Advertisement
ಮೂಲ್ಕಿಯ ಸರ್ಫ್ ಸ್ವಾಮಿ ಫೌಂಡೇಶನ್ ಆಶ್ರಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸೇವಾ ಸಂಘಟನೆಗಳ ಸ್ವಯಂ ಸೇವಕರು ಮೂಲ್ಕಿ- ಹೆಜಮಾಡಿ ಬೀಚ್ ಪರಿಸರದಲ್ಲಿ ರವಿವಾರ ಬೆಳಗ್ಗಿನಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುವಕರ ತಂಡ ಸಾರ್ವಜನಿಕ ಹಿತಕ್ಕಾಗಿ ಸರ್ಫ್ ಸ್ವಾಮಿ ಫೌಂಡೇಶನ್ ಮೂಲಕ ನಡೆಸಲಾಗುತ್ತಿರುವ ನಿರಂತರ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿ ನಮ್ಮ ನೆಲದ ಉಳಿವಿಗಾಗಿ ಶ್ರಮಿಸುವ ಎಂದರು. ದ.ಕ. ಮತ್ತು ಉಡುಪಿ ಜಿಲ್ಲಾ ಆದಾಯ ತೆರಿಗೆ ವಿಭಾಗದ ಜಂಟಿ ಆಯುಕ್ತ ಸೌರಬ್ ದುಭೆ ಭಾಗವಹಿಸಿ, ಯುವ ಶಕ್ತಿಯ ಪ್ರಯತ್ನದಿಂದ ದೇಶದ ಸಮಸ್ಯೆಗೆ ಉತ್ತರ, ಮಾತ್ರವಲ್ಲ ಮಾಲಿನ್ಯವನ್ನು ತಡೆಯುವಲ್ಲಿ ಉತ್ತಮ ಯಶಸ್ಸು ಸಿಗಬಹುದು ಎಂದರು. ಸರ್ಫ್ ಸ್ವಾಮಿ ಫಂಡೇಶನ್‌ನ ಗೌರವ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
Related Articles
Advertisement
350ಕ್ಕೂ ಅಧಿಕ ಮಂದಿ ಭಾಗಿಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿಭಾಗ ಕಿಲ್ಪಾಡಿ ವ್ಯಾಸ ಮಹರ್ಷಿ ಶಾಲೆ, ಮಣಿಪಾಲ ಡೆಂಟಲ್ ಕಾಲೇಜು, ಮೂಡಬಿದಿರೆ ಆಳ್ವಾಸ್ ಕಾಲೇಜು, ಮಂಗಳೂರು ಬೈಸಿಕಲ್ ಕ್ಲಬ್ ಮತ್ತು ಇತರ ಸೇವಾ ಸಂಘಟನೆಗಳ ಸುಮಾರು 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದರು. ಸುಮಾರು 500 ಚೀಲಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಗಾಜಿನ ಬಾಟಲಿ, ರಬ್ಬರ್, ಮತ್ತಿತರ ತ್ಯಾಜ್ಯಗಳನ್ನು ಸ್ವಯಂ ಸೇವಕರು ಸಂಗ್ರಹಿಸಿದರು. ಮನದಟ್ಟು ಮಾಡಿ
ಸಾರ್ವಜನಿಕರು ತ್ಯಾಜ್ಯ ಗಳನ್ನು ಕಂಡುಕಂಡಲ್ಲಿ ಎಸೆಯುವುದರಿಂದ ಸಮುದ್ರ ಮಾಲಿನ್ಯ ಉಂಟಾಗುವುದನ್ನು ತಡೆಯುವಲ್ಲಿ ಯುವ ಸಮಾಜ ಸಾರ್ವಜ ನಿಕರಲ್ಲಿ ಮನ ದಟ್ಟು ಮಾಡುವ ಕೆಲಸವನ್ನು ಮಾಡುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಸೆಂಥಿಲ್ ತಿಳಿಸಿದರು.