Advertisement

ತಾಲೂಕಿನ ಜಿಪಂ, ತಾಪಂ ಕ್ಷೇತ್ರಗಳ ವಿಂಗಡಣೆ

03:48 PM Mar 10, 2021 | Team Udayavani |

ಮಂಡ್ಯ: ಮುಂದಿನ ಮೇ ತಿಂಗಳಲ್ಲಿ ನಡೆಯುವಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕಿನ ಜಿಪಂಹಾಗೂ ತಾಪಂಗಳ ಕ್ಷೇತ್ರವಾರು ವಿಂಗಡಣೆ ಮಾಡಲಾಗಿದೆ.

Advertisement

ಮಂಡ್ಯ ತಾಲೂಕಿನಲ್ಲಿ ಒಂದು ಜಿಪಂ ಕ್ಷೇತ್ರ ಹೆಚ್ಚುವರಿ ಮಾಡಿದ್ದರೆ, ತಾಪಂ ಕ್ಷೇತ್ರಗಳನ್ನು23ಕ್ಕಿಳಿಸಲಾಗಿತ್ತು. ಇದಕ್ಕೆ ಕ್ಷೇತ್ರವಾರು ಗ್ರಾಮಗಳುಹಾಗೂ ಜನಸಂಖ್ಯಾವಾರು ವಿಂಗಡಣೆ ಮಾಡುವಂತೆ ಸೂಚಿಸಲಾಗಿತ್ತು.

2.77 ಲಕ್ಷ ಜನಸಂಖ್ಯೆ: ಮಂಡ್ಯ ತಾಲೂಕಿನಲ್ಲಿ ಒಟ್ಟು 2,77,795 ಜನಸಂಖ್ಯೆ ಇದ್ದು, ಇದರ ಆಧಾರದ ಮೇಲೆ ಜಿಪಂ ಹಾಗೂ ತಾಪಂ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಒಟ್ಟಾರೆ ಜಿಪಂ 8 ಹಾಗೂ ತಾಪಂ 23 ಕ್ಷೇತ್ರಗಳನ್ನು ಗುರುತಿಸಲಾಗಿದೆ.

ತಾಪಂ ಕ್ಷೇತ್ರಗಳು: ಬಸರಾಳು ತಾಪಂ ಕ್ಷೇತ್ರರಚಿಸಲಾಗಿದ್ದು, ಒಟ್ಟು 32 ಗ್ರಾಮಗಳನ್ನು ತಾಪಂವ್ಯಾಪ್ತಿಗೆ ಸೇರಿಸಲಾಗಿದ್ದು, ಒಟ್ಟು 12887 ಜನಸಂಖ್ಯೆ ಹೊಂದಿದೆ. ಚಂದಗಾಲು ತಾಪಂ ಕ್ಷೇತ್ರದಲ್ಲಿ ಒಟ್ಟು 30ಗ್ರಾಮಗಳನ್ನು ಸೇರಿಸಲಾಗಿದ್ದು, ಒಟ್ಟು 11732ಜನಸಂಖ್ಯೆ ಇದೆ. ಹಲ್ಲೇಗೆರೆ ತಾಪಂ ಕ್ಷೇತ್ರದಲ್ಲಿ 19ಗ್ರಾಮಗಳಿದ್ದು, ಒಟ್ಟು 11995 ಜನಸಂಖ್ಯೆ ಇದೆ. 26 ಗ್ರಾಮಗಳನ್ನು ಬೇವುಕಲ್ಲು ತಾಪಂ ಕ್ಷೇತ್ರಕ್ಕೆ ಸೇರಿಸಲಾಗಿದ್ದು, ಒಟ್ಟು 15180 ಜನಸಂಖ್ಯೆ ಒಳಗೊಂಡಿದೆ. ಹುಳ್ಳೇನಹಳ್ಳಿ ತಾಪಂ ವ್ಯಾಪ್ತಿಯಲ್ಲಿ 19 ಗ್ರಾಮಗಳಿದ್ದು, ಒಟ್ಟು 15428 ಜನಸಂಖ್ಯೆ ಇದೆ. ತಾಲೂಕಿನ ಬಿ.ಹೊಸೂರು ಕ್ಷೇತ್ರವನ್ನು ಹೊಸದಾಗಿ ಸೇರಿಸಲಾಗಿದ್ದು, ಒಟ್ಟು 23 ಗ್ರಾಮಗಳು ಬರಲಿದ್ದು,13641 ಜನಸಂಖ್ಯೆ ಇದೆ. ಹುಲಿವಾನ ಕ್ಷೇತ್ರದಲ್ಲಿ 11 ಗ್ರಾಮಗಳ ಬರಲಿದ್ದು, ಒಟ್ಟು 11316 ಜನಸಂಖ್ಯೆ ಇದೆ. ಸಾತನೂರು ತಾಪಂ ವ್ಯಾಪ್ತಿಗೆ 5 ಗ್ರಾಮಗಳುಬರಲಿದ್ದು, ಒಟ್ಟು 12657 ಜನಸಂಖ್ಯೆ ಹೊಂದಿದೆ.

