Advertisement
ಮಾತಾ ಅಮೃತಾನಂದಮಯಿ ಮಠದ ಎದುರುಗಡೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಮತ್ತು ಲೆಕ್ಕಪರಿಶೋಧಕ ರಾಮನಾಥ್ ನಾಯಕ್ ಶ್ರಮದಾನಕ್ಕೆ ಹಸುರು ನಿಶಾನೆ ತೋರಿ ಚಾಲನೆ ನೀಡಿದರು.
Related Articles
Advertisement
ಬೋಳೂರಿನಲ್ಲಿರುವ ಮಾತಾ ಅಮೃತಾನಂದ ಮಯಿ ಮಠದ ಎದುರು ರಸ್ತೆಯಿಂದ ಬೊಕ್ಕಪಟ್ಣ ಸಾಗುವ ರಸ್ತೆಯಲ್ಲಿರುವ ಸುಮಾರು 10ಕ್ಕೂ ಅಧಿಕ ತ್ಯಾಜ್ಯ ಸುರಿಯುತ್ತಿದ್ದ ಜಾಗಗಳನ್ನು ಗುರುತಿಸಿ, ಸ್ವಚ್ಛಗೊಳಿಸಲಾಯಿತು. ಒಟ್ಟು ಎಂಟು ತಂಡಗಳನ್ನು ರಚಿಸಿಕೊಂಡು ಶ್ರಮದಾನ ಮಾಡಲಾಯಿತು. ದಿಲ್ರಾಜ್ ಆಳ್ವ, ಸುಧೀರ್ ವಾಮಂಜೂರು, ಬಾಲಕೃಷ್ಣ ಭಟ್, ಜಯಕೃಷ್ಣ ಬೇಕಲ್, ಸಂದೀಪ್ ಕೋಡಿಕಲ್, ಪ್ರವೀಣ ಶೆಟ್ಟಿ, ಭರತ್ ಸದಾನಂದ, ಅವಿನಾಶ್ ಅಂಚನ್ ಅವರ ನೇತೃತ್ವದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.
ಮನೆ ತ್ಯಾಜ್ಯದ ಜತೆಗೆ ಕಲ್ಲುಮಣ್ಣುಗಳ ರಾಶಿ, ಪ್ಲಾಸ್ಟಿಕ್ ಚೀಲಗಳ ರಾಶಿಗಳು ಇಡೀ ಪರಿಸರವನ್ನು ಗಲೀಜುಗೊಳಿಸಿದ್ದವು. ಕೆಲವು ಸ್ಥಳೀಯರು ತ್ಯಾಜ್ಯ ಬಿಸಾಡುವುದನ್ನು ತಡೆಯಲು ಪ್ರಯತ್ನಿಸಿದರೂ ಸಫಲತೆ ಕಂಡಿರಲಿಲ್ಲ. ಇದೀಗ ಅಲ್ಲಿದ್ದ ಸುಮಾರು ಮೂರು ಟಿಪ್ಪರ್ ಕಸವನ್ನು ತೆಗೆದು ಆಲಂಕಾರಿಕ ಗಿಡಗಳನ್ನಿಟ್ಟು ಮತ್ತೆ ಅಲ್ಲಿ ಯಾರೂ ತ್ಯಾಜ್ಯ ಬಿಸಾಡದಂತೆ ಮಾಡಲಾಗಿದೆ. ಎಂದಿನಂತೆ ಅಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರ ಪಡೆ ಕಸ ಹಾಕುವವರನ್ನು ತಡೆದು, ರಸ್ತೆಗೆ ತ್ಯಾಜ್ಯ ಸುರಿಯದಂತೆ ಮನವೊಲಿಸುವ ಕಾರ್ಯವನ್ನು ಮಾಡಲಿದೆ. ಸರಿತಾ ಶೆಟ್ಟಿ, ಕೋಡಂಗೆ ಬಾಲಕೃಷ್ಣ ನಾೖಕ್ ಮಾರ್ಗದರ್ಶನದಲ್ಲಿ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು.
ಮಾತಾ ಅಮೃತಾನಂದಮಯಿ ಮಠದ ‘ಆಯುಧ’ ಸಂಘಟನೆಯ ಸದಸ್ಯರು ಕಾರ್ಯ ಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.