Advertisement

ಭೌತಿಕ ತರಗತಿ: ಮಿಶ್ರ ಪ್ರತಿಕ್ರಿಯೆ

12:04 AM Sep 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪ್ರೌಢಶಾಲೆ ಹಾಗೂ ಪಿಯು ತರಗತಿಗೆ ಭೌತಿಕ ತರಗತಿ ಆರಂಭವಾದ ಬಳಿಕ ಪ್ರೌಢಶಾಲೆಯಲ್ಲಿ ಹಾಜರಾತಿ ಹೆಚ್ಚುತ್ತಿದ್ದು, ದ್ವಿತೀಯ ಪಿಯುಸಿಯಲ್ಲಿ ಹಾಜರಾತಿ  ಏರಿಕೆಯಾಗುತ್ತಿಲ್ಲ.

Advertisement

ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ 9ನೇ ತರಗತಿಗೆ ಈ ಬಾರಿ 8.81 ಲಕ್ಷ ಮಕ್ಕಳು ದಾಖಲಾಗಿದ್ದು, ಈ ಪೈಕಿ 5.68 ಲಕ್ಷಕ್ಕೂ ಹೆಚ್ಚು ಮಕ್ಕಳು ಭೌತಿಕ ತರಗತಿಗೆ ಹಾಜರಾಗುತ್ತಿದ್ದಾರೆ. 10ನೇ ತರಗತಿಗೆ 8.78 ಲಕ್ಷ ಮಕ್ಕಳು ದಾಖಲಾಗಿದ್ದು ಇದರಲ್ಲಿ 5.78 ಲಕ್ಷ ಮಕ್ಕಳು ಶಾಲೆಗಳಿಗೆ ಹಾಜರಾಗು ತ್ತಿದ್ದಾರೆ. ಕೆಲವು ಶಾಲೆಗಳು ಇನ್ನೂ ಭೌತಿಕ ತರಗತಿ ಆರಂಭಿಸದೇ ಇರುವುದ ರಿಂದ ಆನ್‌ಲೈನ್‌ ತರಗತಿಯೇ ಮುಂದುವರಿಯುತ್ತಿದ್ದು, ಈ ಪ್ರಮಾಣ ಶೇ.33ರಷ್ಟಿದೆ ಎಂದು  ತಿಳಿದು ಬಂದಿದೆ.

ಪಿಯು ಕಾಲೇಜುಗಳಲ್ಲಿ ಭೌತಿಕ ತರಗತಿಗೆ ಹಾಜರಾತಿ ಏರುತ್ತಿಲ್ಲ. ಕಾಲೇಜು ಆರಂಭದ ದಿನದಲ್ಲಿ ಎಷ್ಟಿದೆಯೋ, ಈಗಲೂ ಅಷ್ಟೇ ಇದೆ. ಆರಂಭದ ದಿನಗಳಲ್ಲಿ ಶೇ.35ರಷ್ಟು ಇದ್ದ ಹಾಜರಾತಿ 10 ದಿನಗಳ ಬಳಿಕ ಶೇ.38ಕ್ಕೆ ಏರಿದೆ. ಕೇವಲ ಶೇ.3ರಷ್ಟು ಮಾತ್ರ ಹೆಚ್ಚಳವಾಗಿರುವುದು ಪಿಯು ಇಲಾಖೆ ನೀಡಿರುವ ಅಂಕಿ ಅಂಶಗಳಲ್ಲಿ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next