Advertisement
ಜರ್ಮನ್ ವಿದ್ಯಾರ್ಥಿನಿಯ ಮಾರ್ಗದರ್ಶನಬಜಪೆ ಗ್ರಾ.ಪಂ.ತ್ಯಾಜ್ಯ ವಿಲೇವಾರಿಗೆಂದೇ ವರ್ಷಕ್ಕೆ 25ರಿಂದ 35 ಲಕ್ಷ ರೂ. ತನಕ ಖರ್ಚು ಮಾಡುತ್ತಿದೆ. ಗ್ರಾ.ಪಂ.ಗೆ ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಮನಗಂಡ ವಿದ್ಯಾರ್ಥಿಗಳು ಬಜಪೆಯ ಅನ್ಸಾರ್ ಆಂಗ್ಲ ಮಾಧ್ಯಮ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಜರ್ಮನ್‌ನ ವಿದ್ಯಾರ್ಥಿನಿ ಇಡಾ ಅವರ ಮಾರ್ಗದರ್ಶನದೊಂದಿಗೆ ಪ್ಲಾಸ್ಟಿಕ್ ಬಾಟಲಿ, ಚೀಲಗಳಿಂದ ವಿವಿಧ ಬಣ್ಣದ ಕಲಾ ಕೃತಿಯ ಕುಳಿತುಕೊಳ್ಳುವ ಬೆಂಚು ತಯಾರಿ ಮಾಡುವಲ್ಲಿ ತೊಡಗಿದ್ದಾರೆ. ಈಗಾಗಲೇ ಒಂದು ಬೆಂಚು ತಯಾರಾಗಿದೆ. ಇನ್ನೊಂದು ಬೆಂಚು ತಯಾರಿ ಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದಾರೆ.
ಸ್ವಚ್ಛಗೊಳಿಸಿ ತರುವ ಪರಿಪಾಠ ಬೆಳಿಸಿದ್ದಾರೆ. ಇದರಿಂದ ಪರಿಸರವೂ ಸ್ವಚ್ಛವಾಗಿದೆ. ಮಕ್ಕಳ ಕಾರ್ಯಕ್ಕೆ ಹೆತ್ತವರೂ ಬೆಂಬಲ ನೀಡಿದ್ದಾರೆ. 900ಕ್ಕಿಂತಲೂ ಹೆಚ್ಚು ಬಾಟಲಿ, ಪ್ಲಾಸ್ಟಿಕ್ ಚೀಲ ಸಂಗ್ರಹ
ಈಗಾಗಲೇ 900ಕ್ಕಿಂತಲೂ ಅಧಿಕ ಪಾನೀಯದ ವಿವಿಧ ಗ್ರಾತದ ಪ್ಲಾಸ್ಟಿಕ್ ಬಾಟಲಿ ಹಾಗೂ ಪ್ಲಾಸ್ಟಿಕ್ ಚೀಲ ಶೇಖರಣೆ ಮಾಡಲಾಗಿದೆ. ಇದಕ್ಕಾಗಿಯೇ ಶಾಲೆಯ ಒಂದು ಕೊಠಡಿಯನ್ನು ಮೀಸಲಿರಿಸಲಾಗಿದೆ. ಪಾಸ್ಟಿಕ್ ಬಾಟಲಿಯೊಳಗೆ ಚಾಕಲೇಟ್, ಇತರ ಚಿಟ್ಸ್ ಖಾಲಿತೊಟ್ಟೆಗಳು, ಸ್ಟ್ರಾ, ಉಪಯೋಗಿಕ್ಕಿಲ್ಲದ ಪೆನ್, ಬ್ಯಾಟರಿಗಳನ್ನು ಹಾಕಬಹುದಾಗಿದೆ. ವಿವಿಧ ಬಣ್ಣದ ಪ್ಲಾಸ್ಟಿಕ್ ಬಾಟಲಿ ಹಾಗೂ ಚೀಲಗಳು ಇದ್ದರೆ ಅದು ಅಲಂಕಾರಿಕವಾಗಿ ಕಾಣಿಸುತ್ತದೆ. ಜ.30ರಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ನಜೀರ್ ಅವರು ಇದನ್ನು ಉದ್ಘಾಟಿಸಲಿದ್ದಾರೆ.
Related Articles
ಇನ್ನೂ ಅಲ್ಲಲ್ಲಿ ವಿವಿಧ ಬಣ್ಣದ ಬೆಂಚುಗಳನ್ನು ಮಾಡಲಿದ್ದೇವೆ. ಇದರಿಂದ ಮಕ್ಕಳಲ್ಲಿ ಸ್ವಚ್ಛತೆಯ ಆಸಕ್ತಿ ಮೂಡುತ್ತದೆ. ಮಕ್ಕಳು, ಶಿಕ್ಷಕರು ಕೂಡ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ತಂದಿದ್ದೇವೆ. ಮನೆಯಿಂದ ಸ್ವಚ್ಛತೆಯ ಪರಿಪಾಠ ಆರಂಭವಾದಾಗ ಮಾತ್ರ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ.
– ಜಯಶ್ರೀ, ಪ್ರಾಂಶುಪಾಲೆ,ಆನ್ಸಾರ್ ಪದವಿಪೂರ್ವ ಕಾಲೇಜು
Advertisement
ಸುಬ್ರಾಯ ನಾಯಕ್ ಎಕ್ಕಾರು