Advertisement

ಆಂತರಿಕ ಶುದ್ಧಿಯಿಂದ ಬಾಹ್ಯ ಸಮಾಜ ಶುದ್ಧಿ ಸಾಧ್ಯ: ವಂ|ವಿಕ್ಟರ್‌

11:22 AM Jun 24, 2019 | keerthan |

ಮಹಾನಗರ: ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಜರಗುತ್ತಿರುವ ಸ್ವಚ್ಛ ಮಂಗಳೂರು ಅಭಿ ಯಾನದ 5ನೇ ಹಂತದ 29ನೇ ವಾರದ ಶ್ರಮದಾನವನ್ನು ರವಿವಾರ ಕುಲಶೇಖರ ದಲ್ಲಿ ಕೈಗೊಳ್ಳಲಾಯಿತು. ಕೊರ್ಡೆಲ್ ಹೋಲಿ ಚರ್ಚ್‌ ಮುಂಭಾಗದಲ್ಲಿ ವಂ| ವಿಕ್ಟರ್‌ ಮಚಾದೋ ಶ್ರಮದಾನಕ್ಕೆ ಹಸರು ಬಾವುಟ ತೋರಿ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ವಂ| ವಿಕ್ಟರ್‌ ಮಚಾದೋ, ಸಮಾಜದಲ್ಲಿರುವ ಜನರ ಭಾವನೆಗಳು ಸ್ವಚ್ಛವಾಗಬೇಕು. ಭಾವಶುದ್ಧಿಯಾದರೆ ಬಾಹ್ಯ ಸಮಾಜದ ಶುದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಕಸದ ವಿಚಾರದಲ್ಲಿ ಜನರ ಮನಸ್ಸುಗಳಲ್ಲಿ ಜಾಗೃತಿ ಯನ್ನುಂಟುಮಾಡುವಲ್ಲಿ ಸಫಲ ರಾದರೆ ನಮ್ಮ ಪರಿಸರ ತನ್ನಿಂದತಾನೇ ಸ್ವಚ್ಛವಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಪರಿಸರ ಶುಚಿಯಾಗಿದ್ದರೆ ಆರೋಗ್ಯ ವಂಥ ಬದುಕು ನಮ್ಮದಾಗುತ್ತದೆ. ಸ್ವಚ್ಛ ಮಂಗಳೂರು ಕೇವಲ ಕನಸಲ್ಲ ಅದು ನನಸಾಗುತ್ತಿದೆ. ಅಂತಹ ಪ್ರಯತ್ನ ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಮುನ್ನಡೆಯುತ್ತಿರುವು ದರಿಂದ ಇದು ಸಾಧ್ಯವಾಗಿದೆ ಎಂದರು.

ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್‌ ಕಾರ್ಣಿಕ್‌, ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಶುಭೋದಯ ಆಳ್ವ , ಪ್ರೊ| ಸತೀಶ್‌ ಭಟ್ ರಂಜನ್‌ ಬೆಳ್ಳರ್ಪಾಡಿ, ಮೆಹಬೂಬ್‌ ಖಾನ್‌, ಸತ್ಯನಾರಾಯಣ ಭಟ್, ತಾರಾ ನಾಥ್‌ ಆಳ್ವ, ಶಿವರಾಜ್‌ ಪೂಜಾರಿ, ಲೋಕೇಶ್‌ ಕೊಟ್ಟಾರ ಉಪಸ್ಥಿತರಿದ್ದರು.

