Advertisement

ಆರೋಗ್ಯ ಆಧಾರದಲ್ಲಿ ವಲಸಿಗರ ವರ್ಗೀಕರಣ

12:08 PM May 07, 2020 | Suhan S |

ಧಾರವಾಡ: ಗಡಿ ಜಿಲ್ಲೆಗಳ ಚೆಕ್‌ ಪೋಸ್ಟ್‌ಗಳಲ್ಲಿ ರಾಜ್ಯಕ್ಕೆ ಆಗಮಿಸುವ ಜನರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿರುವವರನ್ನು ಕೆಟಗೆರಿ-1, ಲಕ್ಷಣ ಇಲ್ಲದೆ ಇರುವವರನ್ನು ಕೆಟಗೆರಿ-2 ಎಂದು ವರ್ಗೀಕರಿಸಲಾಗುವುದು ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಟಗೆರಿ-1ರ ಜನರನ್ನು ಗಡಿಜಿಲ್ಲೆಗಳ ಆಸ್ಪತ್ರೆಗಳಲ್ಲಿಯೇ ಕ್ವಾರಂಟೈನ್‌ ಮಾಡಲಾಗುವುದು. ಹೊರ ರಾಜ್ಯಗಳಿಂದ ಬರುವ ಯಾವುದೇ ಪ್ರಯಾಣಿಕರು ಪ್ರಯಾಣದ ಮಧ್ಯದಲ್ಲಿ ಇಳಿದು ಹೋಗಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಬಸ್‌ಗೂ ಓರ್ವ ನೋಡಲ್‌ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ. ಪ್ರಯಾಣಿಕರು ತಲುಪಬೇಕಾದ ಜಿಲ್ಲೆಗಳಿಗೆ ಜನರನ್ನು ಮುಟ್ಟಿಸುವ ಜವಾಬ್ದಾರಿ ಅವರು ಹೊಂದಿರುತ್ತಾರೆ. ಸ್ವಂತ ಅಥವಾ ಖಾಸಗಿ ವಾಹನ ಬಳಸಿಕೊಂಡು ಬರುವವರು ಕಡ್ಡಾಯವಾಗಿ ಹೋಮ್‌ ಕ್ವಾರಂಟೈನ್‌ ಗೆ ಒಳಪಡಬೇಕು. ಜಿಲ್ಲೆಗೆ ಬರುವ ಜನರ ಸಂಖ್ಯೆ ಹಾಗೂ ಇತರ ಮಾಹಿತಿ ಸೇವಾಸಿಂಧು ಪೋರ್ಟಲ್‌ ಮೂಲಕ ದೊರೆಯುತ್ತದೆ. ಆಗಮಿಸುವ ಜನರ ನೋಂದಣಿ ಮತ್ತು ತಪಾಸಣೆಗೆ ಧಾರವಾಡ ಕೃಷಿ ವಿವಿ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. ಅಲ್ಲಿ ಆಹಾರ, ಕುಡಿಯುವ ನೀರು, ಪೆಂಡಾಲ್‌, ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

