ಮುಧೋಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜೀವಜಲ ಮಿಷನ್ ಯೋಜನೆ ಹಾಕಿಕೊಂಡಿದ್ದು, ಈ ಯೋಜನೆ ಜಾರಿಗೆ ರಾಜ್ಯಕ್ಕೆ 2200ಕೋಟಿ ರೂ. ನೆರವು ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ 41 ಗ್ರಾಮಗಳಿಗೆ 24ಗಿ7 ನೀರು ಪೂರೈಕೆ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಮಂತ್ರಿಯರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿತಾಲೂಕಿನಲ್ಲಿ ಅಂದಾಜು 32 ಕೋಟಿ ರೂ. ವೆಚ್ಚದಲ್ಲಿ 41 ಗ್ರಾಮಗಳಿಗೆ ನಿರಂತರ ನೀರು ಪೂರೈಕೆಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತರುವುದರ ಮೂಲಕ ಪ್ರತಿಯೊಂದು ಹಳ್ಳಿಗೂ ನಿರಂತರ ನೀರು ಪೂರೈಕೆಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಶುದ್ಧ ಕುಡಿಯುವ ನೀರು ಒದಗಿಸುವುದರೊಂದಿಗೆ ನಳಕ್ಕೆ ಮೀಟರ್ ಅಳವಡಿಸಲಾಗುತ್ತದೆ ಇದರಿಂದ ಸಾರ್ವಜನಿಕರಿಗೆ ನೀರಿನ ಮಿತವ್ಯಯದ ಬಳಕೆ ಹಾಗೂ ಸ್ಥಳೀಯ ಪಂಚಾಯಿತಿಗೆ ಆದಾಯ ಹರಿದು ಬರಲಿದೆ ಎಂದು ಹೇಳಿದರು. ಹಲಗಲಿ ಮಾದರಿ: ತಾಲೂಕಿನಲ್ಲಿ ಪ್ರಯೋಗಾತ್ಮಕವಾಗಿ ಹಲಗಲಿ ಗ್ರಾಮದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಕಾರ್ಯರೂಪಕ್ಕೆ ತರಲಾಗಿತ್ತು. ಅಲ್ಲಿನ ಯೋಜನೆ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ತಾಲೂಕಿನ ಉಳಿದಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ದಲಿತ ಕೇರಿಯಲ್ಲಿ ಉಡುಪಿ ಶ್ರೀಗಳ ಪಾದಯಾತ್ರೆ
ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಹನಮಂತ ತುಳಸಿಗೇರಿ, ರಾಜ್ಯ ಲೋಕೋಪಯೋಗಿ ರಸ್ತೆ ಅಭಿವೃದ್ಧಿ ನಿಗಮ ನಿರ್ದೇಶಕ ಕೆ.ಆರ್. ಮಾಚಪ್ಪನವರ, ನಗರಸಭೆ ಅಧ್ಯಕ್ಷ ಸಿದ್ಧನಾಥ ಮಾನೆ, ಬಿಜೆಪಿ ಮುಖಂಡರಾದ ನಾಗಪ್ಪ ಅಂಬಿ, ಪರಪ್ಪ ಗಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿ ಕಾರಿ ಕಿರಣ ಘೋರ್ಪಡೆ, ಲೋಕೋಪಯೋಗಿ ಇಲಾಖೆ ಎಇ ಸೋಮಶೇಖರ ಸಾವನ್ನವರ, ಜಿಎಲ್‌ಬಿಸಿ ಅ ಕಾರಿ ಹಳ್ಳದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ. ದಾಸರ, ಸಿಡಿಪಿಒ ಶೋಭಾ ಮಂಟೂರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ದಂಡನ್ನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ ಕೋರಡ್ಡಿ, ಪಿಆರ್‌ಡಿ ಅಧಿ ಕಾರಿ ಜೋಗಿನ ಸೇರಿದಂತೆ ಇತರರು ಇದ್ದರು.