ಕೆರಗೋಡು ತಾಪಂ ಕ್ಷೇತ್ರದಲ್ಲಿ 13 ಗ್ರಾಮಗಳು ಬರಲಿದ್ದು, ಒಟ್ಟು 12142 ಜನಸಂಖ್ಯೆ ಇದೆ. ಆಲಕೆರೆ ತಾಪಂ ಕ್ಷೇತ್ರಕ್ಕೆ 12 ಗ್ರಾಮಗಳು ಸೇರಲಿದ್ದು, ಒಟ್ಟು 11918 ಜನಸಂಖ್ಯೆ ಇದೆ. ಕೀಲಾರ ತಾಪಂ ಕ್ಷೇತ್ರಕ್ಕೆ 6 ಗ್ರಾಮಗಳು ಬರಲಿದ್ದು, ಒಟ್ಟು 11332 ಜನಸಂಖ್ಯೆ ಇದೆ. ಹೊಳಲು ತಾಪಂ ಕ್ಷೇತ್ರಕ್ಕೆ 6ಗ್ರಾಮಗಳು ಸೇರಲಿದ್ದು, ಒಟ್ಟು ಜನಸಂಖ್ಯೆ 9651 ಇದೆ. ಶಿವಳ್ಳಿ ತಾಪಂ ಕ್ಷೇತ್ರಕ್ಕೆ 12 ಗ್ರಾಮಗಳು ಬರಲಿದ್ದು,10671 ಜನಸಂಖ್ಯೆ ಇದೆ. ಚಂದಗಾಲು(ದುದ್ದ)ಕ್ಷೇತ್ರಕ್ಕೆ 17 ಗ್ರಾಮಗಳು ಬರಲಿದ್ದು, 11791 ಜನಸಂಖ್ಯೆ ಹೊಂದಿದೆ.

Advertisement

ಬೂದನೂರು ತಾಪಂ ಕ್ಷೇತ್ರಕ್ಕೆ 11 ಗ್ರಾಮಗಳು ಬರಲಿದ್ದು, ಒಟ್ಟು 15519 ಜನಸಂಖ್ಯೆ ಹೊಂದಿದೆ.ಹನಕೆರೆ ಕ್ಷೇತ್ರದಲ್ಲಿ 14 ಗ್ರಾಮಗಳು ಬರಲಿದ್ದು, ಒಟ್ಟು11657 ಜನಸಂಖ್ಯೆ ಇದೆ. ಬೇಲೂರು ಕ್ಷೇತ್ರದಲ್ಲಿ 7ಗ್ರಾಮಗಳು ಬರಲಿದ್ದು, ಒಟ್ಟು 9276 ಜನಸಂಖ್ಯೆಇದೆ. ಯಲಿಯೂರು ತಾಪಂ ಕ್ಷೇತ್ರಕ್ಕೆ 8 ಗ್ರಾಮಗಳುಬರಲಿದ್ದು, 11251 ಜನಸಂಖ್ಯೆ ಹೊಂದಿದೆ ಇಂಡುವಾಳು ಕ್ಷೇತ್ರಕ್ಕೆ 11 ಗ್ರಾಮಗಳುಸೇರಿಸಲಾಗಿದ್ದು, ಒಟ್ಟು 11574 ಜನಸಂಖ್ಯೆ ಇದೆ.ಕೊತ್ತತ್ತಿ ತಾಪಂ ಕ್ಷೇತ್ರದಲ್ಲಿ 8 ಗ್ರಾಮಗಳುಸೇರಲಿದ್ದು, ಒಟ್ಟು 11436 ಜನಸಂಖ್ಯೆ ಇದೆ. ತಗ್ಗಹಳ್ಳಿ ಕ್ಷೇತ್ರದ ವ್ಯಾಪ್ತಿಗೆ 6 ಗ್ರಾಮಗಳು ಬರಲಿದ್ದು, ಒಟ್ಟು 11077 ಜನಸಂಖ್ಯೆ ಇದೆ. ಸಂತೆಕಸಲಗೆರೆ ತಾಪಂ ಕ್ಷೇತ್ರಕ್ಕೆ 5 ಗ್ರಾಮಗಳು ಬರಲಿದ್ದು, ಒಟ್ಟು12288 ಜನಸಂಖ್ಯೆ ಇದೆ. ಮಂಗಲ ತಾಪಂ ಕ್ಷೇತ್ರಕ್ಕೆ 8ಗ್ರಾಮಗಳು ಇರಲಿದ್ದು, ಒಟ್ಟು 11376 ಜನಸಂಖ್ಯೆ ಇದೆ.

