Advertisement

ಹೋಳಿ ವೇಳೆ ಶಿರಹಟ್ಟಿಯಲ್ಲಿ ಗುಂಪು ಘರ್ಷಣೆ;ನಾಲ್ವರಿಗೆ ಗಾಯ

10:22 AM Mar 01, 2018 | |

 ಶಿರಹಟ್ಟಿ: ಇಲ್ಲಿನ ಯಳವಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ಹೋಳಿ ಹುಣ್ಣಿಮೆಯ ಕಾಮ ದಹನದ ವಿಚಾರದಲ್ಲಿ  ಒಂದೇ ಜನಾಂಗದ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು ದಿವ್ಯಾಂಗ ಮಹಿಳೆ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ರಾಜಕೀಯ ವೈಷಮ್ಯ ಹಿನ್ನಲೆಯಲ್ಲಿ ಮಾರಾಮಾರಿ ನಡೆದಿದ್ದು, ಸಾವಮ್ಮ ಎಂಬ ದಿವ್ಯಾಂಗ ಮಹಿಳೆಯೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಫ‌ಕೀರಪ್ಪ ಮತ್ತು ಬಸವಣ್ಣಪ್ಪ ಎನ್ನುವವರ ಕುಟುಂಬದ ನಡುವೆ ಪಂಚಾಯತ್‌ ಚುನಾವಣೆಗೆ ಸಂಬಂಧಿಸಿದ ದ್ವೇಷವೇ ಈ ಮಾರಾಮಾರಿಗೆ ಕಾರಣ ಎನ್ನಲಾಗಿದೆ. 

ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next