Advertisement
ಆದರೆ, ಅದು ಕೆಟ್ಟರೆ ಮತ್ತೆ ದುರಸ್ತಿಗೊಳಿ ಸದೆ ಆಡಳಿತ ಯಂತ್ರ ಕಡೆಗಣಿಸಿರುವು ದರಿಂದ ಗ್ರಾಮಗಳಲ್ಲಿ ಮತ್ತೆ ಹಳೆಯ ಪದ್ಧತಿ ಮರಳುವಂತಿದೆ. ಮಾಗಡಿ ತಾಲೂಕಿನ ಬಿಸ್ಕೂರು ಗ್ರಾಪಂ ವ್ಯಾಪ್ತಿಯ ಬಿಸಲಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷವೇ ಕಳೆದರೂ ಈವರೆಗೂ ಇದನ್ನು ಯಾರೂ ದುರಸ್ತಿಗೊಳಿಸಿಲ್ಲ. ಈ ಗ್ರಾಮಗಳಲ್ಲಿ ಪ್ಲೊರೈಡ್ ಅಂಶ ಅಧಿಕವಾಗಿದ್ದು, ಜನರು ಲವಣಾಂಶ ತುಂಬಿರುವ ನೀರು ಕುಡಿದು ಹಲವು ಕಾಯಿಲೆಗಳಿಗೆ ತುತ್ತಾಗಿದ್ದರು. ನಿತ್ಯ ಒಂದಲ್ಲ ಒಂದು ಅನಾರೋಗ್ಯಕ್ಕೆ ಸಿಲುಕಿ ಪರದಾಡುತ್ತಿದ್ದರು. ಈ ಹಿನ್ನೆಲೆ ಸರ್ಕಾರ ಶುದ್ಧ ನೀರಿನ ಘಟಕ ಅಳವಡಿಸಿತ್ತು. ಆದರೆ, ಯಂತ್ರಗಳು ಕೆಟ್ಟ ಬಳಿಕ ಕೇಳುವವರೇ ಇಲ್ಲ. ಬಿಸಲಹಳ್ಳಿ, ಬಸವನಗುಡಿಪಾಳ್ಯ ಗ್ರಾಮದಲ್ಲಿ ಅಧಿಕ ಪ್ರಮಾಣದ ಪ್ಲೊರೈಡ್ ಅಂಶವಿದೆ.
Related Articles
Advertisement
ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ: ಭರವಸೆ : ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರುಪಯುಕ್ತ ವಾಗಿರುವ ಬಗ್ಗೆ ಮಾಹಿತಿ ಬಂದಿದೆ. ದುರಸ್ತಿ ಬಗ್ಗೆ ಕ್ರಮ ವಹಿಸಲಾಗುವುದು. ತ್ವರಿತವಾಗಿ ಎರಡು ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಿ ಶೀಘ್ರದಲ್ಲೇ ಜನರಿಗೆ ಶುದ್ಧ ನೀರು ಪೂರೈಸಲು ಕ್ರಮ ವಹಿಸಲಾಗುವುದು ಎಂದು ಡಿ.ಕೆ. ಚಾರಿಟಬಲ್ ಟ್ರಸ್ಟ್ ತಿಳಿಸಿದೆ.
ನೀರಿನ ಘಟಕ ನಮ್ಮ ಪಂಚಾಯಿತಿಗೆ ಸುಪರ್ದಿಗೆ ನೀಡಿಲ್ಲ. ಡಿ.ಕೆ.ಟ್ರಸ್ಟ್ ಅಂತ ಮಾಡಿಕೊಂಡು ಅವರೇ ಘಟಕ ಸ್ಥಾಪಿಸಿ ಅವರ ಸುಪರ್ದಿನಲ್ಲೇ ಇದೆ. ನಾವೂ ಕೂಡ 3 ಬಾರಿ ರಿಪೇರಿ ಮಾಡಿ ಸಿದ್ದೇವೆ. ಟ್ರಸ್ಟ್‌ನವರು ನಮ್ಮ ಪಂಚಾಯಿತಿ ಸುಬರ್ಧಿಗೆ ಬಿಟ್ಟರೆ ನಾವು ಘಟಕವನ್ನು ನಿರ್ವಹಿಸುತ್ತೇವೆ. -ಲಕ್ಷ್ಮಮ್ಮ, ಬಿಸ್ಕೂರು ಗ್ರಾಪಂ ಅಧ್ಯಕ್ಷೆ
ನೀರಿನ ಘಟಕವನ್ನು ಶೀಘ್ರದಲ್ಲೇ ದುರಸ್ತಿಗೊಳಿಸಬೇಕು. ಇದು ಹಾಳಾಗಿರುವ ಕಾರಣ ಕುಡಿಯುವ ನೀರಿಗಾಗಿ ಅಲೆಯಬೇಕಿದೆ. ಇಲ್ಲಿನ ಘಟಕ ದುರಸ್ತಿ ಯಾದರೆ, ಸುತ್ತಮುತ್ತಲಿನ ನಾಗರಿಕರಿಗೆ ನೀರಿನ ಸಮಸ್ಯೆ ನಿವಾರಣೆ ಆಗಲಿದೆ. – ಆರಾಧ್ಯ, ಬಿಸಲಹಳ್ಳಿ ಗ್ರಾಮಸ್ಥ