Advertisement
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದಿರುವ ಕೋಮು ಗಲಭೆ ಪ್ರಕರಣಗಳಲ್ಲಿ 36 ಕೇಸ್‌ಗಳು ಇನ್ನೂ ತನಿಖಾ ಹಂತದಲ್ಲಿದ್ದರೆ, 14 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿ ಕೋರ್ಟ್‌ನಲ್ಲಿ ವಿಚಾರಣ ಹಂತದಲ್ಲಿದೆ.
Related Articles
ತನಿಖಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾಕ್ಷ éಗಳ ಕೊರತೆಯಿಂದ ಶೇ. 65ರಷ್ಟು ಕೇಸ್‌ಗಳು ವಜಾ ಆಗುತ್ತಿವೆ. ಆರೋಪಿಗಳು ಬೇರೆ ವ್ಯಕ್ತಿಯಿಂದ ತಮ್ಮ ಪರ ಸಾಕ್ಷ್ಯ ಹೇಳಿಸಿ ಗೊಂದಲ ಸೃಷ್ಟಿಸುವುದು. ಸಾಕ್ಷಿದಾರರು ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಸಾಕ್ಷಿ ನುಡಿಯದಿರುವುದು. ವಿಳಾಸ ಪೂರ್ಣವಾಗಿಲ್ಲದ ಕಾರಣ ಆರೋಪಿತರ ಮೇಲೆ ಸಮನ್ಸ್ ಜಾರಿಯಾಗುತ್ತಿಲ್ಲ ಎನ್ನುವ ವರದಿ ಆಧರಿಸಿ ಕೇಸ್ ಖುಲಾಸೆ ಆಗುತ್ತಿದೆ ಎಂದು ಹೇಳಲಾಗಿದೆ.
Advertisement
ಮಂಗಳೂರು 2ನೇ ಸ್ಥಾನದಲ್ಲಿರಾಜ್ಯದಲ್ಲಿ ಮೂರು ವರ್ಷಗಳಲ್ಲಿ ನಡೆದಿರುವ ಕೋಮು ಸಂಘರ್ಷಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ 12 ಕೇಸ್ ದಾಖಲಾಗಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡದಲ್ಲಿ 11 ಪ್ರಕರಣ ದಾಖಲಾಗಿದ್ದು, 2ನೇ ಸ್ಥಾನದಲ್ಲಿದೆ. ಹಾವೇರಿ, ಬಾಗಲಕೋಟೆಯಲ್ಲಿ ತಲಾ 10 ಕೇಸ್ ದಾಖಲಾಗಿದ್ದು, ಅನಂತರದ ಸ್ಥಾನದಲ್ಲಿದೆ.