Advertisement

ಮುಂದಿನ ಜನಾಂಗಕ್ಕೆ ಸ್ವಚ್ಛ ಪರಿಸರ ನೀಡುವುದು ನಮ್ಮೆಲ್ಲರ ಕರ್ತವ್ಯ : ಕಿರಣ್ ಕುಮಾರ ವಡಗೇರಿ

07:23 PM Jun 05, 2022 | Team Udayavani |

ರಬಕವಿ-ಬನಹಟ್ಟಿ: ಮುಂದಿನ ಜನಾಂಗಕ್ಕೆ ಸ್ವಚ್ಛ ಪರಿಸರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಗಿಡ ಮರಗಳ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.

Advertisement

ಭಾನುವಾರ ಅವರು ಸ್ಥಳೀಯ ಅಶೋಕ ನಗರದ ಗಣೇಶ ಮಂದಿರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ನಾಶದಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ ಬೇಡ. ಇಂದು ಭೂಮಿಯ ತಾಪಾಮಾನ ಹೆಚ್ಚಾಗುತ್ತಿದೆ. ಪರಿಸರ ನಾಶದಿಂದ ಪ್ರಕೃತಿಯ ಮೇಲೆ ವಿಚಿತ್ರ ಬೆಳವಣಿಗೆಗಳು ಆಗುತ್ತಿವೆ. ಇವೆಲ್ಲವುಗಳಿಂದಾಗಿ ಭೂಮಿಯ ಮೇಲಿರುವ ಜೀವ ಸಂಕುಲಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ನ್ಯಾಯಾಧೀಶ ವಡಗೇರಿ ತಿಳಿಸಿದರು.

ಇದನ್ನೂ ಓದಿ : ಪೊರಕೆ-ಕೊಡಲಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು : ಬಂಗಾಳ ಬಿಜೆಪಿ ಅಧ್ಯಕ್ಷ ವಿವಾದ

ಇದೇ ಸಂದರ್ಭದಲ್ಲಿ ಜಮಖಂಡಿಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿ.ಪಿ. ಹಡಲಗೇರಿ ಮಾತನಾಡಿ, ವಿಶ್ವ ಸಂಸ್ಥೆಯು ಒಂದೇ ಒಂದು ಭೂಮಿ ಎಂದು ಘೋಷಣೆ ಮಾಡಿದ್ದು, ಈ ಭೂಮಿಯ ಸಂರಕ್ಷಣೆ ಅಗತ್ಯವಾಗಿದೆ. ಆದ್ದರಿಂದ ನಾವು ಗಿಡ ಮರಗಳನ್ನು ಕಡಿಯದೆ, ಪರಿಸರವನ್ನು ನಾಶ ಮಾಡದೆ ಹೆಚ್ಚು ಹೆಚ್ಚು ಗಿಡ ಮರಗಳನ್ನು ಹಚ್ಚುವುದರ ಜೊತೆಗೆ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಸುಷ್ಮಾ ಟಿ.ಸಿ. ವಕೀಲ ಎ.ಎನ್.ಜಿಡ್ಡಿಮನಿ ಮಾತನಾಡಿದರು.

ಅಶೋಕ ಕಾಲೊನಿಯ ಪ್ರಮುಖ ಶಂಕರ ಟಿರಕಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಉಪ ತಹಶೀಲ್ದಾರ್ ಬಸವರಾಜ ಬಿಜ್ಜರಗಿ, ಪಿಎಸ್ಐ ಸುರೇಶ ಮಂಟೂರ, ಜಿ.ಡಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.

ಶಿಕ್ಷಕ ಭಜಂತ್ರಿ ಪ್ರಾರ್ಥಿಸಿದರು. ಸುಮಿತ್ರಾ ಬೋರಗಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಮ್.ಎನ್.ಕೋಪರ್ಡೆ, ವಿನೋದ ಖೇಮಣ್ಣನವರ, ಆರ್.ಕೆ.ಕಾಮಗೊಂಡ, ಅರಣ್ಯಾಧಿಕಾರಿಗಳಾದ ಮಲ್ಲು ನಾವಿ, ಲಕ್ಷ್ಮಣ ಪಾಟೀಲ, ಬಸವರಾಜ ಕುಂಬಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next