Advertisement

ಕ್ಲೀನ್‌ ಉಡುಪಿ ಪ್ರಾಜೆಕ್ಟ್ : ಸ್ವತ್ಛತಾ ಅಭಿಯಾನ

11:01 PM May 05, 2019 | sudhir |

ಉಡುಪಿ: ಕ್ಲೀನ್‌ ಉಡುಪಿ ಪ್ರಾಜೆಕ್ಟ್ ವತಿಯಿಂದ ಮೇ 4 ರಂದು ಅಜ್ಜರಕಾಡು ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವತ್ಛತಾ ಅಭಿಯಾನ ನಡೆಯಿತು.

Advertisement

ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್‌ ಭಟ್‌ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆೆಯನ್ನು ಕಾಪಾಡುವ ಬಗ್ಗೆ ಪ್ರತಿಯೊಬ್ಬರೂ ಮೊದಲ ಆದ್ಯತೆ ನೀಡಿದರೆ ದೇಶದ ಚಿತ್ರಣವೇ ಬದಲಾಗುವುದು. ಸ್ವತ್ಛತೆಯ ಪರಿಕಲ್ಪನೆಯನ್ನು ಜಾಗೃತಗೊಳಿಸಿದರೆ ವ್ಯಕ್ತಿಯ ಆರೋಗ್ಯವು ವೃದ್ಧಿಸುವುದರ ಜತೆಗೆ ಸಮಾಜದ ಆರೋಗ್ಯವು ಕೂಡ ಪರಿಣಾಮಕಾರಿಯಾಗುವುದು ಎಂದರು.

ಜಿಲ್ಲಾ ನಾಗರಿಕ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಜಾಗೃತಿಯ ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಉಡುಪಿ ಜಿಲ್ಲೆಯು ಬುದ್ಧಿವಂತರ ಜಿಲ್ಲೆಯಾಗಿ ನಿಜವಾದ ಅರ್ಥದಲ್ಲಿ ಮೂಡಿಬರಬೇಕಾದರೆ ಇಲ್ಲಿಯ ಸ್ವತ್ಛತೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಸ್ವತ್ಛತೆಯನ್ನು ಕಾಪಾಡುವ ತುಡಿತ ಉಂಟಾಗಿ ಇತರರಲ್ಲಿಯೂ ಜಾಗೃತಿ ಮೂಡಿಸುವ ಮನೋಭಾವನೆ ಉಂಟಾಗಬೇಕು ಎಂದರು.

ಗಣೇಶ್‌ ಪ್ರಸಾದ್‌ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.
ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್‌ ಶೆಟ್ಟಿ , ತಾರಾನಾಥ್‌ ಮೇಸ್ತ, ಚೇತನಾ ಶೆಣೈ, ಹರೀಶ್‌ ನಾಯ್ಕ, ತಿಲಕ್‌ ಮಲ್ಪೆ$, ಜೇಮ್ಸ್‌, ಅರ್ಪಿತಾ ಆಚಾರ್ಯ, ರಫೀಕ್‌ ಖಾನ್‌, ಉದಯ ನಾಯ್ಕ , ಚೇತನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next