Advertisement

ಹಳ್ಳಿ ಪ್ರತಿ ಮನೆಗೂ ಶುದ್ಧ ಜಲ

04:37 PM Feb 10, 2021 | Team Udayavani |

ಬಾಗಲಕೋಟೆ: ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರ ಜಲ ಜೀವನಮಷಿನ್‌ ಅಡಿ ಹೊಸ ಯೋಜನೆ ಕೈಗೊಂಡಿದ್ದು, ಶೀಘ್ರವೇ ಎಲ್ಲರ ಮನೆಗೂ ನಳದ ಸಂಪರ್ಕ ಕಲ್ಪಿಸಲಾಗುವುದು ಎಂದು ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ ಹೇಳಿದರು.

Advertisement

ತಾಲೂಕಿನ ನೀಲಾನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದು, ಯಾವುದೇ ಕಾಮಗಾರಿ ಕಳಪೆ ಮಟ್ಟದಿಂದಕೂಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕಳಪೆ ಕಾಮಗಾರಿ ಕಂಡು ಬಂದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ರಾಮೀಣ ಭಾಗದ ಪ್ರತಿ ಮನೆಗೂ ನಳದ ಸಂಪರ್ಕ ಕಲ್ಪಿಸಿ, ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯನ್ನು ಪ್ರಧಾನಿ ನರೇಂದ್ರಮೋದಿ ಜಾರಿಗೊಳಿಸಿದ್ದಾರೆ. ಇದರಿಂದ ಪ್ರತಿ ಮನೆಗೂ ನಳ ಅಳವಡಿಸಲಿದ್ದು, ಮೀಟರ್‌ಅಳವಡಿಸುವ ಕಾರ್ಯವೂ ನಡೆಯಲಿದೆ.ಇದರಿಂದ ನೀರಿನ ಮಿತ ಬಳಕೆಯಾಗಲಿದೆ ಎಂದರು.

ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆ, 3 ಕೋಟಿ 65 ಲಕ್ಷ ರೂ.ಅನುದಾನದಹಲವು ಕಾಮಗಾರಿಗೆ ಶಾಸಕ ಚರಂತಿಮಠಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ ಲಮಾಣಿ,ಜಿಪಂ ಸದಸ್ಯ ರಂಗನಗೌಡ ಗೌಡರ, ತಾ.ಪಂ. ಅಧ್ಯಕ್ಷ ಚನ್ನನಗೌಡ ಪರನಗೌಡರ, ಸದಸ್ಯ ಪರಶುರಾಮ ಛಬ್ಬಿ, ಅಧಿಕಾರಿಗಳಾದ ಕುರಬಗಟ್ಟಿ, ಕಿರಣ ಗೌಡರ, ಮ್ಯಾಗಿನಮನಿ,ನರಸಿಂಹರಾಜು, ಪುರೋಹಿತ, ಶ್ರೀಮತಿಬಂಡಿ, ಬಿಜೆಪಿ ಗ್ರಾಮೀಣ ಮಂಡಲಅಧ್ಯಕ್ಷ ಸುರೇಶ ಕೊಣ್ಣೂರ, ಪ್ರಧಾನ ಕಾರ್ಯದರ್ಶಿಗಳಾದ ಕಲ್ಲಪ್ಪ ಭಗವತಿ,ಮಲ್ಲೇಶ ಬಿಜಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next