ವೈದ್ಯಕೀಯ ಸ್ಕ್ರೀನಿಂಗ್‌: ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಾಪಿಸಲಾಗುವ ಆಗಮನ ಕೇಂದ್ರದಲ್ಲಿ ಜನರ ವೈದ್ಯಕೀಯ ತಪಾಸಣೆಗೆ ಸಾಕಷ್ಟು ವೈದ್ಯಕೀಯ ತಂಡಗಳನ್ನು ರಚಿಸಬೇಕು. 99.5 ಡಿಗ್ರಿ ಫ್ಯಾರನ್‌ ಹೀಟ್‌ /37.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ದೇಹ ಉಷ್ಣಾಂಶ ಹೊಂದಿರುವವರು ಅಥವಾ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇರುವವರನ್ನು ಕೆಟಗೆರಿ-1ರಲ್ಲಿ ವರ್ಗಿàಕರಿಸಿ, ಜಿಲ್ಲೆಯ ನಿಗದಿತ ಕೋವಿಡ್‌ ಆಸ್ಪತ್ರೆಗೆ ಕಳುಹಿಸಬೇಕು. ಅತಿ ಹೆಚ್ಚು ಅಪಾಯ ಎದುರಿಸುತ್ತಿರುವ ಮಹಾರಾಷ್ಟ್ರ, ಗುಜರಾತ್‌, ದೆಹಲಿ, ತಮಿಳುನಾಡು ಹಾಗೂ ರಾಜಸ್ಥಾನ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು. ಯಾವುದೇ ರೋಗದ ಗುಣಲಕ್ಷಣಗಳು ಇಲ್ಲದವರನ್ನು ಕೆಟಗೆರಿ-2 ಎಂದು ವರ್ಗಿàಕರಿಸಿ ಅವರಲ್ಲಿ ನಗರ ಪ್ರದೇಶದ ಜನರನ್ನು ಹೋಮ್‌ ಕ್ವಾರಂಟೈನ್‌ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಶಾಲೆ, ಹಾಸ್ಟೆಲ್‌ ಅಥವಾ ಗುರುತಿಸಿದ ನಿರ್ದಿಷ್ಟ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು ಎಂದು ಸೂಚಿಸಿದರು.

ಹೊರ ರಾಜ್ಯಗಳಿಂದ ಬಂದು ಹೋಮ್‌ ಕ್ವಾರಂಟೈನ್‌ಗೆ ಒಳಪಟ್ಟಿರುವ ಜನರು ತಮ್ಮ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ತಕ್ಷಣ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬೇಕು. ಡಾ| ಸುರೇಶ್‌ ಇಟ್ನಾಳ, ಶಿವಾನಂದ ಕರಾಳೆ, ಡಾ| ಯಶವಂತ ಮದೀನಕರ ಇದ್ದರು.

Advertisement

ಶಾಲೆ, ಹಾಸ್ಟೆಲ್‌, ಕೋವಿಡ್‌ ಕೇಂದ್ರಗಳ ಸಿದ್ಧತೆ :  ಹೊರ ರಾಜ್ಯಗಳಿಂದ ಬರುವ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಗುರುತಿಸಲಾಗುವ ಶಾಲೆ, ಹಾಸ್ಟೆಲ್‌ಗ‌ಳು ಹಾಗೂ ಕೋವಿಡ್‌ ಕೇಂದ್ರಗಳಲ್ಲಿ ಶುದ್ಧ ಗಾಳಿ, ಬೆಳಕು, ಕುಡಿಯುವ ನೀರು, ಶೌಚಾಲಯ, ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣ ಸಿಂಪಡಣೆ, ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕ ಪಾತ್ರೆಗಳನ್ನು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂಗಳು ಒದಗಿಸಬೇಕು. ನಗರ ಪ್ರದೇಶಗಳಲ್ಲಿ ಹೋಮ್‌ ಕ್ವಾರಂಟೈನ್‌ ಹೊಂದಿದ ಜನರ ಆರೋಗ್ಯವನ್ನು ನಿರಂತರ ಫಾಲೋಅಪ್‌ ಮಾಡಿ, ನೆರೆ ಹೊರೆಯವರಿಗೆ ಬೇರೆ ರಾಜ್ಯಗಳಿಂದ ಬಂದಿರುವ ಜನರ ಬಗ್ಗೆ ಮಾಹಿತಿ ನೀಡಬೇಕು ಎಂದು ಡಿಸಿ ಸೂಚಿಸಿದರು.

ಅನೇಕ ವಲಸೆ ಕಾರ್ಮಿಕರು ಕಾಲ್ನಡಿಗೆ, ದ್ವಿಚಕ್ರ ವಾಹನ ಅಥವಾ ಬೇರೆ ಯಾವುದೇ ವ್ಯವಸ್ಥೆಯಲ್ಲಿ ರಾಜ್ಯದೊಳಗೆ ಪ್ರವೇಶಿಸಿರುವ ಸಾಧ್ಯತೆಗಳಿರುತ್ತವೆ. ಅಂಥವರನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯವನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ಗಳು ನಿರ್ವಹಿಸಬೇಕು. – ದೀಪಾ ಚೋಳನ್‌, ಡಿಸಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next