Advertisement

ದೆಹಲಿ ಗಲಭೆ: ನಾಪತ್ತೆಯಾಗಿದ್ದ ಶಾಲಾ ಬಾಲಕಿ ನಾಲ್ಕು ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆ

10:08 AM Feb 29, 2020 | Hari Prasad |

ನವದೆಹಲಿ: ಕಳೆದ ಆದಿತ್ಯವಾರದಂದು  ದೆಹಲಿಯ ವಿವಿಧ ಪ್ರದೇಶಗಳಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಸಂದರ್ಭದಲ್ಲಿ ನಾಪತ್ತೆಯಾಗಿದ್ದ 13 ವರ್ಷದ ಶಾಲಾ ಬಾಲಕಿಯೊಬ್ಬಳು ಇಂದು ಪತ್ತೆಯಾಗಿದ್ದು ಸುರಕ್ಷಿತವಾಗಿ ಹೆತ್ತವರನ್ನು ಸೇರಿಕೊಂಡಿದ್ದಾಳೆ.

Advertisement

ಇಲ್ಲಿನ ಖಜೂರಿ ಖಾಸ್ ಪ್ರದೇಶದಲ್ಲಿ ವಾಸಿಸುತ್ತಿರುವ ಬಟ್ಟೆ ವ್ಯಾಪಾರಿಯೊಬ್ಬರ 13 ವರ್ಷದ ಮಗಳು ಸೋಮವಾರದಂದು ಪರೀಕ್ಷೆ ಬರೆಯಲೆಂದು ಶಾಲೆಗೆ ಹೋಗಿದ್ದಳು. ಬಳಿಕ ಅದೇ ದಿನ ಸಾಯಂಕಾಲ 5.20ರ ಸುಮಾರಿಗೆ ಆಕೆಯನ್ನು ಶಾಲೆಯಿಂದ ಮನೆಗೆ ಕರೆತರಲು ಹೊರಟಿದ್ದ ಬಾಲಕಿಯ ತಂದೆ ನಗರದಲ್ಲಿ ಭುಗಿಲೆದ್ದಿದ್ದ ಗಲಭೆಯಲ್ಲಿ ಸಿಲುಕಿಕೊಂಡು ಶಾಲೆಗೆ ತೆರಳಲು ಸಾಧ್ಯವಾಗಿರಲಿಲ್ಲ.

ಅಂದಿನಿಂದ ಈ ಬಾಲಕಿಯ ಸುಳಿವು ಮನೆಯವರಿಗೆ ಲಭ್ಯವಾಗಿರಲಿಲ್ಲ. ಆದರೆ ಶುಕ್ರವಾರ ಆ ಬಾಲಕಿ ಮತ್ತೆ ತನ್ನ ಮನೆ ಸೇರಿಕೊಂಡಿರುವ ಮಾಹಿತಿಯನ್ನು ಆಕೆಯ ತಂದೆ ಪಿಟಿಐ ಸುದ್ದಿ ಮಾಧ್ಯಮಕ್ಕೆ ನೀಡಿದ್ದಾರೆ. ಆದರೆ ಈ ನಾಲ್ಕು ದಿನ ಆಕೆ ಎಲ್ಲಿದ್ದಳು ಮತ್ತು ಇಂದು ಮರಳಿ ಹೇಗೆ ತನ್ನ ಹೆತ್ತವರ ಬಳಿಗೆ ಬಂದಳು ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

‘ಹುಡುಗಿ ಇವತ್ತು ಪತ್ತೆಯಾಗಿದ್ದಾಳೆ ಮತ್ತು ಆಕೆ ಸುರಕ್ಷಿತವಾಗಿದ್ದಾಳೆ ಮತ್ತು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವುದಕ್ಕಾಗಿ ಆಕೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next