Advertisement
ಮಂಗಳವಾರ ಮನಪಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಕವಿತಾ ಸನಿಲ್, ಶಾಸಕ ಜೆ.ಆರ್. ಲೋಬೊ ಅವರು, ಸ್ವಚ್ಛ ಭಾರತ ಮಿಷನ್ ಅಡಿ ದೇಶದ ಎಲ್ಲ ನಗರಗಳಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಛ ಸರ್ವೇಕ್ಷಣೆ ನಡೆಸುತ್ತಿದೆ. ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅವಶ್ಯ ವಾಗಿದ್ದು, ಅಂಕ ಗಳಿಕೆಗೆ ಸ್ವಚ್ಛತಾ ಆ್ಯಪ್ ಡೌನ್ ಲೋಡ್ ಮಾಡುವುದು ಹಾಗೂ ಅದರಲ್ಲಿರುವ ಕೆಲವು ಅಂಶಗಳಿಗೆ ಪ್ರತಿಕ್ರಿಯಿಸುವುದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳಿಗೆ 1,400 ಅಂಕ, ಸಾರ್ವಜನಿಕ ಅಭಿಪ್ರಾಯಕ್ಕೆ 1,400 ಹಾಗೂ ಕೇಂದ್ರ ತಂಡದಿಂದ ನೇರ ಸಮೀಕ್ಷೆಗೆ 1,200 ಅಂಕ ನಿಗದಿಯಾಗಿದೆ. ಗರಿಷ್ಠ ಸಂಖ್ಯೆಯಲ್ಲಿ ಸ್ವಚ್ಛತಾ ಆ್ಯಪ್ ಡೌನ್ ಲೋಡ್ ಮಾಡಿದರೆ ಹೆಚ್ಚು ಅಂಕ ಪಡೆಯಲು ಅವಕಾಶವಿದೆ. ಈಗ ಕೇವಲ 300 ಮಂದಿ ಮಾತ್ರ ಆ್ಯಪ್ ಡೌನ್ ಲೋಡ್ ಮಾಡಿದ್ದಾರೆ. ಜ. 31 ಡೌನ್ ಮಾಡಲು ಕೊನೆಯ ದಿನ. ಸಾರ್ವಜನಿಕರ ದೂರುಗಳ ನಿರ್ವಹಣೆಗೆ ಪಾಲಿಕೆ ವತಿಯಿಂದ 2016ರಲ್ಲೇಸ್ವಚ್ಛತಾ ಆ್ಯಪ್ ಬಿಡುಗಡೆಗೊಳಿಸಲಾಗಿತ್ತು. ಆದರೆ ಸಾರ್ವಜನಿಕರು ಆ್ಯಪ್ ಡೌನ್ ಲೋಡ್ ಮತ್ತು ಬಳಕೆಗೆ ಹೆಚ್ಚಿನ ಆಸಕ್ತಿ ವಹಿಸದ ಕಾರಣ 2017ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮನಪಾ ಹೆಚ್ಚಿನ ಅಂಕ ಗಳಿಸಲು ವಿಫಲವಾಯಿತು ಎಂದು ಅವರು ವಿವರ ನೀಡಿದರು. ಜನ ಜಾಗೃತಿಗೆ ಸಹಕಾರ
ರಾಮಕೃಷ್ಣ ಮಠದ ಪರವಾಗಿ ಎಂ.ಆರ್. ವಾಸುದೇವ ರಾವ್ ಮಾತನಾಡಿ, ಸ್ವಚ್ಛತಾ ಅಭಿಯಾನದ ಸ್ವಯಂಸೇವಕರು ಸಹಿತ ಸುಮಾರು 5 ಸಾವಿರ ಮಂದಿ ಆ್ಯಪ್ ಡೌನ್ ಲೋಡ್ ಮಾಡಲು ಸಿದ್ಧರಾಗಿದ್ದಾರೆ ಎಂದರು.
Related Articles
Advertisement