Advertisement

ಬೇಸಗೆ ದಾಹ ತಣಿಸಲು ಜಲ-ಕುಟೀರ ಸ್ಥಾಪನೆ

09:08 PM May 01, 2019 | Sriram |

ಉಡುಪಿ: ಜೋಸ್‌ ಆಲುಕ್ಕಾಸ್‌ ಆಭರಣ ಮಳಿಗೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ ಸುಡು ಬಿಸಿಲಲ್ಲಿ ದಾಹ ತಣಿಸಲು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜಲ-ಕುಟೀರವನ್ನು ಚಿತ್ತರಂಜನ್‌ ಸರ್ಕಲ… ಬಳಿಯ ಮಾರುತಿ ವೀಥಿಕಾದಲ್ಲಿ ಸ್ಥಾಪಿಸಿದೆ. ಇದನ್ನು ಬುಧವಾರ ಬಾಲಪ್ರತಿಭೆ ಯುಕ್ತ ಕೆ. ಸಾಮಗ ಅವರು ಉದ್ಘಾಟಿಸಿದರು.

Advertisement

ಮೃತ್ತಿಕೆ ಹೂಜಿಗೆ ಬಿಸಿಲ ತಾಪದ ರಕ್ಷಣೆಗೆಂದು ತೃಣ ಕುಟೀರವನ್ನು ಕಲಾವಿದ ರಮೇಶ್‌ ಕಿದಿಯೂರು ಕಲಾತ್ಮಕವಾಗಿ ರಚಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಬಳಲಿದವರಿಗೆ ಜಲದಾನ ಮಾಡುವ ಯೋಜನೆಯು ಮೆಚ್ಚುಗೆಗೆ ಪಾತ್ರವಾಗಿದೆ. ಜೀವಜಲ ಅಮೂಲ್ಯ ನೀರನ್ನು ಮಿತವಾಗಿ ಬಳಸಿ ಸಂದೇಶ ವಾಕ್ಯದ ಫ‌ಲಕವನ್ನು ಇಲ್ಲಿ ಅಳವಡಿಸಿ ಜಲ ಜಾಗೃತಿ ಮೂಡಿಸಲಾಗಿದೆ.

ನಗರದಲ್ಲಿ ಪ್ರಾಣಿ ಪಕ್ಷಿಗಳ ಸಂಚಾರ, ಇರುವಿಕೆ ಇರುವ ಹತ್ತು ಸ್ಥಳಗಳನ್ನು ಗುರುತಿಸಿ ಅಲ್ಲಿ ಕಲ್ಮರ್ಗಿಗಳನ್ನು ಸ್ಥಾಪಿಸಿ ನೀರಿಡಲು ಪ್ರಾರಂಭಿಸಿದೆವು. ಯಾವತ್ತೂ ಜನ ಸಂಚಾರ ಇರುವ ಮಾರುತಿ ವಿಥೀಕಾ ರಸ್ತೆಯಲ್ಲಿ ಮೃತ್ತಿಕೆ ಹೂಜಿ ಇಡಲು ಆಯ್ಕೆ ಮಾಡಿಕೊಂಡೆವು. ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಯು ಮಳೆಗಾಲ ಪ್ರಾರಂಭ ಆಗುವವರೆಗೂ ಮುಂದುವರಿಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಹೇಳಿದರು.

ಕಾರ್ಯಕ್ರಮದಲ್ಲಿ ಜೋಸ್‌ ಆಲೂಕ್ಕಾಸ್‌ ಚಿನ್ನಾಭರಣ ಸಂಸ್ಥೆಯ ಪ್ರಬಂಧಕ ರಾಜೇಶ್‌ ಎನ್‌. ಆರ್‌., ಸಿಬಂದಿಗಳಾದ ರತೀಶ್‌, ಗೋಪಾಲ…, ನಾಗರಿಕ ಸಮಿತಿಯ ಪದಾಧಿಕಾರಿಗಳಾದ ತಾರಾನಾಥ ಮೇಸ್ತ ಶಿರೂರು, ಸುಧಾಕರ್‌ ದೇವಾಡಿಗ, ಡೇವಿಡ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next