Advertisement

ಪ್ರೀತಿಸುವಂತೆ ಸಹಪಾಠಿಯ ಒತ್ತಡ: ಕಾಲೇಜಿನ 3ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹ*ತ್ಯೆ

12:24 AM Oct 19, 2024 | Team Udayavani |

ಚಿತ್ರದುರ್ಗ: ನಗರದ ಚಿತ್ರ ಡಾನ್‌ ಬಾಸ್ಕೋ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ (17) ಶುಕ್ರವಾರ ಕಾಲೇಜಿನ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಸಹಪಾಠಿ ತರುಣ್‌ ಎಂಬಾತ ಪ್ರೀತಿಸುವಂತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ನೊಂದು ಕೃತ್ಯವೆಸಗಿರುವುದಾಗಿ ಆಕೆಯ ತಂದೆ ದೂರು ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ತಿಳಿಸಿದ್ದಾರೆ.

ಗುರುವಾರವಷ್ಟೇ ತರುಣ್‌ ಪ್ರೀತಿ ವಿಚಾರವಾಗಿ ವಾಟ್ಸ್‌ಆ್ಯಪ್‌ ಕಳುಹಿಸುತ್ತಿರುವ ಬಗ್ಗೆ ಪ್ರೇಮಾ ಹೆತ್ತವರಲ್ಲಿ ತಿಳಿಸಿದ್ದಳು. ಮರುದಿನ ಬೆಳಗ್ಗೆ ಆತನನ್ನು ವಿಚಾರಿಸುತ್ತೇನೆ ಎಂದು ತಂದೆ ಸಮಾಧಾನಿಸಿದ್ದರು. ಶುಕ್ರವಾರ ಕಾಲೇಜಿಗೆ ಬಂದ ಪ್ರೇಮಾ ತಾಯಿಗೆ ಕರೆ ಮಾಡಿದ್ದರು. ಸ್ನೇಹಿತೆಯರ ಜತೆ ಮಾತನಾಡಿ ಬಳಿಕ ಈ ಕೃತ್ಯವೆಸಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next