ಶ್ರಮದಾನ: ಕುಲಶೇಖರ್‌ ಪ್ರದೇಶದ ಹೆದ್ದಾರಿಯ ಬದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳ ಲಾಯಿತು. ಅಭಿಯಾನದ ಪ್ರಧಾನ ಸಂಯೊಜಕ ಉಮಾನಾಥ್‌ ಕೋಟೆಕಾರ್‌ ನೇತೃತ್ವದಲ್ಲಿ ನಾಲ್ಕು ತಂಡಗಳು ಶ್ರಮದಾನ ವನ್ನು ಕೈಗೊಂಡವು. ಕೊರ್ಡೆಲ್ ಚರ್ಚ್‌ ಮುಂಭಾಗದಲ್ಲಿರುವ ಬಸ್‌ ತಂಗುದಾಣದ ಬಳಿ ಇದ್ದ ತ್ಯಾಜ್ಯಗಳ ರಾಶಿಯನ್ನು ಸಚಿನ್‌ ಕಾಮತ್‌, ಕಾರ್ಯಕರ್ತರು ತೆರವುಗೊಳಿಸಿ ಅಲ್ಲಿ ಹೂಗಿಡಗಳನ್ನಿಟ್ಟರು. ಮತ್ತೂಂದೆಡೆ ಅದೇ ಮಾರ್ಗದಲ್ಲಿದ್ದ ಕಟ್ಟಡ ತ್ಯಾಜ್ಯ ಹಾಗೂ ತೋಡುಗಳ ತ್ಯಾಜ್ಯದ ರಾಶಿಗಳನ್ನು ಪ್ರೊ| ಶೇಷಪ್ಪ ಅಮೀನ್‌, ಕಾರ್ಯಕರ್ತರು ಜೇಸಿಬಿ ಬಳಸಿಕೊಂಡು ಸ್ವಚ್ಛಗೊಳಿಸಿದರು. ಮೂರನೇ ತಂಡ ಶಕ್ತಿನಗರಕ್ಕೆ ಹೋಗುವ ಅಡ್ಡರಸ್ತೆಯಲ್ಲಿ ಬಸ್‌ ತಂಗುದಾಣದ ಬಳಿಯಿರುವ ತ್ಯಾಜ್ಯವನ್ನು ತೆಗೆದು ಶುದ್ಧಗೊಳಿಸಿತು. ಹಿರಿಯರಾದ ಕಮಲಾಕ್ಷ ಪೈ ನೇತೃತ್ವ ವಹಿಸಿದ್ದರು. ಕುಲಶೇಖರ್‌ ಮಾರುಕಟ್ಟೆ ಬಳಿ ಸುಧೀರ್‌ ನೋರೋನ್ಹ ಹಾಗೂ ಉಮಾಕಾಂತ ಮಾರ್ನಮಿಕಟ್ಟೆ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸಿ ಅಲ್ಲಿಯೂ ಆಲಂಕಾರಿಕ ಗಿಡಗಳನ್ನಿ ಡಲಾಗಿದೆ. ಬಿಕರ್ನಕಟ್ಟೆ, ನಂತೂರು, ಕದ್ರಿ, ಹಂಪನಕಟ್ಟೆ ಪಾಂಡೇಶ್ವರ, ಮಂಗಳಾದೇವಿ ಪರಿಸರದಲ್ಲಿದ್ದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.

ಜಾಗೃತಿ ಕಾರ್ಯಕ್ರಮ
ಕುಲಶೇಖರದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಜತೆಗೆ ಸ್ವಚ್ಛ ಮಂಗಳೂರು ಜಾಗೃತಿ ಕೈಪಿಡಿ ಯನ್ನು ಹಂಚಲಾಯಿತು. ಶಾರದಾ ವಿದ್ಯಾ ನಿಲಯದ ವಿದ್ಯಾರ್ಥಿನಿಯರು ಸರಿತಾ ಶೆಟ್ಟಿ , ಸ್ಮಿತಾ ಹೆಬ್ಟಾರ್‌ ಮಾರ್ಗದರ್ಶನದಲ್ಲಿ ಜಾಗೃತಿ ಕಾರ್ಯವನ್ನು ನಿರ್ವಹಿಸಿದರು. ಮತ್ತೂಂದೆಡೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕೋರಿಕೆಯ ಮೇರೆಗೆ ಅಭಿಯಾನದ ಪ್ರಮುಖ ದಿಲ್ರಾಜ್‌ ಆಳ್ವ ನೇತೃತ್ವದಲ್ಲಿ ಗೋರಕ್ಷದಂಡು, ಅರೆಕೆರೆಬೈಲ್ ಪ್ರದೇಶದಲ್ಲಿ ಮಲೇರಿಯಾ-ಡೆಂಗ್ಯೂ ಕುರಿತಂತೆ ಜನರಿಗೆ ತಿಳಿವಳಿಕೆ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸ‌ಲಾಯಿತು. ಅನಂತರ ಸ್ವಯಂ ಸೇವಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

Advertisement

ಕೊರ್ಡೆಲ್ ಹಾಲ್ ಮುಂಭಾಗದಲ್ಲಿರುವ ತೋಡುಗಳಲ್ಲಿ ಕಸಕಡ್ಡಿ, ತ್ಯಾಜ್ಯ ತುಂಬಿದ್ದರಿಂದ ಮಳೆಯ ನೀರು ತೋಡುಗಳಲ್ಲಿ ತುಂಬಿತ್ತು. ಇದೀಗ ಅಲ್ಲಿದ್ದ ತ್ಯಾಜ್ಯ, ಮಣ್ಣು, ಕಸಕಡ್ಡಿಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿ ಯುವಂತೆ ಮಾಡಲಾಯಿತು. ವಿಟuಲದಾಸ್‌ ಪ್ರಭು, ಪುನೀತ್‌ ಕುಮಾರ್‌ ಶೆಟ್ಟಿ , ಸ್ವಯಂ ಸೇವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next