ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಅನ್ವಯ ಮೀಸಲಾತಿ ಘೋಷಿಸಿದ್ದೇವೆ. ಅಂತಿಮ ವರದಿಯಿಂದ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಹಿಂದುಳಿದ ವರ್ಗಗಳಿಗೆ ಅನೇಕ ವರ್ಷಗಳಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿನ್ನಡೆಯಾಗಿತ್ತು. ಅವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮೀಸಲಾತಿ ಘೋಷಣೆ ಮಾಡಿದ್ದೇವೆ. ಈಗಿರುವ ಹಿಂದುಳಿದ ವರ್ಗಗಳ ಮೀಸಲಾತಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದನ್ನು ಮಾಡಲು ಸಾಧ್ಯವಾಗಿಲ್ಲ. ನಾವು ಮಾಡಿದ್ದಕ್ಕೆ ಅವರಿಗೆ ಸಮಸ್ಯೆಯಾಗಿದೆ ಎಂದರು.
ಇದನ್ನೂ ಓದಿ:ಹೊಸ ವರ್ಷಾಚರಣೆ: ಶನಿವಾರ ಸ್ವಿಗ್ಗಿ ವಿತರಿಸಿದ್ದು ಬರೋಬ್ಬರಿ 3.5 ಲಕ್ಷ ಬಿರಿಯಾನಿ ಆರ್ಡರ್!
ಮಹಾದಾಯಿ ಯೋಜನೆಯ ಡಿಪಿಆರ್ ಗೆ ಕೇಂದ್ರ ಸರಕಾರ ಅನುಮತಿ ನೀಡಿರುವ ಪ್ರತಿಯ ಕೊನೆಯಲ್ಲಿ ಸಹಿ ಮತ್ತು ದಿನಾಂಕವಿದೆ. ಕಾಂಗ್ರೆಸ್ ಮುಖಂಡರು ಅದನ್ನು ಪೂರ್ಣ ಓದಿಲ್ಲ ಎನ್ನುವುದು ಸ್ಪಷ್ಟ ಎಂದು ವ್ಯಂಗ್ಯವಾಡಿದರು.
ಮಹಾದಾಯಿ ವಿಷಯಕ್ಕಾಗಿ ನಾವು ಮತ್ತು ಕಾಂಗ್ರೆಸ್ 25 ವರ್ಷಗಳಿಂದ ಹೋರಾಟ ನಡೆಸಿದ್ದೇವು. ಅಷ್ಟು ವರ್ಷಗಳ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಪ್ರತಿಯೊಂದರಲ್ಲೂ ಲೋಪ ಹುಡುಕುವುದು ಅವರ ಮನಸ್ಥಿತಿ. ಅವರ ಟೀಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮದಾರಿ ಸ್ಪಷ್ಟವಾಗಿದ್ದು, ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಎಂದರು.