ಹೊಸದಿಲ್ಲಿ : 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ದಿಲ್ಲಿಯ ಮೂಯರ್ ವಿಹಾರ್ ನ ಶಾಲೆಯೊಂದರ ಇಬ್ಬರು ಶಿಕ್ಷಕರು ಮತ್ತು ಪ್ರಾಂಶುಪಾಲರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ತಡರಾತ್ರಿ ಈ ಎಫ್ಐಆರ್ ದಾಖಲಾಗಿದೆ. ಆರೋಪಿ ಶಿಕ್ಷಕರಲ್ಲಿ ಒಬ್ಟಾತನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದೇ ಆಕೆಯ ಆತ್ಮಹತ್ಯೆಗೆ ಕಾರಣವೆಂದು ವಿದ್ಯಾರ್ಥಿನಿಯ ಹೆತ್ತವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕಿಯು ನೋಯ್ಡಾದ ಸೆಕ್ಟರ್ 52ರ ನಿವಾಸಿಯಾಗಿದ್ದಾಳೆ. ಆಕೆ ಒಬ್ಬ ಪ್ರತಿಭಾವಂತೆ ನೃತ್ಯಗಾತಿಯಾಗಿದ್ದಳು. ಶಾಲೆಯ ಒಬ್ಬ ಶಿಕ್ಷಕ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟದ್ದಲ್ಲದೆ ಆ ಬಗ್ಗೆ ಯಾರಲ್ಲಾದರೂ ಹೇಳಿದರೆ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಆಕೆಗೆ ಬೆದರಿಕೆ ಹಾಕಿದ್ದ. ಕೊನೆಗೂ ಆತ ಆಕೆಯನ್ನು ಎಸ್‌ಎಸ್‌ಟಿ ಪರೀಕ್ಷೆಯಲ್ಲಿ ಫೇಲ್ ಮಾಡಿದ್ದ. ಆಮೂಲಕ ಆತನೇ ಆಕೆಯನ್ನು ಕೊಂದು ಎಂದು ಹೆತವರು ದೂರಿದ್ದಾರೆ.
ಕಳೆದ ಮಾರ್ಚ್ 16ರಂದು ಶಾಲೆಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿತ್ತು. ಎರಡು ವಿಷಯಗಳಲ್ಲಿ ತಾನು ಫೇಲ್ ಆಗಿರುವುದಕ್ಕೆ ತೀವ್ರವಾಗಿ ನೊಂದ ವಿದ್ಯಾರ್ಥಿನಿಯು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಳು.
ನೋಯ್ಡಾ ಪೊಲೀಸರು ವಿದ್ಯಾರ್ಥಿನಿಯ ಆತ್ಮಹತ್ಯೆ ಬಗ್ಗೆ ಆಕೆಯ ಹೆತ್ತವರು ಕೊಟ್ಟಿರುವ ದೂರಿನ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಮತ್ತು ಐಪಿಸಿ ಸೆ.306 ಮತ್ತು 506ರ ಪ್ರಕಾರ ಕàಸು ದಾಖಲಿಸಿಕೊಂಡಿದ್ದಾರೆ.