳನ್ನು ದುರಸ್ತಿಗೊಳಿಸಿ ಲವಣಾಂಶದ ನೀರು ಕುಡಿಯುವುದನ್ನು ತಪ್ಪಿಸುವರೇ ಎಂದು ಎರಡೂ ಗ್ರಾಮಸ್ಥರು ಆಸೆ ಕಣ್ಣಿನಿಂದ ಎದುರು ನೋಡುತ್ತಿದ್ದಾರೆ.
ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣ : ಸರ್ಕಾರ ಕೆನರಾ ಬ್ಯಾಂಕ್ ಸಹ ಭಾಗಿತ್ವದಲ್ಲಿ ಶುದ್ಧ ನೀರಿನ ಘಟನೆ ತೆರೆಯಿತು. ಈಗ ಯಂತ್ರ ಕೆಟ್ಟು ವರ್ಷಗಳೇ ಕಳೆದರೂ ಯಾರೂ ಗ್ರಾಮದ ಕಡೆ ಮುಖ ಮಾಡಿಲ್ಲ. ಇದೇ ರೀತಿ ಪೊಲೇನಹಳ್ಳಿ ಗ್ರಾಮದ ಸ್ಥಿತಿ ಇದೆ.ಈ ಎರಡೂ ಗ್ರಾಮದವರು ಶುದ್ಧ ನೀರನ್ನು ಕುಡಿದು ಅಭ್ಯಾಸವಾಗಿದ್ದು ಬೋರ್ ನೀರು ಕುಡಿಯಲು ಆಗದೆ ಶುದ್ಧ ನೀರಿಗಾಗಿ ನಿತ್ಯ ದೂರದ ಗ್ರಾಮಗಳತ್ತ ಅಲೆಯುವಂತಾಗಿದೆ.
ಯಂತ್ರಗಳು ಕೆಟ್ಟಿರುವ ಬಗ್ಗೆ ಗ್ರಾಪಂಗೆ ದೂರು ನೀಡಿದರೆ ನಮ್ಮ ವ್ಯಾಪ್ತಿಗೆ ಬರಲ್ಲ ಎನ್ನುವರು ಜಿಪಂ ಇಲಾಖೆ ಎಇಇ ಗಮನಕ್ಕೆ ತಂದರೂ ಉಪಯೋಗ ವಾಗಿಲ್ಲ, ಇನ್ನು ಶಾಸಕರ ಗಮನಕ್ಕೆ ತಂದರೂ ಅವರೂ ಸಹ ಆಸಕ್ತಿ ತೋರು ತ್ತಿಲ್ಲ ಎಂದು ಗ್ರಾಮದ ರಿಯ ಮುಖಂಡ ರಾದ ಮುನಿವೆಂಕಟಪ್ಪ ದೂರಿದ್ದಾರೆ.