ಜಿಪಂ ಕ್ಷೇತ್ರಗಳು: ಬಸರಾಳು ಜಿಪಂ ಕ್ಷೇತ್ರಕ್ಕೆ ಒಟ್ಟು 7 ಗ್ರಾಮಗಳು ಬರಲಿದ್ದು, ಒಟ್ಟು 36614ಜನಸಂಖ್ಯೆಯನ್ನಾಗಿ ವಿಂಗಡಿಸಲಾಗಿದೆ. ದುದ್ದ ಕ್ಷೇತ್ರವ್ಯಾಪ್ತಿಗೆ 5 ಗ್ರಾಮಗಳು ಬರಲಿದ್ದು, ಒಟ್ಟು 30608 ಜನಸಂಖ್ಯೆ ಹೊಂದಿದೆ.

ಬಿ.ಹೊಸೂರು ಜಿಪಂ ಕ್ಷೇತ್ರವನ್ನು ಹೊಸದಾಗಿ ಸೇರಿಸಲಾಗಿದ್ದು, ಇದರ ವ್ಯಾಪ್ತಿಗೆ 6 ಗ್ರಾಮಗಳುಬರಲಿದ್ದು, ಒಟ್ಟು 37614 ಜನಸಂಖ್ಯೆ ಹೊಂದಿದೆ. ಕೆರಗೋಡು ಜಿಪಂ ವ್ಯಾಪ್ತಿಗೆ 6 ಗ್ರಾಮಗಳು ಬರಲಿದ್ದು, ಒಟ್ಟು 35392 ಜನಸಂಖ್ಯೆ ಹೊಂದಿದೆ. ಹೊಳಲು ಜಿಪಂ ಕ್ಷೇತ್ರಕ್ಕೆ 6 ಗ್ರಾಮಗಳು ಬರಲಿದ್ದು,ಒಟ್ಟು 32113 ಜನಸಂಖ್ಯೆ ಇದೆ. ಬೂದನೂರು ಜಿಪಂಕ್ಷೇತ್ರದ ವ್ಯಾಪ್ತಿಗೆ 6 ಗ್ರಾಮಗಳು ಬರಲಿದ್ದು, ಒಟ್ಟು 36452 ಜನಸಂಖ್ಯೆ ಹೊಂದಿದೆ.

ಕೊತ್ತತ್ತಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ 5 ಗ್ರಾಮಗಳು ಬರಲಿದ್ದು, ಒಟ್ಟು 34261 ಜನಸಂಖ್ಯೆ ಇದೆ. ತಗ್ಗಹಳ್ಳಿಜಿಪಂ ವ್ಯಾಪ್ತಿಗೆ 5 ಗ್ರಾಮಗಳು ಬರಲಿದ್ದು, ಒಟ್ಟು34741 ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರವಾರು ವಿಂಗಡಿಸಲಾಗಿದೆ.

ಗ್ರಾಮಗಳ ಅದಲು ಬದಲು :

ಮಂಡ್ಯ ತಾಲೂಕಿನ ತಾಪಂ ಕ್ಷೇತ್ರಗಳ ಕಡಿತಹಾಗೂ ಜಿಪಂ ಕ್ಷೇತ್ರದ ಹೆಚ್ಚಳ ಮಾಡಿ ಕ್ಷೇತ್ರವಾರುಪುನರ್‌ ವಿಂಗಡಿಸಿರುವುದರಿಂದ ಗ್ರಾಮಗಳು ಕಳೆದ ಬಾರಿ ಇದ್ದ ಕ್ಷೇತ್ರಗಳಿಂದ ಬೇರೆ ಕ್ಷೇತ್ರಗಳಿಗೆ

ಒಳಗೊಂಡಿವೆ. ಇದರಿಂದ ಮುಂದಿನಚುನಾವಣೆಯಲ್ಲಿ ಸ್ಪರ್ಧೆ ಮಾಡಲು ರಾಜಕೀಯ ಪ್ರಭಾವ ಬೆಳೆಸಿಕೊಂಡಿದ್ದ ಗ್ರಾಮಗಳು ಸ್ಪರ್ಧಾಕಾಂಕ್ಷಿಗಳ ಕೈತಪ್ಪಿದಂತಾಗಿದೆ. ಇದು ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next